ಅರಣ್ಯ ಪ್ರದೇಶ, ಗೋಮಾಳದಲ್ಲಿ ನಿವೇಶನ

ಕನಕಪುರದಲ್ಲಿ ಕೆರೆ,ಕಟ್ಟೆ,ಬೆಟ್ಟ,ಗುಡ್ಡ ಎಲ್ಲವೂ ಮಾಯ: ರೈತ ಸಂಘ ಆರೋಪ

Team Udayavani, Nov 23, 2020, 4:04 PM IST

ಅರಣ್ಯ ಪ್ರದೇಶ, ಗೋಮಾಳದಲ್ಲಿ ನಿವೇಶನ

ರಾಮನಗರ: ಜಿಲ್ಲೆಯ ಕನಕಪುರ ತಾಲೂಕು ಕಸಬಾ ಹೋಬಳಿ, ರಾಯಸಂದ್ರ ಗ್ರಾಮದ ಸಮೀಪ ಸರ್ವೆ ಸಂಖ್ಯೆ 101/1 ರಲ್ಲಿ (ಗಂಗಾಧರನ ಗುಡ್ಡ ರಾಜ್ಯಅರಣ್ಯ ಪ್ರದೇಶ) ಕರ್ನಾಟಕ ಹೌಸಿಂಗ್‌ ಬೋರ್ಡ್‌ ವಿಂಗಡಿಸಿರುವ ನಿವೇಶನಕೊಳ್ಳುವ ನಾಗರೀಕರು ಎಚ್ಚರದಿಂದ ಇರಬೇಕು. ಕಾರಣ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ನಿವೇಶನ ವಿಂಗಡಿಸಲಾಗಿದೆ ಎಂದು ಕನಕಪುರದ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಸಂಪತ್‌, ರಾಯಸಂದ್ರ ಗ್ರಾಮದ ಬಳಿ ಕರ್ನಾಟಕ ಹೌಸಿಂಗ್‌ ಬೋರ್ಡ್‌ 164 ಎಕೆರೆ ಜಮೀನು ಖರೀದಿಸಿ ವಸತಿ ಬಡಾವಣೆ ನಿರ್ಮಿಸಿದೆ. ಗಂಗಾಧರನ ಗುಡ್ಡ ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ಅರಣ್ಯ ಪ್ರದೇಶದ ಬಫ‌ರ್‌ ಝೋನ್‌38.10ಎಕರೆ ಭೂಮಿಯೂ ಸೇರಿಕೊಂಡಿದೆ. ಅರಣ್ಯ ಇಲಾಖೆ 38.10 ಎಕರೆ ಭೂಮಿ ಬಫ‌ರ್‌ ಝೋನ್‌ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಅಲ್ಲಿ ಬಡಾವಣೆ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ.

ಪ್ರಭಾವಿ ರಾಜಕೀಯ ವ್ಯಕ್ತಿಯ ಕುತಂತ್ರ!: ಅರಣ್ಯ ಪ್ರದೇಶದ ಬಫ‌ರ್‌ ಜೋನ್‌ನಲ್ಲಿ ಹಲವಾರು ರೈತರು ಉಳುಮೆ ಮಾಡಿಕೊಂಡಿದ್ದರು. ಹೀಗಾಗಿ ಅವರಿಗೆ ಸಾಗುವಳಿ ಚೀಟಿ ಸಿಕ್ಕಿರಲಿಲ್ಲ. ಈ ಭೂಮಿಗೆ ಲಗತ್ತಾದ ಇತರ ಸರ್ವೆ ಸಂಖ್ಯೆಗಳಲ್ಲಿನ ಭೂಮಿಯನ್ನು ಹೌಸಿಂಗ್‌ ಬೋರ್ಡು ವಸತಿ ಬಡಾವಣೆ ನಿರ್ಮಿಸಲು ಭೂಸ್ವಾಧೀನಕ್ಕೆ ಮುಂದಾಗಿತ್ತು. ಸರ್ವೆ ಸಂಖ್ಯೆ 101/1ರ ಒಟ್ಟು ವಿಸ್ತೀರ್ಣ 249 ಎಕರೆ ಭೂಮಿ ಪೈಕಿ ಅರಣ್ಯ ಮತ್ತು ಗೋಮಾಳ ಪ್ರದೇಶವಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿಯ ಸದಸ್ಯೆಯೊಬ್ಬರ ಪತಿ ರಾಜಕೀಯ ಮುಖಂಡ ರವಿ ಎಂಬಾತ ಅರಣ್ಯ ಮತ್ತು ಗೋಮಾಳ ಭೂಮಿಗೆ ಅಕ್ರಮ ಮತ್ತು ಬೇನಾಮಿ ಹೆಸರಿನಲ್ಲಿ ಖಾತೆಗಳನ್ನು ಸೃಜಿಸಿಕೊಂಡು ಅದನ್ನು ಹೌಸಿಂಗ್‌ ಬೋರ್ಡ್‌ಗೆ ಮಾರಿ ಕೋಟ್ಯಂತರ ರೂ. ಲಪಟಾಯಿಸುವ ಹುನ್ನಾರ ನಡೆಸಿದ್ದಾರೆ. ಬಫ‌ರ್‌ ಜೋನ್‌ನಲ್ಲಿ ಉಳುಮೆ ಮಾಡುತ್ತಿದ್ದ ರೈತರ ಕೈಗೆ ಒಂದಿಷ್ಟು ದುಡ್ಡು ಕೊಟ್ಟು, ಸರ್ಕಾರಕ್ಕೆ ಹೋದರೆ ಇದು ಬರೋಲ್ಲ ಎಂದು ಹೆದರಿಸಿ ಅವರಿಗೆ ಸಲ್ಲಬೇಕಾದ ಪರಿಹಾರದ ಹಣವನ್ನು ತಾನೇ ಜೇಬಿಗಿಳಿಸಿಕೊಳ್ಳುವ ಕುತಂತ್ರ ಹೆಣೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪೂರ್ಣ ತನಿಖೆ ನಡೆಸಿದರೆ ಎಲ್ಲಾವಿಷಯಹೊರಗೆ ಬರುತ್ತೆ. ತಮಗೆ ಲಭ್ಯವಿರುವ ದಾಖಲೆಗಳನ್ನು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಕೊಟ್ಟರೂ ಉಪಯೋಗವಾಗಿಲ್ಲ ಎಂದು ಸಂಪತ್‌ ಬೇಸರ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ರೈತ ಮುಖಂಡ ಎಂ.ಡಿ.ಶಿವಕುಮಾರ್‌ ಮುಂತಾದವರು ಹಾಜರಿದ್ದರು.

