
ಗಣೇಶನ ಮೂರ್ತಿಗೆ ಬೇಡಿಕೆಯಿಲ್ಲ: ಅತಂಕ
ಕೋವಿಡ್ ನಿಯಮಕ್ಕಾಗಿ ಕಾಯುತ್ತಿರುವ ಗ್ರಾಹಕರು; ವರ್ತಕರು ; 2 ವರ್ಷಗಳಿಂದ ಗೋದಾಮಿನಲ್ಲಿಯೇ ಉಳಿದ ವಿಗ್ರಹಗಳು
Team Udayavani, Sep 4, 2021, 4:51 PM IST

ಕುದೂರು: ಕೋವೀಡ್ ಕಾರಣ ಕಳೆದ ವರ್ಷದಂತೆ ಈ ವರ್ಷವೂ ಗಣೇಶನ ಪ್ರತಿಮೆಗೆ ಬೇಡಿಕೆ ಇಲ್ಲದಂತಾಗಿದೆ. ಕೋವೀಡ್ 3ನೇ ಅಲೆ ಬರುವ ಅತಂಕದಲ್ಲಿ ಸರ್ಕಾರ ಗನೆಶನ ಪ್ರತಿಷ್ಠಾಪನೆಗೆ ನಿಬಂಧನೆಗಳು ಹೇರುವ ಕಾರಣ ಗಣೇಶಮೂರ್ತಿಗೆ ಬೇಡಿಕೆ ಇಲ್ಲದಂತಾಗಿದೆ ಎಂದು ತಯಾರಕ ಭಾನುಪ್ರಕಾಶ್ ಅತಂಕ ವ್ಯಕ್ತಪಡಿಸಿದರು.
ಪ್ರತಿ ವರ್ಷ ಆಗಸ್ಟ್ ವೇಳೆಗೆ ಗಣೆಶನ ಮೂರ್ತಿಗಳಿಗೆ ಬಾರಿ ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಮೂರ್ತಿಗಳ ಖರೀದಿಗೆ ಬೇಡಿಕೆಯೇ ಇಲ್ಲದಂತಾಗಿದೆ. ತಯಾರಿಸಿರುವ ಮೂರ್ತಿಗಳು ಮಾರಾಟ ಆಗುತ್ತವೆಯೋ ?, ಇಲ್ಲವೋ ? ಎಂಬ ಅತಂಕ ಕಾಡ ತೊಡಗಿದೆ. ಕೋವೀಡ್ ಸೋಂಕಿನ ಕರಿನೆರಳು ಈ ಬಾರಿಯೂ ಗೌರಿ ಗಣೇಶ ಹಬ್ಬದ ಮೇಲೆ ಬಿದ್ದಿದೆ.
ಹಬ್ಬಕ್ಕೆ ಇನ್ನೂ ಕೆಲ ದಿನಗಳು ಇರುವಾಗ ಬಿಡುವಿಲ್ಲದೆ ಗಣೇಶ ಮೂರ್ತಿಗಳು ತಯಾರಿಸುತ್ತಿದ್ದೆವು. ಕಳೆದ ವರ್ಷದ ಗಣೇಶ ಮೂರ್ತಿಗಳು ಸಾಕಷ್ಟು ಉಳಿದಿವೆ.
ಹಬ್ಬದಲ್ಲಿ ಗಣೇಶ ಮೂರ್ತಿ ಮಾರಾಟದ ಹಣದಿಂದ ವರ್ಷಪೂರ್ತಿ ಜೀವನ ಸಾಗಿಸುತ್ತಿದ್ದ ನಮ್ಮ ಬದುಕಿಗೆ ಕೊರೊನಾ ಮಹಾಮಾರಿ ಅಡ್ಡಿಯಾಗಿದ್ದು.ತಯಾರಕರುಹಾಗುಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಯಾರಕರು ಮಣ್ಣಿನಿಂದ ತಯಾರಿಸಿದ ಮೂರ್ತಿಗಳಿಗೆ ಸಾಕಷ್ಟು ಬೇಡಿಕೆ ಇರುತ್ತಿತ್ತು. ಹಾಗಾಗಿ ಬಣ್ಣ ಬಣ್ಣದ ವಿವಿಧ ಗಾತ್ರಗಳ ಗಣೇಶ ಮೂರ್ತಿ ತಯಾರಿಸಿ ದುಡಿಮೆ ಮಾಡುತ್ತಿದ್ದ ತಯಾರಿಕರಿಗೆ ಸುದಿನ ಆಗಿತ್ತು. ಆದರೆ ಕಳೆದ ಬಾರಿ ಹಾಗೂ ಈ ಬಾರಿ ತಯಾರಕರ ಹೊಟ್ಟೆಪಾಡಿನ ಬದುಕಿಗೆ ತಣ್ಣೀರು ಎರಚಿದಂತಾಗಿದೆ ಎಂದರು.
