ಶ್ರೀರಾಮಲಿಂಗ ಚೌಡೇಶ್ವರಿ ದೇವಿ ಮಹಾರಥೋತ್ಸವ
Team Udayavani, Feb 7, 2023, 1:31 PM IST
ಕುದೂರು: ಕುದೂರಿನ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ 17 ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವಕ್ಕೆ ದೇವಾಂಗ ಜಗದ್ಗುರು ಶ್ರೀ ದಯಾನಂದ ಪುರಿ ಸ್ವಾಮೀಜಿ ಪ್ರಥಮ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದಕ್ಕೂ ಮುನ್ನ ಅಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಉತ್ಸವ ಮೂರ್ತಿಗೆ ಭಕ್ತರು ಶ್ರದ್ಧಾಭಕ್ತಯಿಂದ ಪೂಜೆ ಸಲ್ಲಿಸಿ ಪಾನಕ, ಮಜ್ಜಿಗೆ ವಿತರಿಸಿದರು, ದೇವಾಲಯದಲ್ಲಿ ಹೋಮ, ಹವನ, ನವಗ್ರಹ ಪೂಜೆ, ಕಳಸ ಸ್ಥಾಪನೆ, ಗಂಗಾ ಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಧಾರ್ಮಿಕ ಕೈಂಕರ್ಯ ನಡೆದವು.
ದೇವಾಂಗ ಜಗದ್ಗುರು ಶ್ರೀ ದಯಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ,ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮದ ಕಲ್ಯಾಣವಾಗುತ್ತದೆ. ಬಟ್ಟೆ ನೇಯ್ದು ನಾಗರಿಕ ಜಗತ್ತಿಗೆ ವಿಶೇಷ ಕೊಡುಗೆ ನೀಡಿರುವ ಶ್ರಮ ಸಂಸ್ಕೃತಿಯ ಜನರಾದ ನಾವು, ಸಮಾಜ ಸೇವೆಯ ಗುಣ ಮೈಗೂಡಿಸಿಕೊಂಡರೆ ದುಡಿಮೆ ಸಾರ್ಥಕವಾಗುತ್ತದೆ. ಉತ್ತಮ ಬದುಕಿಗೆ ದೇವರ ದಾಸಿಮಯ್ಯನವರ ವಚನಗಳು ಮಾದರಿಯಾಗಿದೆ ಎಂದರು.
ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ:ಶಾಸಕ ಎ. ಮಂಜುನಾಥ್ ಮಾತನಾಡಿ, ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಂಡು ಎಲ್ಲ ಸ್ಮರದ ಜನರ ನಡುವೆ ಸಾಮರಸ್ಯವನ್ನುಂಟು ಮಾಡುವ ಕೇಂದ್ರಗಳಾಗಿ ದೇಗುಲಗಳಿದ್ದು, ಜೀವನಕ್ಕೆ ಮಹತ್ತರವಾದ ಪಾತ್ರ ವಹಿಸುತ್ತದೆ. ದೇವರ ಪೂಜೆ, ಧಾರ್ಮಿಕ ಕೈಂಕರ್ಯಗಳು ಅನಾದಿ ಕಾಲದಿಂದಲೂ ರೂಢಿಯಲ್ಲಿದ್ದು, ಇದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಜೀವಂತವಿರಿಸಲು ಸಹಕಾರಿಯಾಗಿದ್ದು, ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಉಂಟಾಗುತ್ತದೆ ಎಂದರು.
ಮಜ್ಜಿಗೆ, ಪಾನಕ ವಿತರಣೆ:ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ಸಂಘದ ಅಧ್ಯಕ್ಷ ಕೆ.ಬಿ.ಬಾಲರಾಜು ಮಾತನಾಡಿ, ಭಾವೈಕ್ಯತೆ ಯಿಂದ ಮನುಷ್ಯ, ಮನುಷ್ಯರಲ್ಲಿನ ಬಂಧ ಗಟ್ಟಿಗೊಳ್ಳುತ್ತದೆ. ಲೌಕಿಕ ಜೀವನದಲ್ಲಿ ಧರ್ಮ ಬೆಳೆಸಲು ದೇವಾಲಯಗಳು ಬಹುಮುಖ್ಯ ಎಂದರು. ರಥೋತ್ಸವ ನಡೆದ ರಸ್ತೆಗಳಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ವತಿಯಿಂದ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಲಕ್ಷ್ಮೀನಾರಾಯಣ್, ಜಯಚಂದ್ರ ಬಾಬು, ಶಿವಕುಮಾರ್, ರಂಗಸ್ವಾಮಿ, ಚಂದ್ರು ಶೇಖರ್, ಗೋಪಿ, ನಾಗೇಶ್, ಗೋಪಾಲಕೃಷ್ಣ, ಶಿವ ಶಂಕರ್, ಮುನಿರಂಗಪ್ಪ, ಗೋವಿಂದರಾಜು, ನಾಗ ಭೂಷಣ್, ಲಲಿತಾಪುರುಷೋತ್ತಮ್, ಗೋವಿಂದ ರಾಜ್, ವೆಂಕಟೇಶ್ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.