ಸರ್ವರಿಗೂ ನ್ಯಾಯ ಕಲ್ಪಿಸಲು ಕಾಂಗ್ರೆಸ್ ಬೆಂಬಲಿಸಿ
Team Udayavani, May 10, 2018, 5:37 PM IST
ಮಾಗಡಿ: ಕ್ಷೇತ್ರದಲ್ಲಿ ಸರ್ವ ಧರ್ಮಿಯರಿಗೂ ಸಾಮಾಜಿಕ ನ್ಯಾಯಕಲ್ಪಿಸಿ ಕೊಡುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಯಶಸ್ವಿಯಾಗಿದ್ದಾರೆ ಎಂದು ರಾಧಾ ಎಚ್.ಸಿ. ಬಾಲಕೃಷ್ಣ ಹೇಳಿದರು.
ಪಟ್ಟಣದ ಕಲ್ಯಾಗೇಟ್ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತಿ ಕಾಂಗ್ರೆಸ್ ಅಭ್ಯರ್ಥಿ ಎಚ್ .ಸಿ.ಬಾಲಕೃಷ್ಣ ಪರ ಪಟ್ಟಣದ 17ನೇ ವಾರ್ಡ್‌ನಲ್ಲಿ ಮತಯಾಚಿಸಿ ಮಾತನಾಡಿ, ನನ್ನ ಪತಿ ಎಚ್.ಸಿ.ಬಾಲಕೃಷ್ಣ ದಿನದ 24 ಗಂಟೆಗಳ ಕಾಲ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದರು.
ನಮ್ಮ ಕುಟುಂಬದ ಯಾವುದೇ ಕಾರ್ಯಕ್ರಮಗಳಿದ್ದರೂ ಭಾಗವಹಿಸದೆ ಕಾರ್ಯಕರ್ತರ, ಮುಖಂಡರ ಕಾರ್ಯಕ್ರಮಗಳಿಗೆ ಭಾಗಿಯಾಗಿ ತಾಲೂಕಿನ ಜನತೆಯೇ ನನ್ನ ಬಂಧು, ಬಳಗ ಎಂದು ತಿಳಿದಿದ್ದಾರೆ. ನಮ್ಮ ಮಾವ ದಿ.ಚನ್ನಪ್ಪ ಅವರ ಧ್ಯೇಯವನ್ನೇ ಪತಿ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಡವರ, ದೀನದಲಿತರ,
ಅಲ್ಪಸಂಖ್ಯಾತರ ಪರ ದುಡಿದಿದ್ದಾರೆ ಎಂದು ತಿಳಿಸಿದರು. ಕೆಲ ವಿರೋಧ ಪಕ್ಷದ ಮುಖಂಡರು ನಮ್ಮ ಕುಟುಂಬ 7 ಬಾರಿ ಶಾಸಕರಾಗಿರುವುದನ್ನೇ ಮುಂದಿಟ್ಟುಕೊಂಡು ಆರೋಪ ಮಾಡುವುದು ಆರೋಗ್ಯಕರ ರಾಜಕಾರಣವಲ್ಲ, ಯಾರೋ ರಾಜಕಾರಣಿಗಳಾಗಲಿ ಮಾಡಿರುವ ಜನಪರ ಅಭಿವೃದ್ಧಿ ಬಗ್ಗೆ ಜನರ ಮುಂದಿಟ್ಟು ಮತಯಾಚಿಸಲಿ ಅದನ್ನು ಬಿಟ್ಟು ಕೀಳು ಮಟ್ಟದ ರಾಜಕಾರಣ ಮಾಡುವುದು ನಾಡಪ್ರಭು ಕೆಂಪೇಗೌಡರಿಗೆ ಆಗೌರವತಂದಂತಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಮಂಜು ವಿರುದ್ಧ ಆರೋಪಿಸಿದರು.
ತಾಲೂಕು ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಎಚ್ .ಸಿ.ಬಾಲಕೃಷ್ಣ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸವನ್ನು ಮತದಾರರ ಬಳಿ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಕೆಲವರು ಅಧಿಕಾರ ಇದ್ದಾಗ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅವರ ಕೊಡುಗೆ ತಾಲೂಕಿನಲ್ಲೆ ಏನು ಎಂದು ಮತದಾರರಲ್ಲಿ ಹೇಳಲಿ ಅದನ್ನು ಬಿಟ್ಟು ಎಚ್ .ಸಿ.ಬಾಲಕೃಷ್ಣ ಅವರ ವಿರುದ್ಧ ಸುಖಾ ಸುಮ್ಮನೆ ಪ್ರಚಾರಕ್ಕೆ ಆರೋಪಿಸುವುದು ಒಳಿತಲ್ಲ ಎಂದು ವಾಗ್ಧಾಳಿ ನಡೆಸಿದರು.
ಪ್ರಚಾರಕ್ಕೆ ಭಾಗವಹಿಸುವ ಮುನ್ನಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಹೂವಿನ ಹಾರ ಎರಚುವ ಮೂಲಕ ನೂರಾರು ಮಂದಿ ಅದ್ಧೂರಿಯಾಗಿ ಬರಮಾಡಿ ಕೊಂಡರು. ತಾಪಂ ಮಾಜಿ ಅಧ್ಯಕ್ಷ ಕಾಂತರಾಜು, ಭೋಜರಾಜು, ವಕೀಲ ಮಂಜುನಾಥ್, ದೇವರಾಜಮ್ಮ, ರಮಾಮಣಿ, ಮಂಜುಳಾ, ಗಾಯಿತ್ರಿ, ಸುಗುಣ, ವೀಣಾ, ಸುಧಾ ಅಶ್ಚಿತ್, ರೇಖಾ ಶ್ರೀನಿವಾಸ್, ಚೇತನ ದೀಪಕ್, ನೇಕಾರರ ಸಂಘದ ಅಧ್ಯಕ್ಷ ರಾಘವೇಂದ್ರ, ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ್ ಶೇಖರ್, ನರಸಿಂಹಮೂರ್ತಿ ಡಿಂಗ್ರಿ, ಕೆ.ಟಿ.ಆರ್ ಮೋಹನ್, ನವೀನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.