ರೈತ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ
Team Udayavani, Oct 23, 2022, 3:01 PM IST
ಮಾಗಡಿ: ಕೃಷಿ ಜೀವನೋಪಾಯ ಚಟು ವಟಿಕೆಗಳಲ್ಲಿ ಮಹಿಳೆಯರು ಕೌಶಲ್ಯತೆ ಪಡೆದು, ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಹಾಗೂ ಹಿರಿಯ ವಿಜ್ಞಾನಿ ಲತಾ ಆರ್.ಕುಲಕರ್ಣಿ ತಿಳಿಸಿದರು.
ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳೆಯರಿಗೆ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕೃಷಿ ಚಟುವಟಿಕೆಯಲ್ಲಿ ವಿವಿಧ ಬಗೆಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗು ವಂತೆ ಪ್ರತಿ ಗ್ರಾಪಂಗೆ ಒಬ್ಬರಂತೆ ಆಯ್ಕೆಯಾದ 30 ಕೃಷಿ ಸಖೀಯರಿಗೆ ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೃಷಿ ವಿಶ್ವವಿದ್ಯಾನಿಲಯದಿಂದ ಆರು ದಿನದ ಪರಿಸರ, ಕೃಷಿ ವಿಧಾನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದ್ದು, ಇದರ ಸದ್ಬಳಕೆಯಿಂದ ಸಮಾಜದಲ್ಲಿ ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮಾಗಡಿ ವಲಯ ಅರಣ್ಯಾಧಿಕಾರಿ ಮಂಜುನಾಥ್, ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಸಖೀಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. 6 ದಿನಗಳ ತರಬೇತಿಯಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ.ಲತಾ ಆರ್.ಕುಲಕರ್ಣಿ (ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು) ಪೌಷ್ಟಿಕ ಆಹಾರ, ಅಪೌಷ್ಟಿಕತೆಯ ಲಕ್ಷಣಗಳು ಮತ್ತು ನಿರ್ವಹಣೆ, ಡಾ.ಸೌಜನ್ಯ, ಎಸ್.ವಿಜ್ಞಾನಿ (ಕೃಷಿ ವಿಸ್ತರಣೆ) ಕೃಷಿ ಸಖೀ, ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ಜೀವನೋಪಾಯದ ದೃಷ್ಟಿಕೋನ, ಸಂವಹನದ ಕೌಶಲ್ಯಗಳು, ಕು.ಶಾಂತ ಬಾಲಗೊಂಡ ವಿಷಯ ತಜ್ಞರು(ಹವಾಮಾನ ಶಾಸ್ತ್ರ) ಪರಿಸರ ಕೃಷಿ ವಿಧಾನ, ಡಾ.ದೀಪಾ ಪೂಜಾರ ವಿಜ್ಞಾನಿ(ತೋಟಗಾರಿಕೆ) ಕೃಷಿ ಪೌಷ್ಟಿಕ ಕೈತೋಟ, ಉಮಾ (ಕ್ಷೇತ್ರ ವ್ಯವಸ್ಥಾಪಕರು) ಬೀಜ, ಬೀಜೋಪಚಾರ, ಉತ್ತಮ ಗುಣ್ಣಮಟ್ಟದ ಬೀಜಗಳ ಆಯ್ಕೆ, ಬೀಜೋಪಚಾರ ಮತ್ತು ಬೀಜಾಮೃತದ ತಯಾರಿಕೆ, ಡಾ.ದಿನೇಶ್, ಎಂ.ಎಸ್. ವಿಜ್ಞಾನಿ (ಬೇಸಾಯಶಾಸ್ತ್ರ) ಬೇಸಾಯ ಕ್ರಮ, ಮಾಗಿ ಉಳುಮೆ, ಬದುವಿನ ನಿರ್ಮಾಣ, ನೀರು ನಿರ್ವಹಣೆ ಅಭ್ಯಾಸಗಳು, ಕೃಷಿ ಪದ್ಧತಿಗಳು, ಪ್ರೀತು, ಡಿ.ಸಿ.ವಿಜಾnನಿ(ಮಣ್ಣುಶಾಸ್ತ್ರ) ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆ, ಗಿಡಗಳ ಬೆಳವಣಿಗೆಗೆ ಅವಶ್ಯಕವಿರುವ ಪೋಷಕಾಂಶಗಳು, ಡಾ. ರಾಜೇಂದ್ರ ಪ್ರಸಾದ್, ಬಿ.ಎಸ್. ವಿಜ್ಞಾನಿ (ಸಸ್ಯ ಸಂರಕ್ಷಣೆ) ಕೀಟ ಮತ್ತು ರೋಗಗಳ ನಿರ್ವಹಣೆ, ಕೀಟನಾಶಕಗಳು, ಕೀಟಗಳ ಗುರುತಿಸುವಿಕೆ ಮತ್ತು ಬೋಡೋì ಮಿಶ್ರಣ ತಯಾರಿಕೆ, ವಿವಿಧ ಬಲೆಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.