ಮಹಾನ್ ಸಾಧಕರು ಕೂಡ ಬಡತನದಲ್ಲಿ ಓದಿದವರೇ
Team Udayavani, Mar 22, 2021, 12:34 PM IST
ಕನಕಪುರ: ಬಡತನದಲ್ಲೂ ಓದಿ ಸಾಧನೆಗೈದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯಂತೆಯೇ ಇಂದಿನ ವಿದ್ಯಾರ್ಥಿಗಳು ಸಾಧನೆಯ ಶಿಖರವೇರಬೇಕು ಎಂದು ಮರಳವಾಡಿ ಮಠದ ಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಮರಳವಾಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಕೆಆರ್‌ಐಡಿಎಲ್‌ನಿಂದ ಮರಳವಾಡಿ, ಹಾರೋಹಳ್ಳಿ ಹೋಬಳಿಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸೇವೆ, ಟ್ಯಾಬ್‌ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸದ್ಬಳಕೆ ಮಾಡಿಕೊಳ್ಳಿ: ಸರ್ಕಾರದ ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿ ಹಲವು ಗಣ್ಯರು ಕಡುಬಡತನದಲ್ಲಿ ಗುರಿಯಿಟ್ಟುಕೊಂಡು ಕಷ್ಟಪಟ್ಟುಓದಿ ಸಾಧನೆ ಮಾಡಿದ್ದಾರೆ. ಇಂದಿನ ಮಕ್ಕಳಿಗೆಓದಲು ಸರ್ಕಾರ ಅನೇಕ ಸೌಲಭ್ಯ ಕೊಟ್ಟಿದೆ. ಮಹನೀಯರ ಹೆಸರಿನಲ್ಲಿ ವಸತಿ ಶಾಲೆ ನಿರ್ಮಾಣಮಾಡಿ, ಮೂಲ ಸೌಕರ್ಯ ಒದಗಿಸಿದೆ. ಕೆಆರ್ ಐಡಿಎಲ್‌ನಿಂದ ವಿತರಣೆ ಮಾಡುತ್ತಿರುವ ಟ್ಯಾಬ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
200 ಟ್ಯಾಬ್ ವಿತರಣೆ: ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಗ್ರಾಮೀಣ, ಗಡಿಭಾಗದ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದವಂಚಿತರಾಗಿ, ನಿರಂತರ ಕಲಿಕೆಯಿಂದ ದೂರ ಉಳಿದಿದ್ದರು. ಆ ವೇಳೆಯಲ್ಲಿ ಮಕ್ಕಳು ತಮ್ಮಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿಸಿಎಂ ಯಡಿಯೂರಪ್ಪನವರ ಜನಪರ ಆಡಳಿತದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಉಚಿತ 200 ವೈಫೈ ಸೇವೆ, ಟ್ಯಾಬ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ಲಾಘನೀಯ ಕಾರ್ಯ: ಜಿಪಂ ಅಧ್ಯಕ್ಷ ಅಶೋಕ್‌ಮಾತನಾಡಿ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಅವರ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಟ್ಯಾಬ್‌ಗಳನ್ನು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಹಾರೋಹಳ್ಳಿ ಪಿಎಸ್‌ಐ ಮುರಳಿ ಮಾತನಾಡಿ, ಭಾರತ ಹೆಚ್ಚು ಯುವ ಮಾನವ ಸಂಪನ್ಮೂಲವನ್ನು ಹೊಂದಿದೆ. ಅದನ್ನು ದೇಶದ ಸಂಪತ್ತನ್ನಾಗಿ ಮಾಡ ಬೇಕಾದರೆ ಅವರಿಗೆ ವಿಫುಲವಾದ ಅವಕಾಶಗಳನ್ನುಕೊಟ್ಟು ಅವರನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಪಕ್ಷಾತೀತವಾಗಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರನ್ನು ಸನ್ಮಾನಿಸಲಾಯಿತು. ರಾಮನಗರದ ಪ್ರಾಧಿಕಾರದ ಅಧ್ಯಕ್ಷಮುರಳೀಧರ್, ಸಿಇಒ ಇಕ್ರಂ, ಡಿಟಿಪಿಒ ಸೋಮ ಶೇಖರಯ್ಯ, ತಾಲೂಕು ಬಿಇಒ ಜಯಲಕ್ಷ್ಮೀ, ಮುಖಂಡ ಮುನಿಯಪ್ಪ, ಚನ್ನಪಟ್ಟಣ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಬಿಡದಿ ಸ್ಮಾರ್ಟ್ ಸಿಟಿ ಅಧ್ಯಕ್ಷವರದರಾಜು, ಜಿಲ್ಲಾ ನಗರಾಭಿವೃದ್ಧಿ ಮಾಜಿ ಅಧ್ಯಕ್ಷನಾಗರಾಜು, ಮರಳವಾಡಿ ಗ್ರಾಪಂ ಉಪಾಧ್ಯಕ್ಷ ಇಂತೂ, ರಾಮನಗರ ಪ್ರವೀಣ್, ಪ್ರಾಧಿಕಾರದಸದಸ್ಯರಾದ ಆನಂದ ಫೈ, ಸಿದ್ದೇಶ್‌ಕುಮಾರ್, ಶಿವರಾಜ್, ನಾಗೇಂದ್ರ, ರಾಮಚಂದ್ರ, ಕಾಳಯ್ಯ, ಪಂಚಾಯ್ತಿ ಉಪಾಧ್ಯಕ್ಷೆ ಹೇಮಲತಾ, ಮಂಜುಳಾ ಲಕ್ಷ್ಮೀಪತಿ, ಚಂದ್ರಪ್ರಭ, ಸಂಪತ್ ಕುಮಾರ್, ಮಾಗಡಿ ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಕನಕಪುರ ನಗರಸಭೆ ಸದಸ್ಯ ಮಾಲತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.