100 ವರ್ಷ ಪೂರೈಸಿರುವ ಶಾಲೆಗೆ ಇದೆಂಥಾ ದುಸ್ಥಿತಿ?
3 ವರ್ಷದಿಂದ ಶೌಚಾಲಯವಿಲದೇ ಮಕ್ಕಳ ಪರದಾಟ
Team Udayavani, Nov 18, 2021, 3:16 PM IST
ಮಾಗಡಿ: ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ ನಾಮಫಲಕ ಹೊತ್ತಿರುವ ಈ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೆಸರಿಗಷ್ಟೇ ಮಾದರಿ ಶಾಕೆ. ಆದರೇ ಆ ಶಾಲೆಯಲ್ಲಿ ವಿದ್ಯಾರ್ಥಿಗಳು ಹೇಳಿಕೊಳ್ಳಲಾಗದ ಸಮಸ್ಯೆ ಬಗ್ಗೆ ನಾವು ತಿಳಿಸಿಕೊಡ್ತೇವೆ ಈ ವರದಿ ಮೂಲಕ.
ಆಡಳಿತದಲ್ಲೇ ಲೋಪ: ಕನ್ನಡ ನಾಡು ನುಡಿ ಅಂತಾ ನ.1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡೋ ಸಂಘ-ಸಂಸ್ಥೆಗಳು ಈ ಕನ್ನಡ ಶಾಲೆಯ ದುಸ್ಥಿತಿ, ರೋಗಗ್ರಸ್ಥ ಸ್ಥಿತಿ ನೋಡಿ ಅದ್ಯಾವ ಪರಿ ಮರುಕ ವ್ಯಕ್ತಪಡಿಸ್ಥಿದ್ದರೋ ಗೊತ್ತಿಲ್ಲ. ಇನ್ನು ಮಕ್ಕಳ ಹಕ್ಕುಗಳ ಹಿತರಕ್ಷಣೆ ಅಂತ ಸಂಘ-ಸಂಸ್ಥೆಗಳನ್ನು ಕಟ್ಟಿ ಕೊಂಡು ನವೆಂಬರ್ 14ರಂದು ಮಕ್ಕಳ ದಿನಾಚರ ಣೆಯ ಮಹತ್ವ ಸಾರುವ ಸಂಘಸಂಸ್ಥೆಗಳಿಗೇನು ಕಡಿಮೆಯಿಲ್ಲ.
ಇದೇ ನವೆಂಬರ್ 1ರಂದು, 14ರಂದು ಬಂದು ಬೇಟಿ ಬಚ್ಚಾವೋ ಬೇಟಿ ಪಡಾವೋ ಅಂತ ಉದ್ದುದ್ದ ಭಾಷಣ ಮಾಡಿ ಬಿಟ್ಟಿ ಪ್ರಚಾರ ಪಡೆಯೋ ಅಧಿಕಾರಿಗಳು, ಜನಪ್ರತಿನಿಧಿಗಳಿಗೇನು ಕಡಿಮೆಯಿಲ್ಲ ಬಿಡಿ. ಇನ್ನೂ ಶಾಲಾ ಗುಣಮಟ್ಟ ವರ್ಷಕ್ಕೊಮ್ಮೆ ಪರಿಶೀಲನೆ ನಡೆಸೋ ಡಿಡಿಪಿಐ, ಬಿಇಒ ಅಧಿಕಾರಿಗಳು, ಶಿಕ್ಷಣ ಇಲಾಖೆ, ಶಿಕ್ಷಣ ಇಲಾಖೆ ಸಚಿವರು ಸರ್ಕಾರಿ ಶಾಲೆಗಳನ್ನು ಮಾದರಿಗೊಳಿಸಲು ಅದ್ಯಾವ ಪರಿ ಕಸರತ್ತು, ಯೋಜನೆ, ಖರ್ಚುವೆಚ್ಚ ಮಾಡ್ತಿದೆ ಅಂತ ನಮಗೆಲ್ಲ ಗೊತ್ತು. ಸರ್ಕಾರದ ಇಷ್ಟೆಲ್ಲ ಸಹಕಾರದ ನಡುವೆಯೂ ಈ ಶಾಲೆ ಶೌಚಾಲಯ ವಿಲ್ಲದೇ ಶಾಪಗ್ರಸ್ತ ವಾಗಿರೋದು ಏಕೆ ಅನ್ನೋದು ಈ ನಮ್ಮ ಪ್ರಶ್ನೆ.
