Street Dogs: ಬೀದಿನಾಯಿಗಳ ನಿಯಂತ್ರಣಕ್ಕೆಆಪರೇಷನ್ ತಂತ್ರ
Team Udayavani, Dec 8, 2023, 4:08 PM IST
ರಾಮನಗರ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ರುವ ಬೀದಿನಾಯಿಗಳ ಹಾವಳಿ ನಗರಾ ಡಳಿತಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವ ಮೂಲಕ ಬೀದಿನಾಯಿ ಗಳಿಗೆ ನಿಯಂತ್ರಣ ಹಾಕಲು ಜಿಲ್ಲಾಡಳಿತ ಮುಂದಾ ಗಿದ್ದು, ಪ್ರಾಯೋಗಿಕವಾಗಿ ಜಿಲ್ಲಾ ಕೇಂದ್ರ ರಾಮ ನಗರದಲ್ಲಿ ಆಪರೇಷನ್ ಸ್ಟ್ರೀಟ್ ಡಾಗ್ ಅರಂಭಿ ಸಲು ಮುಂದಾಗಿದೆ.
ಇಲ್ಲಿ ಕಾರ್ಯಾ ಚರಣೆ ಸಫಲಗೊಂಡರೆ ಇಡೀ ಜಿಲ್ಲೆಗೆ ಇದೇ ಮಾದರಿಯನ್ನು ವಿಸ್ತರಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಬೀದಿನಾಯಿಗಳನ್ನು ಕೊಲ್ಲುವುದನ್ನು ನಿಷೇಧಿಸಿದ್ದು, ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವ ಮೂಲಕ ನಿಯಂತ್ರಣ ಮಾಡಲು ಕಾನೂನಿನಡಿ ಅವಕಾಶ ನೀಡಲಾಗಿದೆ. ಹೊಸ ನಿಯಮದ ಪ್ರಕಾರ ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ, ಬೀದಿನಾಯಿಗಳ ನಿಯಂತ್ರಣ ನಗರಾಡಳಿತಕ್ಕೆ ಸವಾಲಿನ ಕಾರ್ಯಾವಾಗಿದ್ದು, ಇದೀಗ ರಾಮನಗರ ನಗರಸಭೆ ನಾಯಿಗಳ ನಿಯಂತ್ರಣಕ್ಕೆ ಟೆಂಡರ್ ಕರೆದು ಕಾರ್ಯಾದೇಶ ನೀಡಿರುವುದು ಇತರೆ ಮುನ್ಸಿಪಾಲಿಟಿಗಳಿಗೆ ಸಹಕಾರಿಯಾಗಿದೆ.
ಮುಂದೆ ಬಂದ ಮಂಡ್ಯ ಮೂಲದ ಎನ್‌ಜಿಓ: ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿ ಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮಂಡ್ಯ ಮೂಲದ ಎನ್‌ಜಿಓ ಮುಂದೆ ಬಂದಿದ್ದು, ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಕೇರ್ ಆಫ್ ವಾಯ್ಸಲೆಸ್ ಅನಿಮಲ್ ಟ್ರಸ್ಟ್ ಸಂಸ್ಥೆಗೆ 20 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ಟೆಂಡರ್ ಅನುಮೋದನೆಯಾಗಿ ನಗರಸಭೆಯಿಂದ ಕಾರ್ಯಾ ದೇಶ ನೀಡಲಾಗಿದೆ. ಅಂದಾಜು 1 ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ. ಶ್ವಾನಗಳನ್ನು ಹಿಡಿದು, ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾರೈಕೆ, ರೇಬಿಸ್ ಸೇರಿದಂತೆ ಇನ್ನಿತರ ರೋಗಗಳಿಂದ ದೂರವಿಡುವ ಇಂಜೆಕ್ಷನ್ ಸೇರಿದಂತೆ ಪ್ರತಿ ನಾಯಿಗೆ 1850 ರೂ. ಗಳು ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ತಾತ್ಕಾಲಿಕ ಆಪರೇಷನ್ ಕೇಂದ್ರ: ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ಹಾರೈಕೆ ಮಾಡುವು ದಕ್ಕಾಗಿ ಆಪರೇಷನ್ ರೂಂ, ಅವುಗಳ ಹಾರೈಕೆಗೆ ಸೂಕ್ತ ಜಾಗದ ಅವಶ್ಯಕತೆ ಇದ್ದು, ತಾತ್ಕಾ ಲಿಕವಾಗಿ ನಗರದ ಪಶುವೈದ್ಯಕೀಯ ಆಸ್ಪತ್ರೆ ಆವರಣ ದಲ್ಲಿ ಈ ಕೇಂದ್ರ ವನ್ನು ತೆರೆಯಲಾಗಿದೆ. ಇನ್ನು ಸಂತಾನ ಹರಣ ಚಿಕಿತ್ಸೆಗೆ ಒಳಪಟ್ಟ ನಾಯಿಗಳನ್ನು ಕೆಲಕಾಲ ಹಾರೈಕೆ ಮಾಡಬೇಕಿದ್ದು, ಇದಕ್ಕಾಗಿ ಅಗತ್ಯ ವಿರುವ ಬಾಕ್ಸ್ ಗಳನ್ನು ಬೆಂಗಳೂರಿನಿಂದ ವಿತರಿಸಲಾಗುತ್ತಿದೆ. ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿದ ಬಳಿಕ ಗುತ್ತಿಗೆ ಪಡೆದಿರುವ ಸಂಸ್ಥೆ ಸಂತಾನಹರಣ ಚಿಕಿತ್ಸೆಯನ್ನು ಆರಂಭಿಸಲಿದೆ.
