![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 9, 2023, 2:26 PM IST
ಮಾಗಡಿ: ಮಾಜಿ ಸಚಿವ ಎಚ್.ಎಂ.ರೇವಣ್ಣ ಸಿಹಿ ಕುಂಬಳಕಾಯಿ ಬೆಳೆದು ಕೃಷಿಯಲ್ಲಿಯೂ ಸೈ ಎನಿಸಿ ಕೊಂಡಿದ್ದಾರೆ. ರೇವಣ್ಣ ಬರೀ ರಾಜಕಾರಿಣಿಯಲ್ಲ, ರೈತರೂ ಆಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾಪಟುವೂ ಆಗಿದ್ದರು. ಸುಮಾರು 45 ವರ್ಷಗಳ ಸುದೀರ್ಘ ರಾಜಕಾರಣದ ಮಾಡಿಕೊಂಡು ಬಂದಿರುವ ಮಾಜಿ ಸಚಿವ ಎಚ್.ಎಂ.ರೇವಣ್ಣ ದಿನನಿತ್ಯದ ರಾಜಕೀಯ ಜಂಜಾಟದಲ್ಲಿ ಕೆಲ ಸಮಯ ವನ್ನು ಕೃಷಿ ಚುಟುವಟಿಕೆಗೆ ಮೀಸಲಿಟ್ಟು, ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಹೀಗಾಗಿ ಬರಗಾಲದಲ್ಲಿ ಸಿಹಿ ಕುಂಬಳಕಾಯಿ ಬೆಳೆದಿದ್ದಾರೆ.
ಕೃಷಿ ಬೇಸಾಯದಲ್ಲಿಯೂ ಸಾಧನೆ: ಮಾಗಡಿ ತಾಲೂಕಿನ ಗುಡ್ಡಹಳ್ಳಿ ಗ್ರಾಮದ ನಿವಾಸಿ ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ ಅವರು ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ಮನೆಗೆ ಹೋದಾಗಲೆಲ್ಲ. ನಾನು ಕುಂಬಳ ಕಾಯಿ ಬೆಳೆದು ಬದುಕು ಕಟ್ಟಿಕೊಂಡಿದ್ದೇನೆ ಎನ್ನುತ್ತಿದ್ದರು. ಮಾಜಿ ಸಚಿವ ಎಚ್. ಎಂ. ರೇವಣ್ಣ ಅವರಿಗೆ ಪ್ರೇರೇಪಿಸಿ ನಿಮ್ಮ ಭೂಮಿಯಲ್ಲಿ ಕುಂಬಳಕಾಯಿ ಬೆಳೆಯಬಹುದು ಎಂದು ಆಗಾಗ್ಗೆ ಹೇಳು ತ್ತಿದ್ದರು. ಮಾರುಕಟ್ಟೆ ಮಾಡುವುದು ಹೇಗೆ ಎಂಬುದನ್ನು ಸಹ ತಿಳಿಸುತ್ತಿದ್ದರು. ಸರ್ಕಾರಿ ಜೀಪ್ ಡ್ರೈವರ್ ಮಗನಾಗಿ ರಾಜಕಾರಣದಲ್ಲಿ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಎಚ್.ಎಂ.ರೇವಣ್ಣ ಬೆಳೆದಿದ್ದಾರೆ ಎಂದರೆ ಕೃಷಿ ಬೇಸಾಯದಲ್ಲಿಯೂ ಸಾಧನೆ ಮಾಡಿ ತೋರಿಸಿದ್ದಾರೆ.
ಪಿತೃಪಕ್ಷ ಆಚರಣೆ ಹಿನ್ನೆಲೆ ಕುಂಬಳಕಾಯಿಗೆ ಬಹಳ ಬೇಡಿಕೆ: ಹೀಗಾಗಿ ನಾನೂ ಕೂಡ ಇರುವ ಸುಮಾರು 8 ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೀಜ ಬಿತ್ತಿ ಬೆಳೆಯೋಣ ಚಿಂತಿಸಿದರು. ಗಂಗಣ್ಣ ಅವರ ಪ್ರೇರಣೆಯಂತೆ ಮಾಗಡಿಯಲ್ಲಿರುವ ತಮ್ಮ ತೋಟದ ಮನೆಯಂಗಳದ ಅಡಿಕೆ ತೋಟದಲ್ಲಿ ಕುಂಬಳಕಾಯಿ ಬೀಜ ಬಿತ್ತನೆ ಮಾಡಿಸಿದರು. ಆಗಾಗ್ಗೆ ಬೀಳುವ ಮಳೆಗೆ ಕುಂಬಳಗಿಡ ಬೆಳೆದು ಉತ್ತಮ ಇಳುವರಿ ಕೊಟ್ಟಿದ್ದು, 15 ಟನ್ ಕುಂಬಳಕಾಯಿ ಬೆಳೆದಿದ್ದಾರೆ. ಮಹಾಲಯ ಅಮಾವಾಸ್ಯೆ ಆಗಿರುವುದರಿಂದ ಎಲ್ಲೆಡೆ ಪಿತೃಪಕ್ಷ ಆಚರಣೆ ನಡೆಯುತ್ತಿದ್ದು, ಕುಂಬಳಕಾಯಿಗೆ ಬಹಳ ಬೇಡಿಕೆಯೂ ಬಂದಿದೆ. 5 ಟನ್ ಕುಂಬಳ ಕಾಯಿಯನ್ನು ಲಾಲ್‌ಬಾಗ್‌ಗೆ ಹಾಪ್ ಕಾಮ್ಸ್ ಗೆ ಮಾರಾಟ ಮಾಡಲಾಗಿದೆ. ಇನ್ನೂ ಕಾಯಿ ಕೀಳ ಬೇಕಿದೆ.ಬರಗಾಲದಲ್ಲಿ ಕುಂಬಳಕಾಯಿ ಬೆಳೆದು ಮಾಜಿ ಸಚಿವ ಎಚ್.ಎಂ.ರೇವಣ್ಣ ಸೈ ಎನಿಸಿ ಕೊಂಡಿದ್ದಾರೆ. ಇತರೆ ರೈತರಿಗೂ ಸ್ಫೂರ್ತಿಯಾಗಿದ್ದಾರೆ.
