ಟಿಎಪಿಸಿಎಂಎಸ್ ಷೇರುದಾರರಿಗೆ ಡಿವಿಡೆಂಟ್ ನೀಡಲು ಸಮ್ಮತಿ
Team Udayavani, Dec 16, 2020, 3:20 PM IST
ಮಾಗಡಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಒಂದುಕುಟುಂಬ ಇದ್ದಂತೆ, ಅದನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರತಿಯೊಬ್ಬ ಸದಸ್ಯರಪಾತ್ರ ಜವಾಬ್ದಾರಿಯುತವಾದುದು ಎಂದು ಜಿಪಂ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್. ಎನ್.ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಟಿಎಪಿಸಿಎಂಎಸ್‌ನ 2019-20ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಾಹಸಭೆಯಲ್ಲಿ ಮಾತನಾಡಿ, ಸೊಸೈಟಿಯ ಪ್ರತಿಯೊಬ್ಬ ಸದಸ್ಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಹಕ್ಕುವುಳ್ಳವರಾಗಿರುತ್ತಾರೆ. ಜತೆಗೆ ಸೊಸೈಟಿ ಪ್ರಗತಿಗೆ ತಮ್ಮ ಸಲಹೆ ಸೂಚನೆಗಳು ಅತ್ಯಂತ ಅಮೂಲ್ಯವಾದುದು ಎಂದು ಹೇಳಿದರು.
ಡಿವಿಡೆಂಟ್ ನೀಡಲು ಸಮ್ಮತಿ: ಸದಸ್ಯ ಚಂದ್ರಯ್ಯ (ಕಿಟ್ಟಿ) ಮಾತನಾಡಿ, ಸೊಸೈಟಿಯ ಲಾಭಾಂಶದಲ್ಲಿ ಎಲ್ಲ ಸದಸ್ಯರಿಗೆ ಡಿವಿಡೆಂಟ್ ನೀಡಲು ಕಳೆದ ಸಾಲಿನಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಡಿವಿಡೆಂಟರ್ ನೀಡಲು ಒತ್ತಾಯಿಸಿದರು.ಈ ಹಣವನ್ನು ಸದಸ್ಯರಿಗೆ ನೀಡುವುದು ಬೇಡ ಎಂದು ಪ್ರತಿರೋಧ ವ್ಯಕ್ತಪಡಿಸಿದ ಮತ್ತೂಬ್ಬ ಸದಸ್ಯ ಯೋಗಾನಂದ ಅವರು, ಸೊಸೈಟಿ ಅಭಿವೃದ್ಧಿಗೆ ಬಳಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು. ಆದರೂ ಡಿವಿಡೆಂಟ್ ನೀಡುವುದಾಗಿ ಅಧ್ಯಕ್ಷ ರವೀಂದ್ರ ಸಮ್ಮತಿಸಿದರು.
ಪರಿಹಾರ: ಸೊಸೈಟಿಯಲ್ಲಿ ಶೇರುದಾರರಾಗಿರುವ ರೈತ ಸದಸ್ಯರು ಮೃತಪಟ್ಟರೆ ಅವರಕುಟುಂಬಕ್ಕೆಕನಿಷ್ಠ 5 ಸಾವಿರ ರೂ ಪರಿಹಾರ ನೀಡುವಂತೆ ಸದಸ್ಯ ಮಹಾಲಿಂಗಯ್ಯ ಸಭೆಯಲ್ಲಿ ಒತ್ತಾಯಿಸಿದರು. ಮೂರು ಸಾವಿರ ರೂ. ನೀಡಲಾಗುತ್ತಿದೆ. 4 ಸಾವಿರಕ್ಕೆ ಏರಿಸಲಾಗುವುದು ಎಂದು ತೀರ್ಮಾನಿಸಿದರು. ಈ ಸಂಬಂಧ ಷೇರುದಾರರಿಗೆ ಮಾಹಿತಿ ಕೊರತೆಯಿದ್ದು,ಸೊಸೈಟಿ ನಾಮಫಲಕದಲ್ಲಿ ಪ್ರಕಟಿಸುವುದು ಹಾಗೂಪತ್ರಿಕೆಯಲ್ಲಿ ಜಾಹಿರಾತು ನೀಡಲು ಎಚ್.ಎನ್.ಅಶೋಕ್ ಅವರು ಸೊಸೈಟಿಯ ಪ್ರಭಾರ ಕಾರ್ಯದರ್ಶಿ ಎಂ.ಜಿ.ನಾರಾಯಣ್‌ಗೆ ಸೂಚಿಸಿದರು.
