ಕೃಷಿಯಲ್ಲಿ ವೈಜ್ಞಾನಿಕ ಮಾದರಿ ಅನಿವಾರ್ಯ
Team Udayavani, Sep 24, 2022, 2:52 PM IST
ರಾಮನಗರ: ಹೈನುಗಾರಿಕೆ ಹಾಗೂ ಅಣಬೆ ಬೇಸಾಯ ಎರಡು ಸಹ ಲಾಭದಾಯಕ ಉದ್ಯಮಗಳಾಗಿದೆ. ಕೃಷಿಗೆ ಪೂರಕವಾದ ಚಟುವಟಿಕೆಗಳಾಗಿವೆ. ವ್ಯವಸಾಯದ ಜೊತೆಗೆ ಇಂತಹ ಉಪಕಸುಬುಗಳು ಆರ್ಥಿಕ ಮಟ್ಟವನ್ನು ಹೆಚ್ಚಿಸುವತ್ತ ಶ್ರಮಿಸುತ್ತಿವೆ. ಪರಂಪರೆಯಿಂದಲೂ ನಮ್ಮಲ್ಲಿ ಇಂತಹ ಉಪಕಸುಬುಗಳನ್ನು ಮಾಡುತ್ತಿದ್ದರು ವೈಜ್ಞಾನಿಕ ಮಾದರಿಯಲ್ಲಿ ಮಾಡುವುದು ಅನಿವಾರ್ಯವಾಗಿದೆ ಎಂದು ರಾಮನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ್ ಪ್ರಭು ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ನಡೆದ ತರಬೇತಿ ಶಿಬಿರಗಳ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂತಹ ತರಬೇತಿಗಳ ಅವಶ್ಯವಿದೆ. ತರಬೇತಿ ನಂತರ ಈ ವಿಧಾನಗಳನ್ನು ಅಳವಡಿಸಿಕೊಂಡು ಆಧುನೀಕರಣದತ್ತ ಹೆಜ್ಜೆ ಹಾಕಬೇಕು ಎಂದರು.
ಎಲ್ಲಾ ಸೌಲಭ್ಯ ಬಳಸಿಕೊಳ್ಳಿ: ನಬಾರ್ಡ್‌ನ ಡಿಡಿಎಂ ಹರ್ಷಿತ ಮಾತನಾಡಿ, ನಮ್ಮ ನಬಾರ್ಡ್ ಇರುವುದೇ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ, ನಬಾರ್ಡ್‌ನಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಗೆ ಪೂರಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ನಬಾರ್ಡ್, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಅಣಬೆ ಬೇಸಾಯ ಇಂತಹ ಎಲ್ಲಾ ಚಟುವಟಿಕೆಗಳಿಗೂ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡುತ್ತಿದೆ. ಆದರೆ, ನಮ್ಮ ರೈತರಿಗೆ ಇದರ ಮಾಹಿತಿಯ ಕೊರತೆಯಿದ್ದು, ಉತ್ತಮ ಮಾಹಿತಿ ಪಡೆದು ಎಲ್ಲಾ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಚಟುವಟಿಕೆ ನಾಶವಾಗದ ಉದ್ಯಮ: ಜೋಗರದೊಡ್ಡಿ ಕರಕುಶಲ ತರಬೇತಿ ಸಂಸ್ಥೆ ನಿರ್ದೇಶಕ ವಿಠ್ಠಲ್ ಗೌರಿ ಮಾತನಾಡಿ, ಎಂದಿಗೂ ನಾಶವಾಗದ ಉದ್ಯಮಗಳೆಂದರೆ ಅದು ಕೃಷಿ ಪೂರಕ ಚಟುವಟಿಕೆಗಳು. ಆಧುನಿಕ ಮಾದರಿಯಲ್ಲಿ ಇಂತಹ ಚಟುವಟಿಕೆ ಕೈಗೊಂಡು ಉತ್ತಮ ಲಾಭಗಳಿಸಿ ಎಂದು ಹಾರೈಸಿದರು.
ಜೀವನ ಮಟ್ಟ ಸುಧಾರಿಸಿಕೊಳ್ಳಿ: ಸಂಸ್ಥೆ ನಿರ್ದೇಶಕ ಸ್ವಾಮಿ.ಎಂ.ಎಸ್ ಮಾತನಾಡಿ, ತರಬೇತಿಯಲ್ಲಿ ಕಲಿತ ವಿಷಯಗಳನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ. ಬ್ಯಾಂಕಿನ ವಿಚಾರವಾಗಿ ಪೂರ್ವಗ್ರಹಪೀಡಿತರಾಗಬಾರದು. ಕಲ್ಪನೆಗಿಂತ ವಾಸ್ತವದ ಅನುಭವವಾಗಬೇಕು. ತಮ್ಮೆಲ್ಲರಿಗೂ ಸಂಸ್ಥೆ ಸಹಕಾರ ಯಾವಾಗಲೂ ಇರುತ್ತದೆ. ಬ್ಯಾಂಕಿನಲ್ಲಿ ಲಭ್ಯವಿರುವ ವಿಮೆ ಯೋಜನೆಗಳನ್ನು ಸೂಕ್ತ ಸಮಯಕ್ಕೆ ಮಾಡಿಸಿ, ನಮ್ಮ ಅವಲಂಬಿತರಿಗೆ ನಮ್ಮಿಂದ ಒಂದು ಕೊಡುಗೆಯನ್ನು ಕೊಟ್ಟಂತಾಗುತ್ತದೆ. ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಉಪನ್ಯಾಸಕರಾದ ದೇವೇಂದ್ರಪ್ಪ, ನೇತ್ರಾವತಿ, ಕನಕಾಂಬರಿ ಮಹಿಳಾ ಒಕ್ಕೂಟದ ಗಂಗಮ್ಮ, ಕವಿತ, ಕಾಂತಮ್ಮ ಧಾನ್ ಫೌಂಡೇಷನ್‌ನ ವರಲಕ್ಷ್ಮೀ, ಹುಲಿಬೆಲೆ ಹಾಲಿನ ಡೇರಿ ಸೆಕ್ರೆಟರಿ ಚಲುವರಾಜು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.