ರೇಷ್ಮೆ ಮಾರುಕಟ್ಟೆಗೆ ಅಧಿಕಾರಿಗಳ ದಿಢೀರ್ ಭೇಟಿ
Team Udayavani, Jan 11, 2023, 2:49 PM IST
ರಾಮನಗರ: ವಿಶ್ವದ ಅತಿ ದೊಡ್ಡ ರೇಷ್ಮೇ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮನಗರ ಜಿಲ್ಲಾ ಕೇಂದ್ರದ ರೇಷ್ಮೇ ಮಾರುಕಟ್ಟೆಗೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳ ತಂಡ ಡಾ. ರಾಜೇಂದ್ರಪ್ರಸಾದ್ ಅವರ ನೇತೃತ್ವದಲ್ಲಿ ಧಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸುವ ಮೂಲಕ ವರ್ತಕರಿಗೆ ಬಿಸಿಮುಟ್ಟಿಸಿದರು.
ನಗರದಲ್ಲಿರುವ ವಿಶ್ವದ ಅತಿ ದೊಡ್ಡ ಮಾರುಕಟ್ಟೆ ಎಂದೇ ಖ್ಯಾತಿ ಪಡೆದಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ವೆÂತ್ಯಾಸ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದವು. ಅಲ್ಲದೆ, ವಿಶೇಷವಾಗಿ ತೂಕ ಮತ್ತು ಅಳತೆ ವಿಚಾರದಲ್ಲಿ ಪದೇ ಪದೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಇದೆಲ್ಲವನ್ನೂ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡಿದ್ದೂ ಉಂಟು. ಇದನ್ನು ಗಮನದಲ್ಲಿಟ್ಟುಕೊಂಡು ಮೌಖೀಕ ದೂರಿನ ಮೇರೆಗೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.
ಯಾವುದೇ ಲೋಪ ಕಂಡು ಬಂದಿಲ್ಲ: ಈ ವೇಳೆ ರೇಷ್ಮೇ ಮಾರುಕಟ್ಟೆಯಲ್ಲಿ ರೇಷ್ಮೇ ಗೂಡು ತೂಕ ಮಾಡಲು ಬಳಸುವ ಸ್ಕೇಲ್‌ಗಳನ್ನು ಪರಿಶೀಲನೆ ನಡೆಸಲಾಯಿತು. ರೈತರಿಗೆ ಯಾವುದೇ ಅನ್ಯಾಯವಾಗದ ರೀತಿಯಲ್ಲಿ ಅಳತೆ ಕಂಡು ಬಂದಿದ್ದು ವಿಶೇಷ. ದಾಳಿಯ ನೇತೃತ್ವ ವಹಿಸಿದ್ದ ಕಾನೂನು ಮಾಪನ ಇಲಾಖೆಯ ಕಂಟ್ರೋಲರ್ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ, ರೇಷ್ಮೆ ಮಾರುಕಟ್ಟೆಯಲ್ಲಿ ಒಟ್ಟು 25 ಸ್ಕೇಲ್ ಗಳಿವೆ ಅವುಗಳಲ್ಲಿ ಸದ್ಯ ಬಳಕೆ ಮಾಡುತ್ತಿರುವ 11 ಅಳತೆ ಮಾಪನಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಲೋಪ ಕಂಡು ಬಂದಿಲ್ಲ ಎಂದರು.