ವಿದ್ಯಾರ್ಥಿನಿಯರ ಕಥೆ-ವ್ಯಥೆ: ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿನಿಯರ ಫೋಟೋ ಒಮ್ಮೆ ನೋಡಿದ್ರೆ ವರ್ಷಕ್ಕೆ ಮಕ್ಕಳಿಗೆ 2 ರೂ.5 ರೂ. ಪಡೆದು ಮಕ್ಕಳ ಸಿನಿಮಾ ತೋರಿಸ್ತಿದ್ದಾರೋ ಏನೋ ಅಂತ ಅನ್ನಿಸದೇ ಇರಲ್ಲ. ಆದರೇ ಮಕ್ಕಳು ಹೀಗೆ ಕ್ಯೂ ನಿಂತಿರೋದು ಅದ್ಯಾವುದೋ ಚಿತ್ರಮಂದಿರದ ಮುಂದೆ ಸಿನಿಮಾ ನೋಡಲಲ್ಲ, ಬದಲಾಗಿ ಶೌಚಾಲಯಕ್ಕೆ ತೆರಳಲು ಸಾರ್ವಜನಿಕ ಶೌಚಾಲಯದ ಮುಂದೆ ನಿಂತಿರುವ ವಿದ್ಯಾರ್ಥಿನಿಯರು. ಶಾಲೆಯಲ್ಲಿ ಶೌಚಾಲಯವಿಲ್ಲ, ಇವರಿಗೆ ಸಾರ್ವಜನಿಕ ಶೌಚಾಲಯವೇ ಗತಿ.
ಸಾಮಾನ್ಯ ಜ್ಞಾನದ ಕೊರತೆ: ಇದು ಪಟ್ಟಣದ ಹೃದಯ ಭಾಗದಲ್ಲಿರುವ ಜಿಕೆಬಿಎಂಎಸ್ ಬಾಲಕಿ ಯರ ಪ್ರಾಥಮಿಕ, ಪ್ರೌಢಶಾಲೆ ಕಥೆವ್ಯಥೆ. 100 ವರ್ಷ ಪೂರೈಸಿರುವ ಈ ಶಾಲೆ ಕಳೆದು ಮೂರು ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಿಸಲು ಇಲ್ಲಿದ್ದ ಶೌಚಾಲಯ ಹೊಡೆದು ಹಾಕಲಾಗಿದ್ದು, ಆ ಹೊಸ ಕಟ್ಟಡ ನಿರ್ಮಾಣ ಕಟ್ಟಲು ಮುಂದಾಗಿರುವ ಸರ್ಕಾರದ ನಿರ್ಧಾರ ಸ್ವಾಗತರ್ಹ.
ಆದರೇ ಅದ್ಯಾವ ಮಹಾನ್ ಮೇಧಾವಿಯೋ, ಪ್ರಭೂ ತಿಯೋ ಗೊತ್ತಿಲ್ಲ ನೋಡಿ. ಶೌಚಾಲಯ ಕೆಡವುದಕ್ಕೆ ಮುಂಚೆ, ವಿದ್ಯಾರ್ಥಿ ನಿ ಯರಿಗೆ ಶೌಚಾಲಯ ನಿರ್ಮಿಸಿಕೊಡುವ ಬಗ್ಗೆ ಅಥವಾ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸದೇ ಕಾಮಗಾರಿಗೆ ಕೈ ಹಾಕಿರುವ ಗುತ್ತಿಗೆ ದಾರರೋ..? ಅಥವಾ ಸರ್ಕಾರದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ್ಳೋ ಅವರಿಗೆ ಅದ್ಯಾವ ಪರಿ ಸೂಕ್ಷ್ಮತೆ, ಸಂವೇದನೆ ಹೊಂದಿದ್ದಾರೆ ಅನ್ನೋದು ಈ ಘಟನೆಯೇ ಸಾಕ್ಷಿ.
