ಕೇಳುವವರಿಲ್ಲ ರಾಮಮ್ಮನ ಕೆರೆ ಗೋಳು


Team Udayavani, May 9, 2019, 4:10 PM IST

ram-1

ಚನ್ನಪಟ್ಟಣ: ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಪ್ರಸಿದ್ಧ್ದವಾದ ರಾಮಮ್ಮನ ಕೆರೆಯು ಅವನತಿಯತ್ತ ಸಾಗಿದೆ. ಪಟ್ಟಣದ ಕಲುಷಿತ ನೀರು, ಒಣ ಹಾಗೂ ಹಸಿ ತ್ಯಾಜ್ಯ ಪ್ರತಿನಿತ್ಯ ರಾಮಮ್ಮನ ಕೆರೆ ಒಡಲಿಗೆ ಸೇರುತ್ತಿದ್ದರೆ, ಇನ್ನೊಂದೆಡೆ ಅತಿಕ್ರಮಣದಿಂದಲೂ ಕೆರೆ ತನ್ನ ವಿಸ್ತಾರವನ್ನು ಕಳೆದುಕೊಳ್ಳುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿ ಗಳಗಲಿ ಅಥವಾ ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ರಾಮಮ್ಮನ ಕೆರೆಯತ್ತ ಚಿತ್ತ ಹರಿಸಿಲ್ಲ.

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಿಗಳಿಗೆ ಆಹ್ಲಾದಕರ ವಾತಾವರಣ ಕಲ್ಪಿಸುತ್ತಿರುವ ಕೆರೆ, ತನ್ನ ಅಚ್ಚುಕಟ್ಟು ಪ್ರದೇ ಶದ ರೈತರ ಬೆಳೆಗೆ ಜೀವಾಳವಾಗಿದೆ. ಆದರೆ ಪಟ್ಟಣದ ಚರಂಡಿ ನೀರು ಕೆರೆಯನ್ನು ಸೇರು ತ್ತಿದ್ದು, ರೈತರು ಮತ್ತು ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ. ಇಷ್ಟೇ ಅಲ್ಲದೆ ಕೋಳಿ ತ್ಯಾಜ್ಯ, ಕಟ್ಟಡಗಳ ಅನುಪಯುಕ್ತ ವಸ್ತುಗಳು, ಕಸ, ಒಣತ್ಯಾಜ್ಯ ಕೆರೆಯ ಬದಿಯಲ್ಲಿ ಶೇಖರಣೆಯಾಗುತ್ತಿದೆ.

ಕಸ, ಕೊಳಚೆ ನೀರು, ಹಸಿ ತ್ಯಾಜ್ಯ ನೀರಿಗೆ ಸೇರಿಕೊಂಡು ದುರ್ನಾತ ಹರಡುತ್ತಿದೆ. ಅಷ್ಟೆ ಅಲ್ಲದೆ ಕಟ್ಟಡಗಳ ಮಣ್ಣು, ಇಟ್ಟಿಗೆ, ಕಾಂಕ್ರೀ ಟ್, ಅನುಪಯುಕ್ತ ವಸ್ತುಗಳು ಕೆರೆಯ ಬದಿ ಯಲ್ಲಿ ಬೇಕಾಬಿಟ್ಟಿಯಾಗಿ ಬಿಸಾಡಲಾಗು ತ್ತಿದೆ. ಇದರಿಂದಾಗಿ ಕೆರೆಯ ವಿಸ್ತಾÃ ಕಡಿಮೆ ಯಾಗುತ್ತಿದೆ. ಕೆರೆಯ ಮೇಲೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಸಣ್ಣ ನೀರಾ ವರಿ ಇಲಾಖೆ, ನಗರಸಭೆ, ಕೆರೆಯ ವ್ಯಾಪ್ತಿ ಯಲ್ಲಿ ಬರುವ ಗ್ರಾಮ ಪಂಚಾಯಿತಿಗಳು ಗಮನಹರಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿವೆ.

ಇಗ್ಗಲೂರು ಜಲಾಶಯದಿಂದ ಕುಡಿಯುವ ನೀರು ಯೋಜನೆಯಡಿ ನೀರು ತುಂಬಿಸ ಲಾಗಿದೆ. ಆದರೆ ಪಟ್ಟಣದ ನಾಲ್ಕೈದು ವಾರ್ಡುಗಳ ಚರಂಡಿ ನೀರು ಕೆರೆಯಂಗಳ ಸೇರುತ್ತಿರುವುದರಿಂದ ಶುದ್ಧ ನೀರುವ ಕಲ್ಮಶ ಗೊಳ್ಳುತ್ತಿದೆ. ನಗರಸಭೆ, ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ಎರಡರ ವ್ಯಾಪ್ತಿಯಲ್ಲಿ ಕೆರೆ ಆವರಿಸಿದೆ. ಸುತ್ತಮುತ್ತಲ ನಾಲ್ಕೈದು ಗ್ರಾಮಗಳಿಗೆ ಕೆರೆಯಿಂದಾಗಿ ನೀರಿನ ಸಮಸ್ಯೆ ಇಲ್ಲ. ಹಾಗೆಯೇ ಅಂತರ್ಜಲ ಮಟ್ಟವೂ ಸಹ ಸುಧಾರಣೆ ಕಂಡಿದೆ. ಆದರೆ ನಿರ್ವಹಣೆ ಇಲ್ಲದೆ ಈ ಕೆರೆ, ಪಟ್ಟಣದ ಬಸ್‌ ನಿಲ್ದಾಣದ ಸನಿಹದಲ್ಲಿಯೇ ಇರುವ, ಕೊಳಕನ್ನೆಲ್ಲ ತನ್ನೊಳಗೆ ಸೇರಿಸಿಕೊಂಡು ಇಲ್ಲದಂತಿರುವ ಮತ್ತೂಂದು ಶೆಟ್ಟಹಳ್ಳಿ ಕೆರೆಯಾಗುವ ಭೀತಿ ಎದುರಿಸುತ್ತಿದೆ.