ಎಲ್ಲಾ ಮೈನರ್ ಸಮಸ್ಯೆ: ಎಲ್ಲಾ ಮೈನರ್ ಸಮಸ್ಯೆ ಅಷ್ಟೇ ಇದ್ದು, ಎಲ್ಲಾ ಪಾಸಿಟಿವ್ ಇದೆ. ರೈತರಿಗೆ ತೊಂದರೆಯಾಗುತ್ತಿಲ್ಲ. ಇಂದು ನಮ್ಮ ತಂಡದಲ್ಲಿ 8 ಮಂದಿ ಹಿರಿಯ ಅಧಿಕಾರಿಗಳು ಸೇರಿ 60 ಮಂದಿ ಅಧಿಕಾರಿಗಳಿಂದ ಕೂಡಿದ್ದು, ಯಾವುದೇ ಮುನ್ಸೂಚನೆ ನೀಡದೆ ದಾಳಿ ಮಾಡಿದ್ದೇವೆ. ಇಲ್ಲಷ್ಟೇ ಅಲ್ಲದೆ, ನಮ್ಮ ತಂಡ ಜಿಲ್ಲೆಯಲ್ಲಿರುವ ಕನಕಪುರ ಮಾಗಡಿಯಲ್ಲಿ ಅಳತೆ ಪರಿಶೀಲನೆಗೆ ಒಳಪಡಿಸಲಿದೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ: ಇದು ಇಂದಿಗೆ ಮುಗಿಯುವುದಿಲ್ಲ. ಅನಿರೀಕ್ಷಿತ ದಾಳಿ ನಡೆಯುತ್ತದೆ. ರೈತರ ಹಿತದೃಷ್ಟಿಯಿಂದಲೇ ದಾಳಿ ನಡೆಸಲಾಗಿದೆ. ಕೆಲವು ಸ್ಕೇಲ್‌ಗಳು ಬಳಕೆಯಾಗುತ್ತಿಲ್ಲ. ಸದ್ಯಕ್ಕೆ ಅಳತೆ ಮಾಪನ ಸರಿಯಿದೆ. ಮುಂದೆಯೂ ಸರಿ ಇರಬೇಕು ಎಂದು ಮಾರ್ಮಿಕವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ದಾಳಿ ವೇಳೆ ಡೆಫ್ಯೂಟಿ ಕಂಟ್ರೋಲರ್ ಮಂಜುನಾಥ್, ಜಿಲ್ಲಾ ಅಧಿಕಾರಿ ಲೋಕೇಶ್, ರಾಮನಗರ ಜಿಲ್ಲಾ ಕಾನೂನು ಮಾಪನ ಇಲಾಖೆ ಸ್ಕ್ವಾಡ್ ಮೂವರು ಸೇರಿದಂತೆ 60 ಮಂದಿ ಅಧಿಕಾರಿ ಸಿಬ್ಬಂದಿ ಇದ್ದರು.
ಅಳತೆ ಮತ್ತು ತೂಕದಲ್ಲಿ ರೈತರಿಗೆ ಅನ್ಯಾಯವಾಗಬಾರದು. ಜೊತೆಗೆ ಮಾಪನ ಇಲಾಖೆಯಿಂದ ಪ್ರತಿವರ್ಷ ಅದನ್ನು ಮಾಪನ ಮಾಡಿಸಿ ಸೀಲ್ ಹಾಕಿಸ ಬೇಕು. ಆಗಿದ್ದರೂ, ಒಮ್ಮೊಮ್ಮೆ ಅಳತೆ ಮೋಸ ನಡೆಯುವ ದೂರು ಕೇಳಿ ಬರು ತ್ತವೆ. ಅದಕ್ಕಾಗಿ ದಾಳಿ ನಡೆದಿದೆ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದ ಉಚಿತವಾಗಿ ಒಂದು ಸ್ಕೇಲ್ ಕೊಡುತ್ತೇವೆ ಯಾವುದೇ ರೈತರಿಗೆ ಅನುಮಾನ ಬಂದರೆ ಎರಡೂ ಸ್ಕೇಲ್‌ಗಳಲ್ಲಿ ಚೆಕ್ ಮಾಡಿಸಿಕೊಳ್ಳಬಹುದು. –ಡಾ. ರಾಜೇಂದ್ರ ಪ್ರಸಾದ್, ಕಂಟ್ರೋಲರ್ ಕಾನೂನು ಮಾಪನ ಇಲಾಖೆ
ನಿರಂತರವಾಗಿ ತೂಕ ಮತ್ತು ಅಳತೆಯಲ್ಲಿ ವಂಚನೆಯಾಗುತ್ತಲೇ ಬರುತ್ತಿತ್ತು. ಯಾವ ಸಿಸಿ ಕ್ಯಾಮೆರಾಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು, ಇದೀಗ ಅಳತೆ ಮತ್ತು ಮಾಪನ ಇಲಾಖೆ ವತಿಯಿಂದ ಅಧಿಕಾರಿಗಳು ದಾಳಿ ಮಾಡಿದ್ದು ಮೆಚ್ಚುವಂತದ್ದು. ಅವರಿಗೆ ನಮ್ಮ ಧನ್ಯವಾದ ಸಲ್ಲಿಸುತ್ತೇವೆ. – ಶಿವಣ್ಣ, ರೇಷ್ಮೇ ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.