ಕೂಡ್ಲೂರು ಕೆರೆ ಏರಿಗೆ ತಡೆಗೋಡೆ ಇಲ್ಲ
Team Udayavani, May 29, 2022, 12:57 PM IST
ಚನ್ನಪಟ್ಟಣ: ತಾಲೂಕಿನ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೂಡ್ಲೂರು ಕೆರೆ ಇಂದು ಅಪಾಯದ ಗೂಡಾಗಿ ಮಾರ್ಪಾಡಾಗಿದೆ.
ಪ್ರತಿದಿನವೂ ಕೂಡ್ಲೂರು ಕೆರೆ ಏರಿಯ ಮೇಲೆ ಸಾವಿರಾರು ಮಂದಿ ಸಂಚರಿಸುತ್ತಾರೆ. ಈ ಮಾರ್ಗವಾಗಿ ಶಾಲಾ ವಾಹನ, ಗಾರ್ಮೆಂಟ್ಸ್ ವಾಹನಗಳು ಹೀಗೆ ಹಲವಾರು ದೊಡ್ಡ ದೊಡ್ಡ ವಾಹನಗಳು ಸಂಚಾರ ಮಾಡುತ್ತವೆ. ಕೂಡ್ಲೂರು ಕೆರೆಯ ಏರಿ ಉದ್ದಕ್ಕೂ ಯಾವುದೇ ರೀತಿಯ ತಡೆಗೋಡೆ ಇಲ್ಲ ಏರಿಯ ರಸ್ತೆಯು ಬಹಳ ಕಿರಿದಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪ್ರತಿದಿನವೂ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿಎದುರಾಗಿದೆ ರಾತ್ರಿ ವೇಳೆ ಸೂಕ್ತ ವಿದ್ಯುದ್ದೀಪವ್ಯವಸ್ಥೆಯು ಸಹ ಇಲ್ಲದ ಕಾರಣ, ವಾಹನ ಸವಾರರುಏರಿಯ ಮೇಲೆ ಭಯಭೀತಿಯಿಂದ ಓಡಾಡುವಂತಹ ಪರಿಸ್ಥಿತಿ ಮುನ್ನೆಲೆಗೆ ಬಂದಿದೆ.
ತಡೆಗೋಡೆ ಇಲ್ಲದಿರುವ ಕಾರಣದಿಂದ ಕೂಡ್ಲೂರು ಕೆರೆಯ ಏರಿಯ ಮೇಲೆ ಹಲವಾರು ಅಪಘಾತಗಳು ಸಂಭವಿಸಿದ್ದು, ಸ್ವಲ್ಪ ದಿನಗಳಹಿಂದೆ ಗಾರ್ಮೆಂಟ್ಸ್ ವಾಹನವೊಂದು ಕೆರೆಗೆ ಉರುಳಿಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಅಪಾಯಗಳು ಆಗಲಿಲ್ಲ. ಆದರೆ, ಮುಂದೆ ಇದೇ ರೀತಿನಡೆದರೆ ವಾಹನ ಸವಾರರಿಗೆ ಈ ಕೆರೆಯು ಅಪಘಾತ ಸ್ಥಳವಾಗಿ ಮಾರ್ಪಾಡಾಗುವುದರಲ್ಲಿ ಸಂದೇಹವಿಲ್ಲ.
ಗ್ರಾಮಸ್ಥರ ಆಗ್ರಹ: ಪ್ರತಿದಿನವೂ ಈ ಮಾರ್ಗವಾಗಿ ಸಂಚರಿಸುವ ಹಲವಾರು ಮಂದಿಯ ಒಕ್ಕೊರಲಮನವಿ ಕೂಡ್ಲೂರು ಕೆರೆ ಏರಿ ಮೇಲೆ ಬಹಳಷ್ಟುತಿರುವುಗಳಿವೆ. ಹಾಗಾಗಿ, ಇದಕ್ಕೆ ಸಂಬಂಧಪಟ್ಟವರುಶೀಘ್ರವೇ ತಡೆಗೋಡೆಯನ್ನು ನಿರ್ಮಿಸಿ ಮುಂದೆಆಗುವ ಅಪಾಯವನ್ನು ತಡೆಯುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂವಾಹನ ಸವಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸುತ್ತಲೂ ಬೇಲಿ ಬೆಳೆದುಕೊಂಡಿದೆ: ಕೂಡ್ಲೂರು ಕೆರೆ ಏರಿ ಮೇಲೆ ಸುತ್ತಲೂ ಬೇಲಿ ಬೆಳೆದುಕೊಂಡು ಅದು ರಸ್ತೆ ಉದ್ದಕ್ಕೂ ಹರಡಿಕೊಂಡಿದೆ. ಇದರಿಂದಎದುರುಗಡೆ ಬರುವ ವಾಹನ ಸರಿಯಾಗಿಕಾಣುವುದಿಲ್ಲ. ರಾತ್ರಿ ವೇಳೆ ಸಂಚರಿಸುವ ವಾಹನಸವಾರರಿಗೆ ಇದು ಬಹಳವಾಗಿ ಕಾಡುತ್ತಿದೆ.