ಹೊಸಪೇಟೆ ಚಂದ್ರಯ್ಯ, ಕೆಂಚಪ್ಪ, ರಾಜಣ್ಣ, ನಾಗರಾಜು ಸೇರಿದಂತೆ ಇತರೆ ರೈತರು ಇದ್ದರು.
ಇತರೆ ರೈತರಿಗೂ ಸ್ಫೂರ್ತಿಯಾಗಿದ್ದಾರೆ: ರೈತ ಗಂಗಣ್ಣ: ಎಚ್.ಎಂ.ರೇವಣ್ಣ ಅವರ ಅಭಿಮಾನಿ ನಾನು ಅವರೊಂದಿಗೆ ಹೆಚ್ಚಿನ ಒಡನಾಡ ವಿಟ್ಟುತ್ತು. ಅವರು ರಾಜಕಾರಣದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆದಿದ್ದರೂ ಸಹ ಸ್ನೇಹಜೀವಿ ಎಚ್.ಎಂ.ರೇವಣ್ಣ ಅವರು ನಾನು ಎಲ್ಲೇ ಅವರಿಗೆ ಕಂಡರೂ ಕೂಗಿ ಮಾತನಾಡಿಸುವ ಗುಣ ಅವರದು. ಸಿಕ್ಕಾಗಲೆಲ್ಲ ಜಮೀನಿನಲ್ಲಿ ಏನು ಬೆಳೆ ಇಟ್ಟಿದ್ದೀಯಾ ಎಂದು ಯೋಗಕ್ಷೇಮ ವಿಚಾರಿ ಸುತ್ತಿದ್ದರು. ನಾನು ಕುಂಬಳಕಾಯಿ ಬೆಳೆದ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ ಎನ್ನುತ್ತಿದ್ದರು. ನೀವು ಬೆಳೆಯಬಹುದು ಎಂದು ರೇವಣ್ಣ ಅವರಿಗೆ ಆಗಾಗ್ಗೆ ಹೇಳುತ್ತಿದ್ದೆ. ರೇವಣ್ಣ ಅವರೀಗ ಕುಂಬಳಕಾಯಿ ಬೆಳೆದು ತೋರಿಸಿದ್ದಾರೆ. ಇತರೆ ರೈತರಿಗೂ ಸ್ಫೂರ್ತಿಯಾಗಿದ್ದಾರೆ. ನನಗೆ ಖುಷಿಯಾಗಿದೆ ಎಂದು ಪ್ರಗತಿ ಪರ ರೈತ ಕುಂಬಳಕಾಯಿ ಗಂಗಣ್ಣ ತಿಳಿಸಿದ್ದಾರೆ.
ಮಾಗಡಿ ಪಟ್ಟಣದ ಹೊಸಪೇಟೆ ರಸ್ತೆ ಬದಿ 8 ಎಕರೆ ಭೂಮಿಯಲ್ಲಿ 4 ಎಕರೆ ಅಡಕೆ ತೋಟ ಮಾಡಿಕೊಂಡಿದ್ದೇನೆ. ಅದರಲ್ಲಿ ಕಳೆ ತೆಗೆಸಿ, ಗೊಬ್ಬರ ಕೊಡಲಾಗುತ್ತಿತ್ತು. ಇದಕ್ಕೆ ಬಹು ತೇಕ ಖರ್ಚು ಬರುತ್ತಿತ್ತು. ಅಡಕೆ ತೋಟದಲ್ಲಿ ಕುಂಬಳಕಾಯಿ ಬೆಳೆದರೆ ಅದರ ತ್ಯಾಜ್ಯವೆಲ್ಲವೂ ಅಡಕೆ ತೋಟಕ್ಕೆ ಗೊಬ್ಬರವಾಗು ತ್ತದೆ ಎಂದು ಪ್ರಗತಿಪರ ರೈತ ಗಂಗಣ್ಣ ಅವರ ಪ್ರೇರಣೆಯಂತೆ ಕುಂಬಳಕಾಯಿ ಬೆಳೆದಿದ್ದೇನೆ. ಈಗ ಅದರ ತ್ಯಾಜ್ಯ ಅಡಕೆ ತೋಟಕ್ಕೆ ಗೊಬ್ಬರೂ ಆಗುತ್ತಿದೆ.-ಎಚ್.ಎಂ.ರೇವಣ್ಣ, ಮಾಜಿ ಸಚಿವ
-ತಿರುಮಲೆ ಶ್ರೀನಿವಾಸ್
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.