ಭೂತ ಬಂಗಲೆಯಂತಿವೆ ತಾಪಂ ವಸತಿಗೃಹಗಳು


Team Udayavani, Jul 31, 2023, 2:51 PM IST

ಭೂತ ಬಂಗಲೆಯಂತಿವೆ ತಾಪಂ ವಸತಿಗೃಹಗಳು

ಮಾಗಡಿ: ಪಟ್ಟಣದ ತಾಲೂಕು ಪಂಚಾಯ್ತಿ ವಸತಿಗೃಹದಲ್ಲಿ ಅಕ್ಷರಶಃ ಭೂತ ಬಂಗಲೆಯಂತಿವೆ. ಭಯದ ವಾತಾವರಣದಲ್ಲಿ ಕೆಲ ನೌಕರರು ವಾಸ ಮಾಡುತ್ತಿದ್ದಾರೆ.

ವಸತಿಗೃಹಗಳ ಸುತ್ತಲು ಗಿಡಗಂಟಿಗಳು ಬೆಳೆದು ನಿಂತಿವೆ. ಸಂಜೆಯಾಗುತ್ತಿದ್ದಂತೆ ವಿಷಜಂತುಗಳ ಓಡಾಡುತ್ತಿರುತ್ತವೆ. ವಿದ್ಯುತ್‌ ಸಮಸ್ಯೆಯೂ ಮತ್ತೂಂದು. ದೀಪದ ಕೆಳಗೆ ಕತ್ತಲು ಎಂಬಂತೆ ಸರ್ಕಾರಿ ಕಚೇರಿಯ ಬಳಿಯೇ ವಸತಿ ಗೃಹಗಳ ಸ್ಥಿತಿ ಹೀಗಾದರೆ ಗ್ರಾಮೀಣ ಜನರು ಏನೇನು ನಿರೀಕ್ಷಿಸಲು ಸಾಧ್ಯ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಮಾಗಡಿ ಪಟ್ಟಣದ ಗಾಂಧಿವೃತ್ತದಲ್ಲಿ ತಾಲೂಕು ಪಂಚಾಯಿತಿಗೆ ಸೇರಿದ ಸುಮಾರು 12ಕ್ಕೂ ಹೆಚ್ಚು ವಸತಿ ಗೃಹಗಳಿವೆ. ಈ ವಸತಿ ಗೃಹಗಳು ನಿರ್ಮಾಣ ಗೊಂಡು ಸುಮಾರು 60 ವರ್ಷಗಳು ಕಳೆದಿದೆ. ಈ ಕಟ್ಟಡಗಳ ಸ್ಥಿತಿ ಹೇಳತೀರದು, ಅಷ್ಟು ಸುಂದರವಾಗಿದ್ದವು. ಈಗೆಲ್ಲ ಕಟ್ಟಡಗಳು ತೀರ ಶಿಥಿಲಗೊಂಡು ಬಣ್ಣಬಣ್ಣ ಕಂಡೇ ಇಲ್ಲ, ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಳೆ ಬಂದರಂತೂ ವಸತಿಗೃಹಗಳ ಚಾವಣೆ ಸೋರುತ್ತವೆ. ಮೇಲ್ಚಾವಣೆ ದಿನೆ ದಿನೇ ಕಳಚಿ ಬೀಳುತ್ತಿವೆ. ಗೋಡೆಗಳೆಲ್ಲವೂ ಹಸಿರು ಪಾಚಿಯಿಂದ ಗಬ್ಬುನಾರುತ್ತಿದ್ದು, ಜತೆಗೆ ಗೋಡೆಗಳು ಸಹ ಬಿರುಕು ಬಿಟ್ಟಿವೆ. ವಸತಿ ಗೃಹಗಳ ಸುತ್ತಲು ಗಿಡಗಂಟಿಗಳು ಬೆಳೆದು ನಿಂತಿವೆ. ಸೊಳ್ಳೆಗಳ ಉತ್ಪತ್ತಿಯ ಕೇಂದ್ರವಾಗಿದೆ.

