ಕಿಡಿಗೇಡಿಗಳಿಗೆ ಬಡವರ ಶಾಪ ತಟ್ಟುತ್ತದೆ : ಕೃಷ್ಣಮೂರ್ತಿ
Team Udayavani, Oct 19, 2020, 3:04 PM IST
ಮಾಗಡಿ: ಕೋವಿಡ್ ಸಂಕಷ್ಟದಲ್ಲಿರುವ 10 ಸಾವಿರ ಬಡವರಿಗೆ ನಾಡಪ್ರಭುಕೆಂಪೇಗೌಡ ಅವರ ಹೆಸರಿನಲ್ಲಿ ಅಕ್ಕಿ ವಿತರಣೆ ವೇಳೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ಕಿ ವಿತರಣೆ ತಡೆಯಲು ಯತ್ನಿಸಿದ ಪಾಪಿ ಕಿಡಿಗೇಡಿಗಳಿಗೆ ಬಡವರ ಶಾಪ ತಟ್ಟುತ್ತದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ಹೆಸರೇಳದೆ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಏನೇ ಅಡೆತಡೆ ಒಡ್ಡಿದರೂ ನನ್ನ ಧರ್ಮ ಕಾರ್ಯಗಳು ನಿಲ್ಲುವುದಿಲ್ಲ, ನಾನು ಒಂಟಿ ಚಿರತೆ ಇದ್ದಂತೆ. ತುತ್ತು ಅನ್ನತಿಂದ ನಾಯಿಗೂ ನೀಯತ್ತಿರುತ್ತದೆ. ಧರ್ಮ ಕಾರ್ಯ ಮಾಡುತ್ತಿರುವ ನನಗೆ ಅಧಿಕಾರಿಗಳ ಮೂಲಕ ಏಕೆ ತೊಂದರೆ ಕೊಡುತ್ತೀರಿ. ಕಳೆದ 22 ವರ್ಷಗಳಿಂದ ಕೆಂಪೇಗೌಡ ಹೆಸರಿನಲ್ಲಿ ಅನ್ನದಾನ ಮಾಡಿಕೊಂಡು ಬಂದಿದ್ದೇನೆ. ನೇರವಾಗಿ ಎದುರಿಸಲಾಗದ ರಣಹೇಡಿಗಳು ಅಧಿಕಾರಿಗಳನ್ನು ಛೂ ಬಿಡುವ ಅವಿವೇಕಿಗಳಿಗೆ ದೇವರೇ ಅಂತ್ಯಕಾಣಿಸುತ್ತಾರೆಂದರು.
ಧರ್ಮ ಕಾರ್ಯಕ್ಕೆ ಬಂದಿರುವೆ:ತಾನು ಎಲ್ಲಾ ರಂಗವನ್ನು ಅನುಭವಿಸಿದ್ದೇನೆ. ಮಾಗಡಿಗೆ ರಾಜಕೀಯ ಮಾಡಲು ಬಂದವನಲ್ಲ, ಕೆಂಪೇಗೌಡ ಹೆಸರಿನಲ್ಲಿ ಧರ್ಮಕಾರ್ಯ ಮಾಡ ಲುಬಂದವನು. ಅಕ್ಕಿ ವಿತರಣೆ ದಿನದಂದು ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆ ಪಡೆದೆ. ಈಗ ಗುಣಮುಖನಾಗಿದ್ದೇನೆ. ಉಚಿತ ಅಕ್ಕಿಯಿಂದ ವಂಚಿತರಾಗಿರುವ ಬಡವರ ಮನೆಗೆ ನಮ್ಮ ಮುಖಂಡರಿಂದ ಸಿಹಿಯೊಂದಿಗೆ ಅಕ್ಕಿ ವಿತರಣೆ ಕಳಿಸಿಕೊಡುತ್ತೇನೆ ಎಂದರು.
ವಕೀಲರಾದ ವೆಂಕಟಲಕ್ಷ್ಮೀ ಮಾತನಾಡಿ, ಮುಂದೆ ಅಡ್ಡಿಪಡಿಸಿದರೆ ಅಧರ್ಮಗಳಾದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೆಂಪೇಗೌಡರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆಂದರು. ಹಿರಿಯರಾದ ಜ್ಯೋತಿಪಾಳ್ಯದ ಶ್ರೀನಿ ವಾಸಯ್ಯ ಮಾತನಾಡಿ, ಮಾಗಡಿಯಲ್ಲಿ ರಾಜಕೀಯ ಮಾಡುವವರು ಎಂದಾದರೂ ಪುಣ್ಯದ ಕೆಲಸ ಮಾಡಿದ್ದರೆ ಇಂಥ ಬಡವರಿಗೆ ನೀಡುವ ಅಕ್ಕಿ ವಿತರಣೆ ತಡೆಯುವ ಪಾಪದ ಕೆಲಸಕ್ಕೆ ಕೈಹಾಕು ತ್ತಿರಲಿಲ್ಲ ಎಂದರು. ಮುಖಂಡರಾದ ದೊಡ್ಡಿ ಗೋಪಿ, ಹೇಮಂತ್, ಕುಮಾರ್, ಗಂಗಾಧರ್,ಹೊಸಪಾಳ್ಯದ ಕಾಳೇಗೌಡ, ಬುಡಾನ್‌ಸಾಬ್, ಆನಂದ್, ನಾಗರಾಜು, ಶಿವಕುಮಾರ್, ಮೋಹನ್ ರಾಜು, ವಿಶ್ವ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.