ದೇವಸ್ಥಾನ ತೆರವು: ಜನತೆ ಆಕ್ರೋಶ
Team Udayavani, Jan 31, 2020, 4:19 PM IST
ಚನ್ನಪಟ್ಟಣ: ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿರುವ ಶನಿ ದೇವರ ದೇವ ಸ್ಥಾನವನ್ನು ತೆರವು ಮಾಡಲು ಮುಂದಾದ ತಾಲೂಕು ಆಡಳಿತದ ಕ್ರಮವನ್ನು ಸಾರ್ವಜನಿಕರು ವಿರೋಧಿಸಿದ ಘಟನೆ ನಡೆದಿದೆ.
ಸಾರ್ವಜನಿಕ ಸ್ಥಳಗಳಲ್ಲಿನ ಮಂದಿರ, ಮಠ, ಮಸೀದಿಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿ ರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿನ ಶನಿ ದೇವರ ದೇವಸ್ಥಾನವನ್ನು ತೆರವು ಮಾಡುವಂತೆ ಸೋಮವಾರ ಸಂಜೆಯೇ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ನಗರಸಭೆ, ಪೊಲೀಸ್ ನಗರಸಭೆ ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ದೇವಸ್ಥಾನ ತೆರವು ಮಾಡಲು ಆಗುಮಿಸಿದ್ದರು. ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಅಗಲೀಕರಣಕ್ಕೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿರು ಸಾತನೂರು ರಸ್ತೆಯ ಮುಸ್ಲಿಂ ಸಮುದಾಯದ ಸ್ಮಶಾನವನ್ನು ತೆರವು ಮಾಡಿ ಎಂದು ಒಂದು ವರ್ಷದ ಹಿಂದೆಯೇಆದೇಶವಾಗಿದೆ, ಅದನ್ನು ತೆರವು ಮಾಡಿಲ್ಲ. ಆದರೆ ಯಾರಿಗೂ ತೊಂದರೆ ಯಾಗದ ದೇವಸ್ಥಾನ ತೆರವು ಮಾಡಲು ಬಂದಿದ್ದೀರಿ ಎಂದು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಪಟ್ಟಣದಲ್ಲಿ ಸಾರ್ವಜನಿಕ ಸ್ಥಳದ ಎಲ್ಲಾ ಸ್ಮಶಾನ, ದೇವಸ್ಥಾನಗಳನ್ನು ತೆರವು ಮಾಡಿ ಬಳಿಕ ಇದನ್ನು ತೆರವು ಮಾಡಿ ಎಂದು ಪಟ್ಟುಹಿಡಿದರು. ಜೊತೆಗೆ ಬೆಥನಿ ಚರ್ಚ್‌ನ ಕಾಂಪೌಂಡ್ ಜಾಗ ರಸ್ತೆಗೆ ಸೇರಬೇಕು. ಹಾಕಿದರು ಎಂದು ನಗರಸಭೆ ಅಧಿಕಾರಿಗಳು ಚರಂಡಿ ಕಾಮಗಾರಿಯನ್ನೇ ನಿಲ್ಲಿಸಿದ್ದಾರೆ ಎಂದು ಹರಿಹಾಯ್ದರು. ಆರೋಪಗಳಿಗೆ ಜಗ್ಗದ ತಹಸೀಲ್ದಾರ್ ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದೇವೆ. ಎರಡು ದಿನಗಳಲ್ಲಿ ತೆರವುಗೊಳಿಸಿ ಎಂದು ಸೂಚಿಸಿ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.