ಹೆದ್ದಾರಿ ದಾಟಲು ಪಾದಚಾರಿಗಳಿಗಿಲ್ಲ ಪರ್ಯಾಯ ಮಾರ್ಗ
Team Udayavani, Apr 1, 2021, 3:25 PM IST
ಚನ್ನಪಟ್ಟಣ: ಪಟ್ಟಣ ಪ್ರದೇಶದ ಜನನಿಬಿಡ ವೃತ್ತಗಳಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸದ ಕಾರಣ ಪಾದಚಾರಿಗಳು ಭಯದ ನಡುವೆಬೆಂಗಳೂರು – ಮೈಸೂರು ಹೆದ್ದಾರಿ ದಾಟಬೇಕಾದಅನಿವಾರ್ಯತೆ ಎದುರಾಗಿದೆ.ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಆದನಂತರ ಖಾಸಗಿ ಬಸ್ ನಿಲ್ದಾಣ, ಮೈಸೂರು ಬ್ಯಾಂಕ್‌ವೃತ್ತದ ಬಳಿ ಹೆದ್ದಾರಿ ದಾಟಲು ಇದ್ದ ರಸ್ತೆಯನ್ನುಮುಚ್ಚಿ ರುವುದರಿಂದ ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವವರಿಗೆಸಮಸ್ಯೆ ಆಗಿದೆ.
ಹೆದ್ದಾರಿ ಪ್ರಾಧಿಕಾರ ಸ್ಕೈವಾಕ್‌ಅಥವಾ ಅಂಡರ್‌ಪಾಸ್ ನಿರ್ಮಿಸದೆ ಏಕಾಏಕಿ ರಸ್ತೆವಿಭಜಕದ ಮಧ್ಯೆ ಇದ್ದ ಪಾದಚಾರಿ ಮಾರ್ಗಮುಚ್ಚಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗಮನ ಹರಿಸುತ್ತಿಲ್ಲ: ಹೆದ್ದಾರಿಯ ಎರಡೂ ಕಡೆಗಳಿಂದ ವಾಹನ ವೇಗವಾಗಿ ಚಲಿಸುತ್ತಲೇ ಇರುತ್ತವೆಎಂಬುದು ತಿಳಿದಿದ್ದರೂ ಪಾದಚಾರಿಗಳು ಅನಿವಾರ್ಯ ವಾಗಿ ಹೆದ್ದಾರಿ ದಾಟಲು ಮುಂದಾಗುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುವಸಾಧ್ಯತೆ ಹೆಚ್ಚಿರುತ್ತದೆ.
ಹೆದ್ದಾರಿ ಪ್ರಾಧಿಕಾರವಾಗಲಿ,ಪೊಲೀಸರಾಗಲಿ ಈ ಬಗ್ಗೆ ಗಮನಹರಿಸುತ್ತಿಲ್ಲ.
ಮೇಲ್ಸೇತುವೆ ಅತ್ಯಗತ್ಯ: ಪಟ್ಟಣದ ಅಂಚೆ ಕಚೇರಿರಸ್ತೆಯಿಂದ ಚರ್ಚ್ ರಸ್ತೆಗೆ ಹೋಗಲು ಈ ಹಿಂದೆರಸ್ತೆ ವಿಭಜಕದ ಮಧ್ಯೆ ಇದ್ದ ಮಾರ್ಗ ಅನುಕೂಲಕಲ್ಪಿಸಿತ್ತು. ಪೊಲೀಸರು ಎರಡೂ ಕಡೆಗಳಲ್ಲಿ ದಟ್ಟಣೆನಿಯಂತ್ರಿಸಿ ಪಾದಚಾರಿಗಳ ಓಡಾಟಕ್ಕೆ ಅನುವುಮಾಡಿಕೊಡುತ್ತಿದ್ದರು. ಆದರೆ, ಇತ್ತೀಚೆಗೆ ಆವಿಭಜಕ ಮುಚ್ಚಿದ್ದರಿಂದ ಎರಡೂ ರಸ್ತೆಗಳ ನಡುವಿನ ನೇರ ಸಂಪರ್ಕ ಕಡಿತವಾಗಿದ್ದು, ಎಂದಿನಂತೆಪಾದಚಾರಿಗಳು ಅಪಾಯದ ನಡುವೆಯೇಹೆದ್ದಾರಿ ದಾಟುತ್ತಿದ್ದಾರೆ.
ಅವೈಜ್ಞಾನಿಕ ಕ್ರಮ: ಪಟ್ಟಣ ವ್ಯಾಪ್ತಿಯಲ್ಲಿ ಅದರಲ್ಲೂ ಜನನಿಬಿಡ ಪ್ರದೇಶ ಆಗಿರುವ ಖಾಸಗಿ ಬಸ್‌ನಿಲ್ದಾಣ ವೃತ್ತದಲ್ಲಿ ರಸ್ತೆ ವಿಭಜಕ ಮುಚ್ಚಿರುವ ಕ್ರಮಅವೈಜಾnನಿಕವಾಗಿದ್ದು, ಮೇಲ್ಸೇತುವೆ ನಿರ್ಮಿಸದಿದ್ದರೂ ಸಿಗ್ನಲ್‌ಲೈಟ್ ಅಳವಡಿಸಿ ಪಾದಚಾರಿಗಳಿಗೆಅನುಕೂಲ ಮಾಡಿಕೊಡಬೇಕೆನ್ನುವುದು ಸಾರ್ವಜನಿಕರ ಆಗ್ರಹ ವಾಗಿದೆ.ವಿಭಜಕ ಮುಚ್ಚುವ ಮುನ್ನ ಯಾವುದೇಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ, ಮುಂದಿನ ವಿಭಜಕದಲ್ಲಿ ದಾಟಬೇಕೆಂಬ ಎಚ್ಚರಿಕೆ ಫಲಕಗಳನ್ನೂಹಾಕಿಲ್ಲ, ಹೆದ್ದಾರಿ ಪ್ರಾ—ಕಾರಕ್ಕೆ ಪೊಲೀಸರು ಸಂಭವನೀಯ ಅನಹುತಗಳ ಬಗ್ಗೆ ಅರಿವು ಮಾಡಿಕೊಟ್ಟುನಂತರ ಕ್ರಮ ಕೈಗೊಳ್ಳಬೇಕಿತ್ತು. ಏಕಾಏಕಿ ಮುಚ್ಚಿಅವಾಂತರ ಸೃಷ್ಟಿಸಿ, ಅನಾಹು ತಗಳಿಗೆ ಅವರೇಕಾರಣರಾಗುತ್ತಿದ್ದಾರೆಂಬ ಆರೋಪ ದಟ್ಟವಾಗಿದೆ.
ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.