ಸಮಸ್ಯೆ ಕೇಳಬೇಕಾದ ಜನಪ್ರತಿನಿಧಿಗಳೇ ನಾಪತ್ತೆ
Team Udayavani, Dec 6, 2022, 4:10 PM IST
ಕನಕಪುರ: ಕ್ಷೇತ್ರದ ಶಾಸಕರು ಮತ್ತು ಸಂಸದರು ನಾಪತ್ತೆಯಾಗಿದ್ದಾರೆ. ಕ್ಷೇತ್ರದ ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿ ಗೌಡ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ರಾಜಕಾರಣದಲ್ಲಿಮುಳುಗಿ ಹೋಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಕ್ಷೇತ್ರವನ್ನು ಮರತೇ ಬಿಟ್ಟಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ.ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ.ಯಾವುದೇ ಕೆಲಸ-ಕಾರ್ಯಗಳನ್ನು ಮಾಡಿ ಕೊಡಬೇಕಾದರೆ ಜನರು ಹತ್ತಾರು ಬಾರಿ ಅಲೆದಾಡುವಂತಾಗಿದೆ ಎಂದರು.
ಜನರ ಕೈಗೆ ಸಿಗುತ್ತಿಲ್ಲ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ಆರೋಗ್ಯ ಸೇವೆ ಸಿಗದೇ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇತ್ತ ಜನಪ್ರತಿನಿಧಿಗಳು ಜನರ ಕೈಗೆ ಸಿಗುತ್ತಿಲ್ಲ. ಜನಸಮಾನ್ಯರು ಯಾರ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕೆಂದು ಚಿಂತಾಕ್ರಾಂತರಾಗಿದ್ದಾರೆ. ಜನರ ಸಮಸ್ಯೆ ಆಲಿಸಿಆಡಳಿತ ಯಂತ್ರವನ್ನು ಸರಿ ದಾರಿಗೆ ತರಬೇಕಾದಶಾಸಕರು, ಸಂಸದರು ಭಾರತ್ ಜೋಡೋ ಯಾತ್ರೆ.ಸ್ವಾತಂತ್ರಕ್ಕಾಗಿ ನಡಿಗೆ ಮಾಡ್ಕೊಂಡು ಬಿಝಿ ಆಗಿದ್ದರೆ ಜನರ ಸಮಸ್ಯೆ ಬಗೆಹರಿಸುವವರು ಯಾರು ಎಂದು ಪ್ರಶ್ನೆ ಮಾಡಿದರು.
ಸರ್ಕಾರದ ಬೊಕ್ಕಸಕ್ಕೆ ನಷ್ಟ: ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ತಾಲೂಕಿನಲ್ಲಿರುವ ಸರ್ಕಾರಿ ಗೋಮಾಳಗಳನ್ನು ಒತ್ತುವರಿ ಮಾಡಿಕೊಂಡು ಕೆಲವರು ಪ್ರಕೃತಿ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ರಾಜಕಾರಣಿಗಳ ಬೆಂಬಲವಿಲ್ಲದೆಅಕ್ರಮ ಗಣಿಗಾರಿಕೆ ನಡೆಯಲು ಸಾಧ್ಯವಿಲ್ಲ. ಗಣಿಗಾರಿಕೆ ನಡೆಸುವವರಿಗೆ ರಾಜಕಾರಣಿಗಳ ಕೃಪಾಶೀರ್ವಾದ ಇರುವುದರಿಂದಲೇ ಕೆಲವರು ರಾಜಾ ರೋಷವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಪಿಂಚಣಿ ಅದಾಲತ್ ಕಾರ್ಯಕ್ರಮ: ಚುನಾವಣೆಸಮೀಪವಾಗುತ್ತಿದ್ದಂತೆ ಅಧಿಕಾರಿಗಳಿಗೆ ಒತ್ತಡ ತಂದು ನಗರವೂ ಸೇರಿದಂತೆ ತಾಲೂಕಾದ್ಯಂತ ಗ್ರಾಮಪಂಚಾಯತಿ ವ್ಯಾಪ್ತಿಗಳಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದು ಮಾತ್ರ ತಪ್ಪಲಿಲ್ಲ.ವಯೋವೃದ್ಧರು, ವಿಶೇಷ ಚೇತನರು, ಪಿಂಚಿಣಿಗಾಗಿತಾಲೂಕು ಕಚೇರಿ ಮುಂದೆ ಕಾದು ಕುಳಿತಿರುವುದುಸಾಮಾನ್ಯವಾಗಿದೆ. ಜನರ ಅನುಕೂಲಕ್ಕೆ ಪಿಂಚಿಣಿಅದಾಲತ್ ಮಾಡಿದ್ದಾರೋ ಅಥವಾ ಪ್ರಚಾರಕ್ಕೆಮಾಡುತ್ತಿದ್ದಾರೋ ಗೊತ್ತಿಲ್ಲ. ಅಧಿಕಾರಿಗಳೇ ಉತ್ತರಿಸಬೇಕು ಎಂದರು.