ಶೌಚಾಲಯ ಕೆಡವಿ 3 ವರ್ಷ ಕಳೆದರೂ ಇಲ್ಲಿಯ ವರೆಗೂ ನೂತನ ಶೌಚಾಲಯ ನಿರ್ಮಿಸಿಕೊಟ್ಟಿಲ್ಲ. ಕಟ್ಟಡವೂ ಸಹ ಆಮೆಗತಿಯಲ್ಲಿ ರುವುದರಿಂದ ಶೌಚಾಲಯವಿಲ್ಲದೆ ವಿದ್ಯಾರ್ಥಿಯರು ದೇಹಬಾಧೆ ಇಂಗಿಸಿಕೊಳ್ಳಲು ಪರದಾಡುವಂತಾಗಿದೆ.
ಕಾಯಿಲೆ ಭೀತಿ: ಸರ್ಕಾರ ಬಯಲು ಮುಕ್ತ ಶೌಚಾಲಯ ಎಂಬ ಘೋಷಣೆ ಮಾಡಿ ಮನೆಮನೆಗೂ ಶೌಚಾಲಯ ಕಟ್ಟಿಸಿಕೊಡುತ್ತಿದೆ. ಆದರೆ, ಸರ್ಕಾರಿ ಶಾಲೆಯಲ್ಲಿದ್ದ ಶೌಚಾಲಯ ಗುತ್ತಿಗೆದಾರ ಹೊಡೆದು ಹಾಕಿದ್ದು, ಮೂರು ವರ್ಷ ಕಳೆದರೂ ಇನ್ನೂ ಶೌಚಾಲಯ ನಿರ್ಮಿಸಿಲ್ಲದಿರುವುದರಿಂದ ಶಾಲೆಗೆ ಬರುವ ವಿದ್ಯಾರ್ಥಿಯರ ಪಾಡು ಹೇಳತೀರದಾಗಿದೆ. 320 ವಿದ್ಯಾರ್ಥಿನಿಯರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿದಿನ ಸಾರ್ವಜನಿಕ ಶೌಚಾಲಯಕ್ಕೆ ಹೊರಗಡೆ ಹೋಗಬೇಕು.
ಅಲ್ಲಿ ನೀರಿನ ಸಮಸ್ಯೆ ಯಿದ್ದು, ಯೂರಿನ್ ಇನೆ#ಕ್ಷನ್ ಸೇರಿದಂತೆ ನಾನಾ ಕಾಯಿಲೆಗೆ ಗುರಿಯಾಗುವ ಸಾಧ್ಯತೆಯಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಹೇಳಿಕೆಗಷ್ಟೇ ಸೀಮಿತವಾಯ್ತಾ..? ಕೊರೊನಾ ಹುಟ್ಟಿಸಿದ ಭೀಕರತೆ ನಡುವೆಯೂ ಶಾಲಾ ಆರಂಭ ಮಾಡಿರೋ ಶಿಕ್ಷಣ ಇಲಾಖೆಗೆ ಈ ಶಾಲೆಯ ವಾಸ್ತವಂಶ ಅರಿವಿಗೆ ಬಾರದೇ ಹೋಯಿತೇ..?