ಇಲ್ಲಿ ವಾಸಿಸುವ ನೌಕರರು ಅಕ್ಷರಶಃ ರೋಗಬಾಧೆಯ ಭೀತಿಯಲ್ಲಿ ಸುಮಾರು 5 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಉಳಿದ ಕಟ್ಟಡಗಳು ವಾಸ ಮಾಡಲಾಗದೆ ಪಾಳು ಬಿದ್ದಿವೆ. ಪಾಳು ಬಿದ್ದ ಕಟ್ಟಡಗಳಂತೂ ಭೂತ ಬಂಗಲೆಯಂತಿವೆ. ತಿರುಗಿ ಸಹ ನೋಡಲು ಅಲ್ಲಿನ ಜನರೇ ಹೆದರುತ್ತಾರೆ. ಒಂದು ಕಾಲದಲ್ಲಿ ಈ ವಸತಿ ಗೃಹಗಳು ಸುಂದರ ಮತ್ತು ಶ್ರೀಮಂತವಾಗಿದ್ದವು. ಈ ವಸತಿ ಗೃಹದ ಕಾಂಪೌಂಡ ಒಳಗೆ ಯಾರು ಹೋಗುವಂತಿರಲ್ಲಿಲ್ಲ, ಸದಾ ಗೇಟ್‌ ಬಾಗಿಲು ಹಾಕಿಕೊಂಡೇ ಸಂಚರಿಸಬೇಕಿತ್ತು. ಬೇರೆ ಜನರ ಒಳಗೆ ಪ್ರವೇಶಕ್ಕೆ ಅವ ಕಾಶವೇ ಇರಲಿಲ್ಲ, ಪರಿಚಯಸ್ಥರ ಮೂಲಕವೇ ವಸತಿಗೃಹಗಳಲ್ಲಿನ ಅಧಿಕಾರಿಗಳ, ಸಿಬ್ಬಂದಿಗಳ ಭೇಟಿ ಮಾಡಬೇಕಿತ್ತು. ವಸತಿ ಗೃಹದ ಮುಂಭಾಗ ಹೂ ಗಿಡಗಳ ಕುಂಡ ಗಳ ಅಲಂಕಾರ, ಪರಿಸರ ಪ್ರಜ್ಞೆ ಜನರಲ್ಲಿ ಜಾಗೃತಿ ಉಂಟು ಮಾಡುವಂತಿತ್ತು. ವಸತಿ ಗೃಹಗಳ ಸುತ್ತಲು ಸ್ವಚ್ಛಗೊಳಿಸಲು ಸಿಬ್ಬಂದಿಗಳು ಸಹ ನೇಮಕಗೊಂಡಿದ್ದರು. ಈಗ ಕನಿಷ್ಟ ಕಚೇರಿಯ ಕೆಲಸ ಕಾರ್ಯ ನಿರ್ವಹಸಲು ಸಿಬ್ಬಂದಿಗಳೇ ಇಲ್ಲದೆ, ಇರುವ ವರಿಂದಲೇ ಕೆಲಸ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಸತಿ ಗೃಹಗಳ ಕಡೆ ಗಮನಹರಿಸುವುದಾದರೂ ಯಾರು ಎಂಬ ಪ್ರಶ್ನೆ ಅಧಿಕಾರಿಗಳದ್ದಾಗಿದೆ. ಹೀಗಿರುವ ಇದರ ರಕ್ಷಣೆ, ನಿರ್ವಹಣೆ ಯಾರ ಹೊಣೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸರ್ಕಾರಿ ಜಾಗಗಳು ಒತ್ತುವರಿಯಾಗಿವೆ: ವಸತಿ ಗೃಹದ ಕಟ್ಟಡ ದುರಸ್ತಿಯಾಗುವ ಲಕ್ಷಣವೇ ಇಲ್ಲ. ಇವುಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಕನಿಷ್ಠ ಪಕ್ಷ ಈಗಿರುವ ನೌಕರರಿಗೆ ಮನೆಗಳಿಗೆ ಸುಣ್ಣ ಬಣ್ಣವಾದರೂ ಮಾಡಿಸಿ ಕೊಡಬೇಕಿದೆ. ತಾಲೂಕು ಪಂಚಾಯಿತಿಯ ಸ್ವತ್ತು ರಕ್ಷಣೆ ಮಾಡದಿದ್ದರೆ, ಒತ್ತುವರಿಯಾಗುವ ಸಾಧ್ಯತೆಯೂ ಇದೆ. ಮುಂದೊಂದು ದಿನ ಬೇರೆ ಕಟ್ಟಡಗಳು ತಲೆ ಎತ್ತಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಎಷ್ಟೊ ಸರ್ಕಾರಿ ಜಾಗಗಳು ಒತ್ತುವರಿಯಾಗಿವೆ. ಒತ್ತುವರಿ ಮಾಡಿಕೊಂಡವರು ಕಟ್ಟಡ ಕಟ್ಟಿಕೊಂಡು ಅನುಭವದಲ್ಲಿದ್ದಾರೆ.

ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಅಗತ್ಯ: ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕನಿಷ್ಠ ಪಕ್ಷ ವಸತಿಗೃಹಗಳ ಸುತ್ತಲು ಬೆಳೆದಿರುವ ಗಿಂಡಗಂಟಿಗಳನ್ನು ತೆಗೆಸುವ ಮೂಲಕ ಸ್ವಚ್ಛಗೊಳಿಸಬೇಕಿದೆ. ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಸಹ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ. ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಮನಸ್ಸು ಮಾಡಿದರೆ ಮಾತ್ರ ವಸತಿ ಗೃಹದ ಸ್ಥಳ ಉಳಿಯು ತ್ತದೆ. ಇಲ್ಲದಿದ್ದರೆ ಹೊಲಸೆದ್ದು ನಾರುತ್ತಿರುತ್ತದೆ ಎಂಬುದು ಸ್ಥಳೀಯರ ಮಾತನಾಗಿದೆ.

ಭೂತ ಬಂಗಲೆಗಳಲ್ಲೇ 5 ಕುಟುಂಬಗಳು ವಾಸ: ತಾಪಂಗೆ ಸೇರಿದ ತೀರ ಹಳೆಯದಾದ 12ಕ್ಕೂ ಹೆಚ್ಚು ವಸತಿಗೃಹಗಳಿವೆ. ಬಹುತೇಕ ಎಲ್ಲವೂ ಶಿಥಿಲ ಗೊಂಡಿದ್ದು, ಸುತ್ತಲು ಕುರುಚಲು ಗಿಡಗಂಟಿಗಳು ಬೆಳೆದು ನಿಂತಿದೆ. ಮೂಲಸೌಕರ್ಯ ಮರೀಚಿಕೆ ಯಾಗಿದೆ. ಭಯದ ನಡುವೆಯೂ ಹೇಗೋ 5 ಕುಟುಂಬಗಳು ಈ ಭೂತ ಬಂಗಲೆ ಗಳಲ್ಲೇ ವಾಸವಾಗಿದ್ದೇವೆ. ಕನಿಷ್ಠ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛತೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೆಸರೇಳದ ವಸತಿ ಗೃಹ ದಲ್ಲಿ ವಾಸಿಸುವ ನೌಕರರು.

ತಾಲೂಕು ಪಂಚಾಯ್ತಿ ವಸತಿ ಗೃಹ ತೀರ ಶಿಥಿಲಗೊಂಡಿದೆ. ಇಲ್ಲಿನ ವಸತಿ ಗೃಹಗಳು ವಾಸ ಮಾಡಲು ಯೋಗ್ಯವಿಲ್ಲ. ಇಲ್ಲಿನ ವಸತಿ ಗೃಹಗಳನ್ನು ಕೆಡವಿ ಈ ಜಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಚೇರಿ ನಿರ್ಮಿಸ ಬೇಕೆಂಬ ಯೋಜನೆಯಿದೆ. ಜತೆಗೆ ಅಂಗಡಿ ಮಳಿಗೆಗಳನ್ನು ಕಟ್ಟಿಸಿ ಪಂಚಾಯ್ತಿಗೆ ಆದಾಯ ತರುವ ಕೆಲಸ ಮಾಡಲು ಚಿಂತಿಸಿದ್ದೇನೆ. ಈಗಿರುವ ಬಿಇಓ ಕಚೇರಿಯನ್ನು ಪುರಸಭೆ ವಶಕ್ಕೆ ಪಡೆಯಲಾಗುವುದು. – ಎಚ್‌.ಸಿ.ಬಾಲಕೃಷ್ಣ, ಶಾಸಕ, ಮಾಗಡಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Elephant-Camp

Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್‌ ಶೀಘ್ರ ಆರಂಭ?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.