ಅಜ್ಞಾನ, ಅಂಧಕಾರ, ಪಾಪವನ್ನು ತೊಡೆಯುವ ಆಚರಣೆ ಶಿವರಾತ್ರಿ
Team Udayavani, Mar 5, 2019, 7:45 AM IST
ರಾಮನಗರ: ಮಹಾಶಿವರಾತ್ರಿ ಎನ್ನುವುದು ಅಜ್ಞಾನ, ಅಂಧಕಾರ, ಪಾಪವನ್ನು ತೊಡೆಯುವ ಆಚರಣೆ ಎಂದು ತಾಲೂಕಿನ ಅವ್ವೆರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠದ ಬಸವಲಿಂಗರಾಜ ಶಿವಾಚಾರ್ಯಹೇಳಿದರು.
ತಾಲೂಕಿನ ಅವ್ವೆರಹಳ್ಳಿಯ ಎಸ್.ಆರ್.ಎಸ್. ಕ್ಷೇತ್ರದ ದಾಸೋಹ ಮಠದ ಆವರಣದಲ್ಲಿರುವ ಶ್ರೀ ರೇಣುಕಾಚಾರ್ಯ ಪ್ರತಿಮೆ ಎದರು ಶಾಂತಲಾ ಚಾರಿಟಬಲ್ ಟ್ರಸ್ಟ್ ಶಿವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶಿವರಾತ್ರಿ ವೈಭವ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವನಿಗೂ ರಾತ್ರಿಗೂ ನಿಕಟ ಸಂಬಂಧವಿದೆ. ಒಂದು ರಾತ್ರಿಯು ಸಾಮಾನ್ಯವಾಗಿ ನಾವು ನೋಡುವ ರಾತ್ರಿ. ಆದರೆ ಮಹಾಶಿವರಾತ್ರಿ ಎನ್ನುವುದು ಅಜ್ಞಾನ, ಅಂಧಕಾರ, ಪಾಪವನ್ನು ತೊಡೆಯುವ ಪವಿತ್ರವಾದ ರಾತ್ರಿ. ಅಜ್ಞಾನವೇ ರಾತ್ರಿ ಎಂಬ ಸಂದೇಶವನ್ನು ಈ ಆಚರಣೆ ಸಾರುತ್ತದೆ ಎಂದರು.
ಮಠದ ಕಿರಿಯ ಶ್ರೀಗಳಾದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭಾರತ ಹಲವು ಹಬ್ಬ ಆಚರಣೆಗಳ ತವರೂರು. ವಿವಿಧ ದೇವರುಗಳನ್ನು ಪೂಜಿಸುವ ಇಲ್ಲಿ ಶ್ರೀಮಂತವಾದ ಪುರಾಣಕತೆಗಳಿವೆ. ಪ್ರತಿಯೊಂದು ಆಚರಣೆಯ ಹಿಂದೆಯೂ ಅದರದ್ದೇ ಆದ ಇತಿಹಾಸ, ನಂಬಿಕೆ ಮತ್ತು ಮಹತ್ವವಿದೆ.
ದೇವರ ಜತೆಗೆ ಪ್ರಕೃತಿಯನ್ನೂ ಆರಾಧಿಸುವ ನಾವು ಜಗತ್ತಿನಲ್ಲಾಗುವ ಬದಲಾವಣೆಗೆ ನಮ್ಮದೇ ಆದ ಕಾರಣಗಳನ್ನೂ ಕೊಡುತ್ತೇವೆ ಎಂದು ತಿಳಿಸಿದರು. ಶಿವರಾತ್ರಿಗೂ ವಿಜ್ಞಾನಕ್ಕೂ ಸಂಬಂಧವಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭಗೊಳ್ಳುತ್ತದೆ.
ಅಂದರೆ ಈ ದಿನದಂದು ಚಳಿ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿದೆ. ಪ್ರಕೃತಿಯಲ್ಲಿ ವ್ಯತ್ಯಯಾಗುವ ಸಮಯದಲ್ಲಿ ನಮ್ಮ ದೇಹದಲ್ಲೂ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ ಬರುವುದು.
ಹಾಗಾಗಿ ಇಂಥ ಸಂದರ್ಭದಲ್ಲಿ ಬರುವ ಶಿವರಾತ್ರಿಯಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತವಾಗಿದೆ ಎಂದು ಶಿವರಾತ್ರಿ ಆಚರಣೆಯ ಹಿಂದಿನ ವೈಜ್ಞಾನಿಕ ಮಹತ್ವವನ್ನು ತಿಳಿಸಿದರು. ಇದೇ ವೇಳೆ ಇಷ್ಟಲಿಂಗ ತಯಾರಕರಾದ ಮಹದೇವಸ್ವಾಮಿ, ಶಿವಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು.
ನೃತ್ಯ ಕಲಾವಿದೆ ಚಿತ್ರರಾವ್ ಮತ್ತು ತಂಡ ಹಾಗೂ ಶಾಂತಲಾ ಕಲಾ ಕೇಂದ್ರದ ಮಕ್ಕಳು ನೃತ್ಯ ಮತ್ತು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಕೆ.ಎಸ್. ಧನಂಜಯ, ಶಿಕ್ಷಕರಾದ ನೇ. ರ. ಪ್ರಭಾಕರ್, ಎಂ.ಎಸ್. ಚನ್ನವೀರಪ್ಪ, ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕಿ ಕವಿತಾರಾವ್, ಗಾಯಕ ಮಲ್ಲಪ್ಪ, ಬಿ.ಟಿ. ರಾಜೇಂದ್ರ, ನೃತ್ಯ ನಿರ್ದೇಶಕ ರೇಣುಕಾಪ್ರಸಾದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.