ಇದನ್ನೂ ಓದಿ:2023ರ ಎಲೆಕ್ಷನ್: ಜೆಡಿಎಸ್‌ಗೆ ಸ್ವತಂತ್ರ ಅಧಿಕಾರ
ಈ ವೃತ್ತಿಯನ್ನೇ ನಂಬಿಕೊಂಡು ಮಣ್ಣು ಖರೀದಿಸಿ ತಿಂಗಳುಗಟ್ಟಲೆ ಕಷ್ಟಪಟ್ಟು ಮಾಡಿದ ಗಣೇಶ ಮೂರ್ತಿಗಳು ಗೋದಾಮುಗಳಲ್ಲೇ ಉಳಿದಿದ್ದು. ಈ ವರ್ಷವೂ ಅದೇ ರೀತಿಯಾದರೆ ಗತಿ ಏನು ಎಂಬ ಅತಂಕ ನಿರ್ಮಾಣವಾಗಿದೆ. 50 ವರ್ಷಗಳಿಂದಲೂ ಇದೇ ವ್ಯಾಪಾರದಲ್ಲಿದ್ದೇವೆ ಇದನ್ನೇ ನಂಬಿಕೊಂಡು ಜೀವನ ನೆಡೆಸುತ್ತಿದ್ದೇವೆ. ನಮ್ಮನ್ನು ನಂಬಿಕೊಂಡು ಇಲ್ಲಿ ಕೆಲಸ ಮಾಡುವ ಕಾರ್ಮಿಕರೂ ಇದ್ದಾರೆ. ಆದರೆ ಕೋವೀಡ್ ಹಿನ್ನೆಲೆ ನಮಗೆ ಬಾರಿ ನಷ್ಟ ಉಂಟಾಗುತ್ತಿದ್ದು. ಮುಂದೇನು ಮಾಡಬೇಕೆನ್ನುವ ಅತಂಕ ಉಂಟಾಗಿದೆ. ಎಂದು ಗಣೇಶ ಮೂರ್ತಿ ತಯಾರಕ ಬಿಸ್ಕೂರು ಕೇಶವಚಾರ್ ಅಳಲು ತೋಡಿಕೊಂಡರು. ಗೌರಿ ಗಣೇಶ ಹಬ್ಬದ ಹೊತ್ತಿಗೆ ಸರ್ಕಾರದಿಂದ ಯಾವ ನಿಯಮ ಬರುತ್ತವೆಯೋ ಗೊತ್ತಿಲ್ಲ. ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನಿಡುತ್ತಾರೋ ಇಲ್ಲವೋ, ಎಂಬ ಗೊಂದಲದಲ್ಲಿ ಮೂರ್ತಿ ತಯಾರಕರಿದ್ದಾರೆ.
ಗಣೇಶಮೂರ್ತಿ ತಯಾರಕರು ಅನುಭವಿಸಿದಆರ್ಥಿಕ ನಷ್ಟಕ್ಕೆ ಸ್ಪಂದಿಸಿ ಕಳೆದ ವರ್ಷವೂ ಸರ್ಕಾರಪರಿಹಾರ ನೀಡಿಲ್ಲ. ಈ ಸಲವೂ ನಯಾ ಪೈಸೆ ಕೈಸೇರಿಲ್ಲ. ಸಾಲಸೂಲ ಮಾಡಿತಯಾರಿಸಿದ ಗಣೇಶಮೂರ್ತಿಗಳು ಉಳಿದಿದ್ದವು.ಇ ಬಾರಿ ನಿಯಮಗಳನ್ನು ಸ್ವಲ್ಪ ಅದಲು ಬದಲು ಮಾಡಿದರೆ ಕಲಾವಿದ ಜೀವನ ನೆಡೆಸಲು ಸಹಕಾರಿಯಾಗುತ್ತದೆ.
– ಭಾನುಪ್ರಕಾಶ್, ಕುದೂರು,
ಗಣೇಶ ಮೂರ್ತಿ ತಯಾರಕ
ಪರಂಪರಾಗತವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಡುವ ಮೂಲಕಕುಟುಂಬ ನಿರ್ವಹಿಸುತ್ತ ಬಂದಿರುವ ನಮಗೆ ಸದಸ್ಯ ಪರಿಸ್ಥಿತಿಯಲ್ಲಿ ನಿರೀಕ್ಷಿತ ವ್ಯವಹಾರವಿಲ್ಲದೆ ಕಷ್ಟದಾಯಕವಾಗಿದೆ.ಕಲಾವಿದರ ರಕ್ಷಣೆಗೆ ಸರ್ಕಾರ ಮುಂದಾಗಬೇಕು.
– ಕೇಶವಾಚಾರ್ ಬಿಸ್ಕೂರ್,
ಗಣೇಶ ಮೂರ್ತಿ ತಯಾರಕ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.