ಅನೈರ್ಮಲ್ಯದ ಗೂಡಾದ ಕೆರೆ: ತಾಲೂಕಿನ ತ್ಯಾಜ್ಯವಸ್ತುಗಳನ್ನು ಡ್ರೈನೇಜ್ ನೀರನ್ನು ಕೆರೆಗೆಬಿಟ್ಟಿರುವುದರಿಂದ ಕೂಡ್ಲೂರು ಕೆರೆಯ ನೀರುಕಲುಷಿತಗೊಂಡಿದೆ. ಜಲಚರಗಳು ಸಾವನ್ನಪ್ಪುತ್ತಿವೆ.ಅಷ್ಟೇ ಅಲ್ಲದೆ ಕೂಡ್ಲೂರು ಕೆರೆಯ ಏರಿ ಬದಿಯಲ್ಲಿಸಾರ್ವಜನಿಕರು ಅಂಗಡಿ-ಮುಂಗಟ್ಟು ಅವರುಕೋಳಿ ತ್ಯಾಜ್ಯಗಳನ್ನು ಹಾಗೂ ಇನ್ನಿತರ ತ್ಯಾಜ್ಯ ಬಿಸಾಡಿಹೋಗುತ್ತಾರೆ. ಇದರಿಂದ ಕೆರೆ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ.
ದೇಶ-ವಿದೇಶಗಳಿಂದ ವಿಶಿಷ್ಟ ಪ್ರಭೇದದ ಪಕ್ಷಿಗಳುಕೂಡ್ಲೂರು ಕೆರೆಗೆ ವಲಸೆ ಬರುತ್ತವೆ. ಕೂಡೂÉರು ಕೆರೆಒಂದು ರೀತಿ ಪಕ್ಷಿಧಾಮದಂತೆ ಕಾಣಿಸುತ್ತದೆ. ಇಂತಹಐತಿಹಾಸಿಕ ಹಾಗೂ ನೈಸರ್ಗಿಕ ಹಿನ್ನೆಲೆಯಿರುವಕೆರೆಯನ್ನು ಸಂರಕ್ಷಿಸಬೇಕೆಂದು ಪರಿಸರ ಪ್ರೇಮಿಗಳ ಮನವಿಯಾಗಿದೆ.
ಸಾವಿರ ವರ್ಷ ಇತಿಹಾಸ ಹೊಂದಿರುವ ಕೆರೆ :
ಕೂಡ್ಲೂರು ಕೆರೆಗೆ ಸರಿ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಅಷ್ಟೇ ಅಲ್ಲದೆ ತಾಲೂಕಿನ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೂಡ್ಲೂರು ಕೆರೆಯನ್ನು ದಕ್ಷಿಣ ಭಾರತವನ್ನು ಚೋಳರು ಆಳುತ್ತಿದ್ದ ಕಾಲದಲ್ಲಿ ಚೋಳ ಸಾಮ್ರಾಜ್ಯದ ಪ್ರಸಿದ್ಧ ದೊರೆ ರಾಜರಾಜ ಚೋಳ ನಿರ್ಮಿಸಿದ್ದು, ಇದರ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ ಮತ್ತು ಮೈಸೂರು ಒಡೆಯರ ಕಾಲದಲ್ಲಿ ಹೈದರಾಲಿಯ ಗುರುಗಳಾದ ಅಖಿಲ್ ಸಾಯಿ ದರ್ಗಾ ಫಕೀರನಿಗೆ ಈ ಕೆರೆಯನ್ನು ಇನಾಮ್ ಕೊಟ್ಟರೆಂಬ ಉಲ್ಲೇಖವು ಸಹ ಶಾಸನದಲ್ಲಿದೆ.
-ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.