ಸ್ವತ್ಛತೆ ಬಗ್ಗೆ ಕ್ಷಣಕ್ಕೊಮ್ಮೆ ಜಪಿಸುವ ಶಿಕ್ಷಣ ಇಲಾಖೆ ಬಿಇಒ, ಡಿಡಿಪಿಐ ಅಧಿಕಾರಿಗಳು, ಶಿಕ್ಷಣ ಇಲಾಖೆ ಸಚಿವರು ಈ ಶಾಲೆಯಲ್ಲಿ ಶೌಚಾಲಯ ಇಲ್ಲ ಅನ್ನೋ ಸಂಗತಿ ಅವರ ಅರಿವಿಗೆ ಬಂದಿಲ್ವಾ..? ಪುರಸಭೆ ಇಲಾಖೆ, ಅದರೊಳಗೆ ಬರುವ ಆರೋಗ್ಯ ಇಲಾಖೆ ಕೊರೊನಾ ಮುಕ್ತ ಮಾಡಲು ಬೀದಿ-ಬೀದಿ, ಗಲ್ಲಿ- ಗಲ್ಲಿಗೂ ತೆರಳಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಅಧಿಕಾರಿಗಳಿಗೆ ರೋಗದ ಮೂಲ ಸ್ಥಳದ ಬಗ್ಗೆ ಅರಿವಿಗೆ ಬಂದಿಲ್ವಾ..? ಗೊತ್ತಿಲ್ಲ. ಸರ್ಕಾರ ಕೊಡುವ ಕೊರೊನಾ ಮಾರ್ಗಸೂಚಿ ಪಾಲನೆಯಾಗಿದೆ ಎಂದು ಹೇಳ್ಳೋ ಅಧಿಕಾರಿಗಳ ನಿಜ ಬಣ್ಣ ಇಲ್ಲಿ ಬಯಲಾಗಿದೆ.
ಜನಪ್ರತಿನಿಧಿಗಳು ಒಮ್ಮೆ ಇಲ್ಲಿ ನೋಡಿ: ಜನಪ್ರತಿ ನಿಧಿಗಳಿಗೆ ಕ್ಷೇತ್ರದ ಎಲ್ಲ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ಆದರೇ ಈ ಶಾಲೆ ಸಮಸ್ಯೆ ಬಗ್ಗೆ ಅರಿವಿಗೆ ಬಾರದೇ ಹೊಯಿತಾ? ಅಥವಾ ಸಮಸ್ಯೆ ಅರಿವಿದ್ದರೂ ನಮಗ್ಯಾಕೆ ಉಸಾಬರಿ ಅಂತಾ ಸುಮ್ಮನಾದ್ರಾ..? ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಹ ವಿದ್ಯಾರ್ಥಿಗಳ ಪಾಡು, ಪರದಾಟ ಅರಿವಿಗೆ ಬಂದಿಲ್ವಾ..? ಸ್ವತ್ಛ ಭಾರತದ ಬಗ್ಗೆ ಭಾಷಣ ಮಾಡುವ ಜನಪ್ರತಿನಿಧಿಗಳು ಈ ಬಗ್ಗೆ ಏನಂತಾರೆ..? ಯಾವ ಕ್ರಮ ಕೈಗೊಳ್ತಾರೆ ಗೊತ್ತಿಲ್ಲ. ಶಿಕ್ಷಕಿಯರಿಗೂ ಮುಜುಗರ: ಶಾಲೆಗೆ ಕೂಗಳತೆ ದೂರ ದಲ್ಲೇ ಬಿಇಒ ಕಚೇರಿ ಬೇರೆ ಇದೆ.
ಇದನ್ನೂ ಓದಿ:- ಮಾನ್ವಿ: ಮಳೆಯಿಂದ ಭತ್ತದ ಬೆಳೆಗೆ ಹಾನಿ
ಬಿಇಒ ಅಧಿಕಾರಿಗಳಿಗೆ ಈ ಸಂಗತಿ ಅರಿವಿಗೆ ಬಂದಿದ್ಯಾ..? ಬಂದಿದ್ದರೂ ಕ್ರಮಕ್ಕೆ ಮುಂದಾಗದೇ ಸುಮ್ಮನಾಗಿ ದ್ದಾರಾ..? ಶಿಕ್ಷಕಿಯರು ಶೌಚಾಲಯಕ್ಕೆ ತೆರಳಲು ಬಿಇಒ ಕಚೇರಿಯನ್ನೇ ಅವಲಂಬಿಸಿದ್ದಾರೆ. ಶಿಕ್ಷಕ ವೃಂದ ಈ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಅವರ ಅಸಹಾಯಕ ನುಡಿಯಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದುಮುಂದು ಯಾಕೆ ನೋಡ್ತಾರೆ ಅನ್ನೋದಕ್ಕೆ ಈ ಶಾಲೆ ಉದಾಹರಣೆ ಆಗಿದೆ.