ಗೃಹ ಮಂಡಳಿ, ಡೀಸಿಗೆ ಅರಣ್ಯ ಇಲಾಖೆ ಪತ್ರ :  ಗಂಗಾಧರನಗುಡ್ಡ ರಾಜ್ಯ ಅರಣ್ಯ ಪ್ರದೇÍ ‌¨ ‌ಬಫ‌ರ್‌ ಜೋನ್‌ ಸರ್ವೆ ಸಂಖ್ಯೆ392,356, 372,373, 325, ಮತ್ತು101ರ ಭಾಗಶಃ ವಿಸ್ತೀರ್ಣ ಹಾಗೂ ಸರ್ವೆ ಸಂಖ್ಯೆ357,371 ಮತ್ತು374ರ ವಿಸ್ತೀರ್ಣಗಳು ಸಂಪೂರ್ಣ ಗಂಗಾಧರನ ಗುಡ್ಡ ರಾಜ್ಯ ಗಡಿಯಿಂದ 100 ಮೀಟರ್‌ ಬಫ‌ರ್‌ ಜೋನ್‌ ಪ್ರದೇಶದಲ್ಲಿದೆ. ಅರಣ್ಯ ನಿಯಮ 1969 ‌ಕಲಂ41(2)ರ ಪ್ರಕಾರ ಭೂ ಮಂಜೂರಾತಿಯನ್ನು ಮಾಡಲು ಅವಕಾಶವಿಲ್ಲ, ಹೀಗಾಗಿ, ಯಾವುದೇ ಭೂ ಸ್ವಾಧೀನ ಕೈಗೊಳ್ಳಬಾರದು ಎಂದು ರಾಮನ‌ಗರ ಉಪ ‌ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ನಾಟಕ ಗೃಹ ಮಂಡಳಿಗೂ ಸೇರಿ ಜಿಲ್ಲಾಧಿಕಾರಿಗಳಿಗೂ ಕಳೆದ ಜುಲೈನಲ್ಲಿ ಲಿಖೀತವಾಗಿ ತಿಳಿಸಿದ್ದರೂ ಇಲ್ಲಿ ಬಡಾವಣೆ ನಿರ್ಮಾಣವಾಗಿದೆ ಎಂದು ಮತ್ತೂಬ್ಬ ಸಾರ್ವಜನಿಕ ‌ಮುಖಂಡ ರಾಜೇಶ್‌, ಅರಣ್ಯ ಇಲಾಖೆಯ ದಾಖಲೆಗಳನ್ನು ಪ್ರಸ್ತುತ ಪಡಿಸಿ ಮಾಹಿತಿ ನೀಡಿದರು.

ನಿವೇಶನಖರೀದಿಗೆ ಮುನ್ನ ಎಚ್ಚರವಿರಲಿ! : ಆರ್‌.ಟಿ.ಐ ಕಾರ್ಯಕರ್ತ ರಾಮಲಿಂಗಯ್ಯ ಮಾತನಾಡಿ, ಹೌಸಿಂಗ್‌ ಬೋರ್ಡ್‌ ನಿರ್ಮಿಸಿರುವ ಬಡಾವಣೆಯಲ್ಲಿ ಅರಣ್ಯ ಭೂಮಿ, ಗೋಮಾಳ ಸೇರಿದೆ. ಇದು ಎಂದಿದ್ದರೂ ತಕರಾರು ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ನಿವೇಶನ ಖರೀದಿಸುವವರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಉದ್ಘಾಟಿಸಲು ಸಿದ್ಧತೆ :  ರಾಯಸಂದ್ರ ಗ್ರಾಮದ ಬಳಿ ನಿರ್ಮಿಸಿರುವ ಹೌಸಿಂಗ್‌ ಬೋರ್ಡ್‌ ವಸತಿ ಬಡಾವಣೆಯನ್ನುಉದ್ಘಾಟಿಸಿಲು ವಸತಿ ಸಚಿವ ಸೋಮಣ್ಣ ಸದ್ಯದಲ್ಲೇ ಭೇಟಿ ನೀಡಲಿದ್ದಾರೆ. ಅಕ್ರಮಗಳ ಬಗ್ಗೆ ಈಗಾಗಲೆ ಡಿಸಿಎಂ ಡಾ.ಸಿ.ಎನ್‌.ಅಶ್ವಥನಾರಾಯಣ ಅವರ ಗಮನ ಸೆಳೆಯಲಾಗಿದೆ. ಸಚಿವ ಸೋಮಣ್ಣ ಅವರಿಗೂ ಅಕ್ರಮದ ಬಗ್ಗೆ ಮಾಹಿತಿ ಇದೆ. ಆದರೂ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.