ರಾಮಮ್ಮನಕೆರೆ ಮೀನು ಎಂದರೆ ಮುಗಿಬಿದ್ದು ಖರೀದಿ ಮಾಡುತ್ತಿದ್ದ ಜನ, ಇದೀಗ ರಾಮಮ್ಮನ ಕೆರೆ ಮೀನು ಎಂದರೆ ಹೆದರುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ನೀರಿಗೆ ಸೇರುತ್ತಿರುವ ಕಲುಷಿತ ನೀರು ಹಾಗೂ ಹಸಿತ್ಯಾಜ್ಯ. ಕಲುಷಿತ ನೀರಿನಿಂದಾಗಿ ಮತ್ಸೋದ್ಯಮಕ್ಕೂ ಸಹ ಇಲ್ಲಿ ಹಿನ್ನಡೆಯಾಗಿದೆ. ನೀರಿನಲ್ಲಿ ಸೇರುತ್ತಿರುವ ಕೊಳಕನ್ನೆಲ್ಲಾ ತಿಂದು ಮೀನು ಬೆಳೆಯುವುದರಿಂದ ತಿನ್ನುವವರ ಆರೋಗ್ಯ ಕ್ಕೂ ಸಂಚಕಾರ ತಂದೊಡ್ಡುದ್ದು ಜನರಲ್ಲಿ ಆತಂಕ ಮೂಡಿಸಿದೆ.

ಅಕ್ರಮ ಒತ್ತುವರಿಯ ಭೂತ: ಇವೆಲ್ಲವು ಗಳೊಂದಿಗೆ ಅಕ್ರಮ ಒತ್ತುವರಿ ಭೂತ ಸಹ ಈ ಕೆರೆಯನ್ನು ಬಿಟ್ಟಿಲ್ಲ. ಕೆರೆಯ ಪೂರ್ವಕ್ಕೆ ಸಾಕಷ್ಟು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವ ಕೆಲಸವೂ ಸಹ ಇದು ವರೆಗೆ ಆಗಿಲ್ಲ. ಇದೇ ಭಾಗದಲ್ಲಿ ಕೆರೆಯ ಅಂಗಳದಲ್ಲೇ ಮುಳ್ಳಿನ ಪೊದೆಗಳು ಬೆಳೆದು ಕೊಂಡಿದ್ದು, ಬಳ್ಳಿಗಳು ನೀರಿನೊಳಗೆ ಸೇರಿ ಕೊಂಡು ನೀರು ಕೊಳೆಯಲು ಅನುವು ಮಾಡಿಕೊಡುತ್ತಿವೆ.

ಕೆರೆಯ ಸುತ್ತಮುತ್ತಲ ಪ್ರದೇಶ, ಏರಿ, ತೂಬು, ನೀರು ಹರಿಯುವ ಕಾಲುವೆ ಹೀಗೆ ಸಂಬಂಧಿಸಿದ ಎಲ್ಲ ಕಾರ್ಯಗಳ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ತಾಲೂಕಿನ ಕೆರೆಗಳಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿದೆ. ಪ್ರತಿ ಕೆರೆಗಳ ಬಳಿಯಲ್ಲೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇವೆ. ಯಾವುದನ್ನೂ ಸರಿಪಡಿಸುವ ಗೋಜಿಗೆ ಇಲಾಖೆ ಹೋಗಿಲ್ಲ.

ಅನಾಹುತ ಸಂಭವಿಸಿದರೆ ಬರುವ ಅಕಾರಿಗಳು ಸುಸ್ಥಿತಿಯಲ್ಲಿದ್ದಾಗ ನಿರ್ವಹಣೆ ಮಾಡಿದರೆ ಇದಾಗುತ್ತಿರಲಿಲ್ಲ ಎನ್ನುವ ಆಲೋಚನೆಯನ್ನೂ ಮಾಡುತ್ತಿಲ್ಲ. ಹಾಗೆಯೇ ತನ್ನ ವ್ಯಾಪ್ತಿಯ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವ, ಪಟ್ಟಣದ ತ್ಯಾಜ್ಯವನ್ನು ಅವಕಾಶ ಮಾಡಿಕೊಟ್ಟಿರುವ ನಗರಸಭೆಯೂ ಸಹ ಕೆರೆಯ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಇನ್ನು ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿಯೂ ಎರಡೂ ಇಲಾಖೆಗಳಿಗೆ ಕೆರೆಯ ಸಮಸ್ಯೆ ಸರಿಪಡಿಸುವಂತೆ ತಿಳಿಸುವ ಕೆಲಸವನ್ನೂ ಮಾಡಿಲ್ಲ. ಇದರಿಂದಾಗಿಯೇ ಕೆರೆ ಸಮಸ್ಯೆ ಗಳನ್ನು ಹೊದ್ದಿಕೊಂಡು ಮೂಕರೋಧನೆ ಅನುಭವಿಸುತ್ತಿದೆ. ಇನ್ನಾದರೂ ಸಂಬಂಧ ಪಟ್ಟವರು ಕೆರೆಯ ನಿರ್ವಹಣೆ ಮಾಡಿ, ಅಸ್ತಿತ್ವವನ್ನು ಉಳಿಸಲು ಮುಂದಾಗಬೇಕಿದೆ.

ಎಂ.ಶಿವಮಾದು

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

HDk05

Police FIR: ಎಫ್ಐಆರ್‌ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ

HDK-by-Poll

By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ

DK-Shivakuamar

By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ

HDK-election

By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.