ಇಡೀ ಜಿಲ್ಲೆಗೆ ವಿಸ್ತರಿಸುವ ಗುರಿ : ಬೀದಿನಾಯಿಗಳ ನಿಯಂತ್ರಣಕ್ಕೆ ಹೊಸ ಕಾಯಿದೆ ಜಾರಿಗೆ ಬಂದ ಬಳಿಕ ನಾಯಿಗಳ ಸಂತಾನಹರಣ ಚಿಕಿತ್ಸೆ ಸವಾ ಲಾಗಿ ಪರಿಣಮಿಸಿತ್ತು. ಜಿಲ್ಲೆಯ ಮೂರು ನಗರಸಭೆ ಮತ್ತು ಒಂದು ಪುರಸಭೆಯ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಟೆಂಡರ್ ಕರೆಯಲಾಗುತ್ತಿತ್ತಾದರೂ ಯಾವುದೇ ಸಂಸ್ಥೆ ಟೆಂಡರ್ ಹಾಕಲು ಮುಂದೆ ಬರುತ್ತಿರಲಿಲ್ಲ. ಇದರಿಂದಾಗಿ ಬೀದಿ ನಾಯಿಗಳ ನಿಯಂತ್ರಣ ಕಗ್ಗಂಟಾಗಿ ಪರಿಣಮಿಸಿತ್ತು. ಇದೇ ಮೊದಲ ಬಾರಿಗೆ ಟೆಂಡರ್ ಅನುಮತಿ ಪಡೆದು ಕಾರ್ಯ ರೂಪಕ್ಕೆ ಬರಲು ಸಿದ್ಧತೆ ನಡೆದಿದೆ.
ರಾಮನಗರದಲ್ಲಿ ಸಫಲಗೊಂಡರೆ ಇಡೀ ಜಿಲ್ಲೆಗೆ ಯೋಜನೆಯನ್ನು ವಿಸ್ತರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಮಕ್ಕಳ ಮೇಲೆ ಹೆಚ್ಚು ದಾಳಿ: ರಾಮನಗರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 24595 ಮಂದಿ ನಾಯಿಕಡಿತಕ್ಕೆ ಒಳಗಾಗಿದ್ದಾರೆ ಎಂಬ ಸಂಗತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವಿವರದಿಂದ ತಿಳಿದು ಬರುತ್ತದೆ.
ಇನ್ನು ಗ್ರಾಮೀಣ ಕೆಲ ಮಂದಿ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರೆ, ಮತ್ತೆ ಕೆಲವರು ನಾಯಿಕಡಿತಕ್ಕೆ ಚಿಕಿತ್ಸೆ ಪಡೆಯದೆ ಉದಾ ಸೀನ ಮಾಡುವ, ನಾಟಿ ಔಷಧಿ ತೆಗದು ಕೊಳ್ಳುವ ಉದಾಹರಣೆ ಸಹ ಸಾಕಷ್ಟಿದೆ. ನಾಯಿದಾಳಿಗೆ ಒಳಗಾಗಿರುವರಲ್ಲಿ ಶೇ.50ಕ್ಕಿಂತ ಹೆಚ್ಚು 14 ವರ್ಷದೊಳಗಿನ ಮಕ್ಕಳು ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಶಾಶ್ವತ ಕೇಂದ್ರಕ್ಕೆ ಚಿಂತನೆ: ರಾಮನಗರ ವ್ಯಾಪ್ತಿಯ ಬೀದಿನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ, ಅವುಗಳನ್ನು ಹಾರೈಕೆ ಮಾಡಿ ಬಿಡಲು 1 ಎಕರೆ ವಿಸ್ತೀರ್ಣದಲ್ಲಿ ಶಾಶ್ವತ ನಾಯಿ ಶಸ್ತ್ರ ಚಿಕಿತ್ಸಾ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಪಶುವೈದ್ಯ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದು ತಾತ್ಕಾಲಿಕ ಕೇಂದ್ರವಾಗಿದ್ದು, ಮುಂದಿನ ಹಂತದಲ್ಲಿ ಇದಕ್ಕಾಗಿ ಶಾಶ್ವತ ಕೇಂದ್ರ ಸ್ಥಾಪನೆಗೆ ರಾಮನಗರ ನಗರಸಭೆ ಚಿಂತನೆ ನಡೆಸಿದೆ. ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ಖಾಸಗಿ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. 20 ಲಕ್ಷ ರೂ.ವೆಚ್ಚದಲ್ಲಿ ಸಂತಾನಹರಣ ಚಿಕಿತ್ಸೆ ಮಾಡಿಸಲಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ನಡೆಯುತ್ತಿದೆ.
ಸಂತಾನಹರಣ ಚಿಕಿತ್ಸೆಗೆ ಬೇಕಾದ ಎಲ್ಲಾ ಮೂಲಸೌಕರ್ಯವನ್ನು ಕಲ್ಪಿಸಿ ಕೊಡಲಾಗಿದ್ದು, ಸದ್ಯದಲ್ಲೇ ಚಾಲನೆ ನೀಡಲಾಗುವುದು. ಈ ಬಗ್ಗೆ ಜಿಲ್ಲೆಯ ವಿವಿಧ ನಗರಸಭೆ ಮತ್ತು ಪುರಸಭೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದು, ನಮ್ಮ ಸಾಧಕಬಾಧಕ ನೋಡಿಕೊಂಡು ತಮ್ಮಲ್ಲೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ● ನಾಗೇಶ್, ಪೌರಾಯುಕ್ತ, ನಗರಸಭೆ ರಾಮನಗರ
– ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.