ತಾಲೂಕು ಕಚೇರಿ ಕಡತ ದುರುಪಯೋಗ
Team Udayavani, Jun 4, 2022, 3:38 PM IST
ಚನ್ನಪಟ್ಟಣ: ತಾಲೂಕಿನ ಕಚೇರಿಯ ಕಡತವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ದ್ವಿತೀಯ ದರ್ಜೆ ನೌಕರ ಅಮಾನತು ಗೊಂಡಿರುವ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಜಮೀನುಗಳ ಕಡತ ವಿಲೇವಾರಿ ವಿಚಾರವಾಗಿ ವ್ಯಾಪಕ ಗೋಲ್ ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೆ ಇತ್ತು. ಈ ಅಕ್ರಮಕ್ಕೆ ದ್ವಿತೀಯ ದರ್ಜೆ ನೌಕರ ಅಮಾ ನತು ಗೊಂಡು ಶಿಕ್ಷೆಗೆ ಒಳಗಾಗಿದ್ದಾನೆ. ತಾಲೂಕು ಕಚೇರಿಯ ಮಂಜೂರಾತಿ ವಿಭಾಗದ ದ್ವಿತೀಯ ದರ್ಜೆ ಸಹಾ ಯಕ ಬಿ.ಕೆ. ಹರೀಶ್ ಅಮಾನತುಗೊಂಡಿದ್ದು, ಕೆಲಸದಲ್ಲಿ ಬೇಜವಾಬ್ದಾರಿ ಹಾಗೂ ಅಶ್ರದ್ಧೆ ತೋರಿದ ಆರೋಪದ ಮೇರೆಗೆ ಜಿಲ್ಲಾಧಿಕಾರಿ ಡಾ. ಅನಾಶ್ ಮೆನನ್ ರಾಜೇಂದ್ರನ್ ಅಮಾನತು ಆದೇಶ ಹೊರಡಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಯಾವಾಗ!: ಚನ್ನಪಟ್ಟಣ ತಾಲೂಕು ಕಚೇರಿಯ ಕಡತವನ್ನು ದುರುಪಯೋಗ ನಡೆಯುತ್ತಿತ್ತು. ಸಾಕ್ಷಿ ಸಮೇತ ಸಿಕ್ಕಿಕೊಂಡ ಈತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಾಗೂ ಶಿಸ್ತುಕ್ರಮ ಕೈಗೊಳ್ಳುವಂತೆ ಚನ್ನಪಟ್ಟಣ ತಹಶ್ರೀಲ್ದಾರ್ ಹರ್ಷವರ್ಧನ್ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ವರದಿ ಆದರಿಸಿ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ. ನಕಲಿ ಸಾಗುವಳಿ ದಾಖಲೆ ಸೃಷ್ಟಿ: ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಗೋಮಾಳ ಜುಮೀನು ಇದ್ದು, ಹಲವು ಮಂದಿ ಈಗಾಗಲೇ ಸಾಗುವಳಿ ನಡೆಸುತ್ತಿದ್ದಾರೆ. ಅದರಂತೆ ಅನೇಕ ವರ್ಷಗಳ ಹಿಂದೆ ಕೆಲ ರೈತರಿಗೆ ಸಾಗುವಳಿ ಚೀಟಿ ಪಡೆದುಕೊಂಡು ವ್ಯವಸಾಯ
ಮಾಡುತ್ತಿದ್ದಾರೆ. ಬಹಳಷ್ಟು ಮಂದಿಗೆ ಸಾಗುವಳಿ ಚೀಟಿಯೂ ಸಿಗದೇ, ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದ್ದು, ಪೋಡಿ ದುರಸ್ತಿಯೂ ಆಗದೆ ಮತ್ತೆ ಕೆಲವರು ಸಾಗುವಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಕಂದಾಯ ಇಲಾಖೆ ಕೆಲವು ಅಧಿಕಾರಿಗಳು ಭೂ ಮಾಫಿಯಾ ದವರೊಂದಿಗೆ ಕೈಜೋಡಿಸಿ ನಕಲಿ ಸಾಗುವಳಿ ಪತ್ರ ಸೃಷ್ಟಿಸುವ ಆರೋಪ ಇತ್ತು. ಇದಲ್ಲದೇ ಈಗಾಗಲೇ ಸಾಗುವಳಿ ಮಾಡುತ್ತಿರುವ ರೈತರ ಮೂಲ ದಾಖಲೆ ಗಳನ್ನು ಕಡತದಿಂದ ತೆಗೆದು, ನಕಲಿ ಸಾಗುವಳಿದಾರರಿಗೆ ದಾಖಲೆ ಸೃಷ್ಟಿಸುವ ಕೆಲಸ ಕೂಡ ನಡೆಸು ಆರೋಪ ಮಾಡಲಾಗುತ್ತಿತ್ತು.
ಈ ದುರುಪಯೋಗದ ಪ್ರಕರಣದಲ್ಲಿ ಕಂದಾಯ ಇಲಾಖೆ ನೌಕರನೊಬ್ಬ ಸದ್ಯಕ್ಕೆ ಸಿಕ್ಕಿಕೊಂಡಿದ್ದಾನೆ. ಈ ಪ್ರಕರಣದ ಹಿಂದೆ ಸೂಕ್ಷ್ಮವಾಗಿ ತನಿಖೆ ನಡೆಸಿದರೆ, ಇಲಾಖೆಯ ಹಲವಾರು ನೌಕರರು ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ!: ಅಮಾನತಾಗಿರುವ ಬಿ.ಕೆ. ಹರೀಶ್ ಕುಮಾರ್ ಚನ್ನಪಟ್ಟಣ ತಾಲೂಕು ಕಚೇರಿ ಭೂ ಮಂಜೂರಾತಿಯ ಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸನಿರ್ವಹಿಸುತ್ತಿದ್ದನು. ಈತ ಮಳೂರು ಹೋಬಳಿ ಕೋಲೂರು ಗ್ರಾಮದ ಸರ್ವೆ ನಂ.118ರ ಮೂಲ ಮಂಜೂರು ಕಡತವನ್ನ ಮೇಲಧಿಕಾರಿಗಳ ಹಾಗೂ ಶಾಖೆಯ ವಿಷಯ ನಿರ್ವಾಹಕರ ಅನುಮತಿ ಇಲ್ಲದೇ ಇದೇ ಮೇ 27ರಂದು ಕಚೇರಿಯಿಂದ ತೆಗೆದುಕೊಂಡು ಹೋಗಿ, ಮೇ 30ಕ್ಕೆ ಈ ಕಡತವನ್ನು ಕಚೇರಿಗೆ ಹಿಂದುರಿಗಿಸಿದ್ದನು. ಈ ಬಗ್ಗೆ ಮಾಹಿತಿ ತಿಳಿದು ಬಂದ ತಹಶೀಲ್ದಾರ್ ಈ ಕಡತಗಳನ್ನು ಪರಿಶೀಲಿಸಿದಾಗಮೂಲ ಕಡಕದ ಪುಟಗಳನ್ನು ತೆಗೆದು ನಕಲಿ ದಾಖಲೆಗಳನ್ನು ಆ ಜಾಗಕ್ಕೆ ಸೇರಿಸಲಾಗಿತ್ತು. ಕಚೇರಿಯ ಕಡತವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈತನ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.