ಜಿಲ್ಲಾಧಿಕಾರಿಗಳ ವಿರುದ್ಧ ಹೋರಾಟಗಾರರ ಆಕ್ರೋಶ
Team Udayavani, Sep 26, 2021, 5:28 PM IST
ಕನಕಪುರ: ಈ ದೇಶದಲ್ಲಿ ರೈತರನ್ನು ಕೆಣಕಿದರೆ ಏನಾಗುತ್ತೆ ಅಂಥ ಜಿಲ್ಲಾಧಿಕಾರಿಗಳು ಇತಿಹಾಸ ವನ್ನು ಒಮ್ಮೆ ನೋಡಲಿ ಎಂದು ರೈತ ಸಂಘದ ಅರಳಿಮಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಚನ್ನಬಸಪ್ಪ ವೃತ್ತದಲ್ಲಿ ಜಮಾವಣೆಗೊಂಡಿದ್ದ ರೈತ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ, ರೈತ ಹೋರಾಟಗಾರರು ರಾಜ್ಯದ ಎಲ್ಲ ಡೀಸಿಗಳನ್ನು ನೋಡಿದ್ದೇವೆ. ರೈತರ ಮೇಲೆ ಲಾಠಿ ಪ್ರಹಾರ ಮಾಡಿದವರು, ಕೇಸ್ ಹಾಕಿದವರು ಏನಾಗಿದ್ದಾರೆ ಎಲ್ಲವನ್ನು ಕಂಡಿದ್ದೇವೆ. ರಾಮನಗರ ಬಂಧಿಖಾನೆ ನಮಗೆ ಹೊಸದೇನಲ್ಲ. ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು. ಈ ನೆಲದ ಕಾನೂನಿಗೆ ಗೌರವ ಕೊಡಬೇಕು ಎಂಬ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಪೊಲೀಸರನ್ನು ಛೂ ಬಿಟ್ಟು ನಮ್ಮನ್ನು ಬಂಧಿಸಿದ್ದೀರಿ. ನಿಮಗೆ ಶಕ್ತಿ ಇದ್ದರೆ ನಿಮ್ಮ ಅಧಿಕಾರ ಬಳಸಿಕೊಂಡು ನಮ್ಮನ್ನು ಪರಪ್ಪನ ಆಗ್ರಹಾರ ಜೈಲಿಗೆ ಕಳುಹಿಸಿ ಎಂದು ಸವಾಲು ಹಾಕಿದರು.
ಕಾರ್ತಿಕ ಮಾಸದಲ್ಲಿ ಹೋರಾಟ ಚುರುಕು: ಅನ್ನ ಹಾಕುವ ಅನ್ನದಾತರನ್ನ ಜೈಲಿಗೆ ಹಾಕಿದ ಮಾತ್ರಕ್ಕೆ ಹೆದರಿ ವಾಪಸ್ ಓಡಿ ಹೋಗುವ ಜಾಯಮಾನ ನಮ್ಮದಲ್ಲ. ಕನಕಪುರದಲ್ಲೇ ಇದ್ದು ನಿಮಗೆ ಎಚ್ಚರಿಕೆ ಕೊಟ್ಟು ಹೋಗಲು ಬಂದಿದ್ದೇವೆ. ನಿವೇ ಡ್ಯಾಂ ಕಟ್ಟಿ ಸ್ವಾಗತ ಮಾಡುತ್ತೇವೆ. ತಾತ್ಕಾಲಿಕವಾಗಿ ನಮ್ಮ ಹೋರಾಟ ಮೊಟಕುಗೊಳಿಸಿದ್ದೇವೆ. ಕಾರ್ತಿಕ ಮಾಸದಲ್ಲಿ ಮತ್ತೆ ಹೋರಾಟ ಮುಂದುವರಿಯಲಿದೆ ಎಂದರು.