ಮೇಲಾಧಿಕಾರಿಗಳ ಗಮನಕ್ಕೆ ತರುವೆ: ಬಿಇಒ
ಶಾಲಾ ಮಕ್ಕಳಿಗೆ ಕೊಠಡಿ ಮತ್ತು ಶೌಚಾಲಯದ ಕೊರತೆಯಿದೆ. ಕಟ್ಟಡ ನಿರ್ಮಾಣ ಸಹ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಕುಡುಕರ ತಾಣವಾಗುತ್ತಿದೆ. ಕೂಡಲೆ ಕಟ್ಟಡ ಪೂರ್ಣಗೊಳಿಸಿ, ಶೌಚಾಲಯ ನಿರ್ಮಿಸಿಕೊಡುವಂತೆ ಹಲವು ಭಾರಿ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳಿಗೆ, ಎಂಜಿನಿಯರ್ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು ಮತ್ತೂಮ್ಮೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಅಂತಾರೆ ಬಿಇಒ ಯತಿಕುಮಾರ್.
ಶಾಲಾ ಕೊಠಡಿ, ಶೌಚಾಲಯ ಸಮಸ್ಯೆ ಎದುರಾಗಿದೆ
ನಮ್ಮ ಶಾಲೆಯಲ್ಲಿ 1 ರಿಂದ 7 ತರಗತಿ ವರೆವಿಗೆ 150 ಮಂದಿ ವಿದ್ಯಾರ್ಥಿನಿಯರಿದ್ದೇವೆ. 170 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿದ್ದಾರೆ. ಕೊಠಡಿ ಸಮಸ್ಯೆಯಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದೇವೆ. ಜೊತೆಗೆ ನಮ್ಮ ಶಾಲೆಯಲ್ಲಿ ಶೌಚಾಲಯವಿಲ್ಲ, ಹೊರಗಡೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಮೂರು ವರ್ಷದಿಂದಲೂ ಸಮಸ್ಯೆ ಎದುರಿಸುತ್ತಿದ್ದೇವೆ.
ಹೊರಗಡೆ ಸಾರ್ವಜನಿಕ ಶೌಚಾಲಯದ ಬಳಿ ಗಂಡು ಮಕ್ಕಳಿರುತ್ತಾರೆ. ಶೌಚಾಲಯಕ್ಕೆ ಹೋಗಲು ಮುಜುಗರ ವಾಗುತ್ತಿದೆ. ಧೈರ್ಯದಿಂದ ಶೌಚಾಲಯಕ್ಕೆ ತೆರಳಿದರೂ ಅಲ್ಲಿ ನೀರಿನ ವ್ಯವಸ್ಥೆಯಲ್ಲ. ಇಲ್ಲಿನ ಶೌಚಾಲಯದ ನಿರ್ವಹಣೆಯೂ ಸರಿಯಿಲ್ಲ. ಸಂಬಂಧಪಟ್ಟವರು ಆದಷ್ಟು ಬೇಗ ಶಾಲೆಯಲ್ಲಿಯೇ ಶೌಚಾಲಯ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿತ್ತೇವೆ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದರು.
“ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಬಿಇಒ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಕೌನ್ಸಲರ್, ಬಿಇಒ ಸಂಬಂಧಪಟ್ಟ ಕಟ್ಟಡ ನಿರ್ಮಾಣದ ಎಂಜಿನಿಯರ್ ಅವರೊಂದಿಗೆ ಚರ್ಚಿಸಿದ್ದರೂ ಪ್ರಯೋಜನವಾಗಿಲ್ಲ ಅಂತ ಮಕ್ಕಳು, ಶಿಕ್ಷಕಿಯರು ಅನುಭವಿಸುತ್ತಿರುವ ಸಮಸ್ಯೆ ಮತ್ತು ನೋವನ್ನು ಹಂಚಿಕೊಂಡರು.” – ತಬಾಸಂ, ಶಾಲೆಯ ಮುಖ್ಯಶಿಕ್ಷಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.