Shivamogga; ಲಿಂಗನಮಕ್ಕಿಯಲ್ಲಿ ಭಾರೀ ಒಳಹರಿವು: ಗಂಗೆ ಪೂಜೆ
ಅತಿ ಕಡಿಮೆ ವೆಚ್ಚದಲ್ಲಿ ಜಲ ವಿದ್ಯುತ್ ಪೂರೈಸುವ ಏಕೈಕ ಜಲಾಶಯ
Team Udayavani, Jul 26, 2024, 5:11 PM IST
ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಒಳಹರಿವು ಬರುತ್ತಿದ್ದು 1804.80 ಅಡಿಗೆ ತಲುಪಿದೆ. ಜಲಾಶಯ ನೀರಿನ ಮಟ್ಟವು ಈಗಾಗಲೇ ಗೇಟ್ ಮಟ್ಟ ತಲುಪಿದ್ದು ಸಂಪ್ರದಾಯದಂತೆ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಶುಕ್ರವಾರ ಗಂಗೆ ಪೂಜೆ ನೆರವೇರಿಸಿದರು. ನಂತರ ಕೆಲ ನಿಮಿಷಗಳ ಕಾಲ ಗೇಟ್ ಮೂಲಕ ನೀರು ಹೊರಬಿಡಲಾಯಿತು.
ರಾಜ್ಯಕ್ಕೆ ಅತಿ ಕಡಿಮೆ ವೆಚ್ಚದಲ್ಲಿ ಜಲ ವಿದ್ಯುತ್ ಪೂರೈಸುವ ಏಕೈಕ ಜಲಾಶಯ ಇದಾಗಿದ್ದು ಶುಕ್ರವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ 1804.40 ಅಡಿ ತಲುಪಿತ್ತು. ಪ್ರತಿ ವರ್ಷ 1790 ಅಡಿ ದಾಟಿದ ಮೇಲೆ ವಾಡಿಕೆಯಂತೆ ಪೂಜೆ ನಡೆಸಲಾಗುತ್ತದೆ. 1790 ಅಡಿ ದಾಟಿದ ನಂತರ ನೀರು ಗೇಟ್ ಮಟ್ಟಕ್ಕೆ ತಲುಪುತ್ತದೆ. ಈ ವೇಳೆ ಪೂಜೆ ಸಲ್ಲಿಸಿ ಕೆಲ ನಿಮಿಷ ಗೇಟ್ ತೆರೆದು ನೀರು ಹೊರಬಿಡಲಾಗುತ್ತದೆ. ಜಲಾಶಯ ಅರ್ಧ ಭರ್ತಿಯಾದರೂ ವರ್ಷ ಪೂರ್ತಿ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಬಾರಿ ಪೂರ್ಣ ಭರ್ತಿಯಾಗುವ ಭರವಸೆ ಇದ್ದು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.