ಉಗ್ರ ಹೋರಾಟದ ಎಚ್ಚರಿಕೆ: ರೈತ ಮುಖಂಡ ದೇವರಾಜು ಮಾತನಾಡಿ, ನಮಗೆ ಸೇರಬೇಕಾದ ನೀರು ಕೇಳಲು ಬಂದರೆ ದರೋಡೆಕೋರರು, ದೇಶದ್ರೋಹಿಗಳ ರೀತಿಜಿಲ್ಲಾಧಿಕಾರಿಗಳ ವಿರುದ್ಧ ಹೋರಾಟಗಾರರ ಆಕ್ರೋಶ ಪಾದಯಾತ್ರೆ ಮಾಡುತ್ತಿದ್ದ ರೈತರನ್ನು ಬಂಧಿಸಿದ ಜಿಲ್ಲಾಡಳಿತ ವಿರುದ್ಧ ನಗರದ ಚನ್ನಬಸಪ್ಪ ವೃತ್ತದಲ್ಲಿ ಹೋರಾಟಗಾರರು ಧಿಕ್ಕಾರ ಕೂಗಿದರು.
ಬಂಧಿಸಿ ಅಪಮಾನಿಸಿದ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ನಮ್ಮ ನೆಲದ ಹಕ್ಕನ್ನು ಕೇಳುವ ಸ್ವಾತಂತ್ರ್ಯ ನಮಗಿಲ್ಲವೇ? ಶಾಂತಿಯುತವಾಗಿ ನಡೆಸುತ್ತಿದ್ದ ಹೋರಾಟಗಾರರನ್ನ ಬಂಧಿಸುವ ಪ್ರಮೇಯ ಏನಿತ್ತು? ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ನಿರಂತರ: ರೈತ ಸಂಘದ ಸಂಚಾಲಕಿ ಭಾಗ್ಯ ಶ್ರೀ ಮಾತನಾಡಿ, ಸಮಾಜಕ್ಕೆ ರೈತರ ಮೇಲೆ ಸ್ವಲ್ಪವೂ ಕೃತಜ್ಞತೆ ಇಲ್ಲ. ಯಾರ ಋಣವನ್ನು ಬೇಕಾದರೂ ತೀರಸಬಹುದು ಆದರೆ ರೈತರ ಖುಣ ತೀರಿಸಲು ಸಾಧ್ಯವಿಲ್ಲ. ಹುಟ್ಟಿದ 6ತಿಂಗಳ ಮಕ್ಕಳಿಂದ ಹಿಡಿದು ಮನುಷ್ಯ ತನ್ನ ಜೀವಿತಾವದಿಯಲ್ಲಿ ರೈತರು ಬೆಳೆದ ಅನ್ನವನ್ನೇ ತಿನ್ನಬೇಕು. ರೈತರು ಕೃಷಿ ಜೊತೆಗೆ ನಮ್ಮ ನೆಲ-ಜಲಕ್ಕಾಗಿ ಹೋರಾಟ ಮಾಡುವಂತಹ ಸಂದರ್ಭ ಸೃಷ್ಟಿಮಾಡಿರುವ ವ್ಯವಸ್ಥೆ ಬದಲಾಗಬೇಕು. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಣೆಕಟ್ಟು ನಿರ್ಮಾಣ ಮಾಡುವವರೆಗೂ ನಮ್ಮ ಹೋರಾಟದ ನಿರಂತರ ಎಂದರು.
ಮೇಕೆದಾಟು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸಂಪತ್ ಕುಮಾರ್, ಚಿಕ್ಕಬಳ್ಳಾಪುರ ನಾರಾಯಣಸ್ವಾಮಿ,ಚಲುವಯ್ಯ, ಸಂಚಾಲಕ ಪಯಾಜ್, ಅಶ್ವತ್ಥಗೌಡ, ರೈತ ಸಂಘದ ಗೌರವ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ
ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯ ದರ್ಶಿ ಮುಳ್ಳಳ್ಳಿ ಮಂಜುನಾಥ್ ಸೇರಿದಂತೆ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.