ಅವ್ಯವಹಾರವಿಲ್ಲ: ಸೊಸೈಟಿ ಆಸ್ತಿಯಲ್ಲಿ 100/100 ಅಳತೆಯ ನಿವೇಶನವನ್ನು ಸೋದರ ಸಂಸ್ಥೆ ಡೇರಿಗೆ ಮಾರಾಟ ಮಾಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯ ವಾಟರ್ ಬೋರ್ಡ್‌ರಾಮಣ್ಣ ಮಾತನಾಡಿ, ಸೊಸೈಟಿ ಆಸ್ತಿ ಬೇರೆ ಸಂಸ್ಥೆಗೆ ಮಾರಾಟ ಮಾಡಬಹುದು ಎಂಬದು ಕಾನೂನಿನಲ್ಲಿ ಅವಕಾಶವಿದೆಯೇ. ಅವರಿಂದ ಲಿಖೀತ ಮನವಿಬಂದಿತ್ತೆ ಎಂದು ಪ್ರಶ್ನಿಸಿದರು. ಮಾರಾಟಕ್ಕೆ ಅವಕಾಶವಿದ್ದು, ಇದರಿಂದ ಬಂದ ಹಣವನ್ನು ಬೇರೆಡೆ ಸೊಸೈಟಿ ಗೋದಾಮಿಗೆ ಖರೀದಿಸಲಾಗುತ್ತಿದೆ. ಇದರಲ್ಲಿ ಯಾವುದೇ ಅವ್ಯವಹಾರವಿಲ್ಲ ಎಂದು ಅಧ್ಯಕ್ಷ ಸಿ.ಬಿ.ರವೀಂದ್ರ ಉತ್ತರಿಸಿದರು.
ಸೊಸೈಟಿ ಉಪಾಧ್ಯಕ್ಷ ಗೋವಿಂದರಾಜು, ನಿರ್ದೇಶಕರಾದ ವೈ.ಸಿ.ಸಿಂಗ್ರೀಗೌಡ, ಕೆ.ಎಸ್. ಹೊನ್ನಪ್ಪ, ಎ ಸ್.ಎಚ್.ಕುಮಾರಯ್ಯ, ಪೈರೋಜ್ ಪಾಷಾ,ಎಲ್.ಮಂಜುಳಾ,ಜಯ ಲಕ್ಷ್ಮಮ್ಮ,ಹಿರಿಯ ಸದಸ್ಯರಾದ ಎಂ.ಕೆ.ಧನಂಜಯ, ತ್ಯಾಗದೆರೆಪಾಳ್ಯದ ರಂಗಸ್ವಾಮಯ್ಯ, ಸೀಗೇಕುಪ್ಪೆ ಶಿವಣ್ಣ, ಕಲ್ಕೆರೆ ಕುಮಾರ್, ಎಚ್.ಜೆ.ಪುರುಶೋತ್ತಮ್, ಸೊಸೈಟಿಯ ಪ್ರಬಾರಿ ಕಾರ್ಯದರ್ಶಿ ಎಂ.ಜಿ.ನಾರಾಯಣ್, ಸಿಬ್ಬಂದಿ ಎಚ್.ಜೆ.ಪ್ರವೀಣ್, ಎಚ್.ಆರ್. ಚಂದ್ರಶೇಖರಯ್ಯ,ಕೆ.ಪಿ ಸವಿತಾ,ಆರ್.ಶ್ರೀನಿವಾಸ್,ಎಚ್.ಮುನಿರಾಜು, ಭಾಗ್ಯಮ್ಮ, ಗಾಯತ್ರಿದೇವಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.