ಪರಮಾತ್ಮನ ಪಾದ ಸೇರಿದ ಬೆಟ್ಟದ ಹೂ
Team Udayavani, Oct 31, 2021, 5:26 PM IST
ಕುದೂರು: ಮಾಗಡಿ ತಾಲೂಕಿನ ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನ ಮಠದೊಂದಿಗೆ ಆಗಲಿದ ನಟ ಪುನೀತ್ ರಾಜ್‌ಕುಮಾರ್ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. 2015 ರಲ್ಲಿ ಸೋಲೂರು ಆರ್ಯ ಈಡಿಗರ ಮಠದ ಮೈದಾನದಲ್ಲಿ ಡಾ.ರಾಜ್‌ಕುಮಾರ್ ರಂಗಮಂದಿರವನ್ನು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಉದ್ಘಾಟಿಸಿದ್ದರು. ತಂದೆಯ ಹೆಸರಿನ ರಂಗಮಂದಿರವನ್ನು ಆರ್ಯ ಈಡಿಗ ಸಂಸ್ಥಾನ ಪೀಠದ ಆಶ್ರಯದಲ್ಲಿ ಉದ್ಘಾಟಿಸುತ್ತಿರುವುದು ನನಗೆ ಸಂತಸ ತಂದಿದೆ. ಇದೊಂದು ಪ್ರಶಾಂತ ವಾತಾವರಣ ಸ್ಥಳ. ಈ ರಂಗಮಂದಿರವನ್ನು ಉತ್ತಮ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಿ ಎಂದು ಹೇಳಿದ್ದರು. ಈಗ ಅವರು ನಮ್ಮನ್ನು ಅಗಲಿರುವುದು ಅತೀವವಾದ ಸಂಕಟ ತರಿಸಿದೆ ಎಂದು ಆರ್ಯ ಈಡಿಗ ಸಂಘದ ವೆಂಕಟೇಶ್ ನೆನೆಪು ಮಾಡಿಕೊಂದು ಕಂಬನಿ ಮಿಡಿದರು.
ಇದನ್ನೂ ಓದಿ:- “ಕೃಷಿ ವಿದ್ಯಾರ್ಥಿಗಳು ಆದರ್ಶ ರೈತರಾಗಬೇಕು’
‘ಸೋಲೂರು ಗ್ರಾಮದಲ್ಲಿ ಆರ್ಯ ಈಡಿಗ ಮಠದ ಉದ್ಘಾಟನೆ ಸಮಾರಂಭಕ್ಕೆ ಬಂದಿದ್ದಾಗ ಡಾ.ರಾಜ್ ಕುಮಾರ್ ಅವರಲ್ಲಿದ್ದ ವಿನಯತೆಯನ್ನು ಪುನೀತ್ ಅವರಲ್ಲಿ ಕಂಡಿದ್ದೆ. ಅವರ ಸರಳ ಗುಣ ಅಚ್ಚರಿ ಮೂಡಿಸಿತು. ಪುನೀತ್ ಅವರ ನಡುವಳಿಕೆ ಅನುಕರಣೀಯ. ಅಪ್ಪು ಅಭಿಮಾನಿಗಳಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ.’ – ಹೆಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ
‘ಬೆಟ್ಟದ ಹೂವೊಂದು ಪರಮಾತ್ಮನ ಪಾದ ಸೇರಿ ಯುವರತ್ನ ನೀನೇ ವಿನಿಯದ ರಾಜಕುಮಾರ ಎಂದು ಹೇಳಿದಂತಾಗುತ್ತಿದೆ. ಅವರ ಅಗಲಿಕೆಯಿಂದ ನನಗೆ ಅತೀವ ದುಃಖ ತರಿಸಿದೆ.’ – ಎ.ಮಂಜುನಾಥ್, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.