ರೈತರ ಮೇಲೆ ದೌರ್ಜನ್ಯ: ತಾಲೂಕಿನ ರೇಷ್ಮೆ ಮಾರುಕಟ್ಟೆಯಲ್ಲಿ ರಾಜಕಾರಣಿಗಳ ಬೆಂಬಲಿಗರಿಂದಲೇ ರೈತರಿಗೆ ದೌರ್ಜನ್ಯ ಅನ್ಯಾಯ ನಡೆಯುತ್ತಿದೆ. ಇಲ್ಲಿನ ಕೆಲ ರೀಲರ್‌ಗಳು ರೈತರಮೇಲೆ ದೌರ್ಜನ್ಯ ದಬ್ಟಾಳಿಕೆ ಮಾಡುತ್ತಿದ್ದಾರೆ. ರಾಜಕಾರಣಿಗಳ ಬೆಂಬಲಿಗರ ದೌರ್ಜನ್ಯ ದಬ್ಬಾಳಿಕೆಗೆಬೇಸತ್ತು ರೈತರು ಹಲವು ಬಾರಿ ಬೀದಿಗಿಳಿದುಹೋರಾಟ ಮಾಡಿದ್ದಾರೆ. ಆದರೂ, ಸ್ಥಳೀಯಜನಪ್ರತಿನಿಧಿಗಳು ಮಾತ್ರ ರೈತರ ಸಮಸ್ಯೆಗಳನ್ನುಬಗೆಹರಿಸುವುದಿರಲಿ, ಸೌಜನ್ಯಕ್ಕಾದರೂ ರೇಷ್ಮೆಮಾರುಕಟ್ಟೆಗೆ ಭೇಟಿ ನೀಡಿ ರೈತರ ಸಮಸ್ಯೆಗಳೆನ್ನು ಎಂದು ಇದುವರೆಗೂ ಕೇಳಲಿಲ್ಲ. ಕಂಡು ಕಾಣದಂತೆವರ್ತಿಸುತ್ತಿದ್ದಾರೆ. ಇದರ ವಿರುದ್ಧ ಮುಂದೆಪ್ರತಿಭಟನೆಗೂ ಸಿದ್ಧರಿದ್ದೇವೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಯಬೇಕಾದರೆ ಬದಲಾವಣೆಯಿಂದ ಮಾತ್ರ ಸಾಧ್ಯ. ಮುಂದಿನ ಚುನಾವಣೆಯಲ್ಲಿ ಅದು ಆಗಬೇಕು ಎಂದರು.
ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಶರೀಫ್, ಉಯ್ಯಂಬಳ್ಳಿ ಶಿವು, ಉದಾರಹಳ್ಳಿ ಶ್ರೀನಿವಾಸ್, ಮುನಿರಾಜು,ಮಂಜುನಾಥ್, ಮರಿಗೌಡ, ಮುತ್ತು ರಾಮಶೆಟ್ಟಿ, ಉಮೇಶ್, ಕೋಟೆ ಕೊಪ್ಪ ಕೃಷ್ಣ, ಸುಮಂತ, ದೊಡ್ಡೇಗೌಡ, ಹೆಗ್ಗನೂರು ಉಮೇಶ್, ಉಯ್ಯಂಬಳ್ಳಿ ಲೋಕೇಶ್, ಶಿವರಾಜು ಹಾಗೂ ಮತ್ತಿತರರು ಇದ್ದರು.
ನರೇಗಾದಲ್ಲಿ 31 ಕೋಟಿ ರೂ. ಹಣ ದುರ್ಬಳಕೆ: ಬಿಜೆಪಿ ಶೇ.40ರಷ್ಟು ಸರ್ಕಾರ ಎಂದು ಟೀಕಿಸುತ್ತಿರುವ ಶಾಸಕ ಡಿ.ಕೆ. ಶಿವಕುಮಾರ್ ನರೇಗಾ ಯೋಜನೆಯಲ್ಲಿ ದೇಶಕ್ಕೆ ಮಾದರಿ ಎಂದು ಹೇಳಿಕೊಳ್ಳುವ ತಮ್ಮ ಕ್ಷೇತ್ರದಲ್ಲೇ ನರೇಗಾಹಣ ದುರ್ಬಳಕೆ ಆಗುತ್ತಿದೆ. ಈ ಹಿಂದೆತೋಕಸಂದ್ರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮಸಭೆಯಲ್ಲಿಅಧಿಕಾರಿಯೊಬ್ಬರು ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ 31 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗ ಮಾಡಿದ್ದಾರೆ. ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಡಿಕೆಶಿ ಬೆಂಬಲಿಗರೇ ಅಧಿಕಾರದಲ್ಲಿದ್ದಾರೆ. ಯಾರಿಂದ ಹಣ ದುರ್ಬಳಕೆಯಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕು. ದುರ್ಬಳಕೆಯಾಗಿರುವ ಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು ಮತ್ತುಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.