ರಾಮನಗರ ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಕೊರತೆ ಇಲ್ಲ
Team Udayavani, May 19, 2021, 9:37 PM IST
ರಾಮನಗರ: ಜಿಲ್ಲೆಯಲ್ಲಿ ಕೆಎಲ್ ಆಕ್ಸಿಜನ್ ಅಲೋಕೇಷನ್ ಆಗಿದೆ. ಈ ಪೈಕಿ ಸದ್ಯ3.5ಕೆಎಲ್ ಆಕ್ಸಿಜನ್ ಬಳಕೆಯಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂಡಾ.ಅಶ್ವತ್ಥನಾರಾಯಣ ಹೇಳಿದರು.
ಕೋವಿಡ್ ನಿರ್ವಹಣೆ ವ್ಯವಸ್ಥೆ ಪರಿಶೀಲನೆಗಾಗಿನಗರಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆಮಾತನಾಡಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಸಂಸದಡಿ.ಕೆ.ಸುರೇಶ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಹೀಗಾಗಿ ಆಕ್ಸಿಜನ್‌ಬೆಡ್ ಅಳವಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದರು.
ಜಿಲ್ಲಾಸ್ಪತ್ರೆ ನೂತನ ಕಟ್ಟಡದಲ್ಲಿ ಆಕ್ಸಿಜನ್‌ಜನರೇಟರ್,6ಕೆಎಲ್ ಆಕ್ಸಿಜನ್ ಸಂಗ್ರಹದ ಟ್ಯಾಂಕ್‌ಅಳವಡಿಕೆ ಆಗುತ್ತಿದೆ. ಹಾಲಿ ಜಿಲ್ಲಾಸ್ಪತ್ರೆ ಕಟ್ಟಡ,ತಾಲೂಕುಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲೂಆಕ್ಸಿಜನ್ ಜನರೇಟರ್ ಸ್ಥಾಪನೆಯಾಗಲಿವೆ ಎಂದುಮಾಹಿತಿ ನೀಡಿದರು.
131 ಆಕ್ಸಿಜನ್ ಬೆಡ್: ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡದಲ್ಲಿ ಸದ್ಯದಲ್ಲೇ 131 ಆಕ್ಸಿಜನ್ ಬೆಡ್ ಅಳವಡಿಕೆಪೂರ್ಣಗೊಳ್ಳಲಿದೆ. ಉಳಿಕೆ 19 ಬೆಡ್‌ಗೆ ಆಕ್ಸಿಜನ್‌ಸಾಂದ್ರಕ ಅಳವಡಿಸಲಾಗುವುದು. ಈ ವ್ಯವಸ್ಥೆ ತ್ವರಿತವಾಗಿ ಪೂರ್ಣಗೊಳ್ಳಲು ಡೀಸಿ, ಜಿಪಂ ಸಿಇಒ ಮತ್ತುಆರೋಗ್ಯ ಇಲಾಖೆ ಅಧಿಕಾರಿಗಳ ಶ್ರಮವಿದೆ ಎಂದು ಶ್ಲಾ ಸಿದರು.
ಕಂದಾಯ ಭವನದಲ್ಲಿ ಸದ್ಯ 35 ಆಕ್ಸಿಜನ್ ಬೆಡ್‌ಗಳಿವೆ. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ200ಕ್ಕೇರಿಸಲಾಗುವುದು, ಜಿಲ್ಲೆಯಲ್ಲಿ 100 ಐಸಿಯುಸ್ಥಾಪನೆಯಾಗಲಿದೆ ಎಂದರು. ಬೆಡ್, ಆಕ್ಸಿಜನ್ ಬೆಡ್‌ಗೆ ಎಷ್ಟೇ ಬೇಡಿಕೆ ಬಂದರೂ ಪೂರೈಸುವ ವ್ಯವಸ್ಥೆಗೆಸರ್ಕಾರ ಮುಂದಾಗಲಿದೆ. ದೊಡ್ಡ ಪ್ರಮಾಣದಲ್ಲಿವ್ಯವಸ್ಥೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ವೈದ್ಯಕೀಯ ಉಪಚಾರಕ್ಕೆ ವ್ಯವಸ್ಥೆನಡೆಯಲಿದೆ ಎಂದರು.
ಸ್ವಾಬ್ ಪರೀಕ್ಷೆ ಕಡಿಮೆಯಾಗಿಲ್ಲ:ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಕಡಿಮೆ ಮಾಡಿಲ್ಲ. ಸರಾಸರಿ ದಿನವೊಂದಕ್ಕೆ1500 ಪರೀಕ್ಷೆ ನಡೆಯುತ್ತಿದೆ. ಅಲ್ಲದೆ ಸೋಂಕು ಲಕ್ಷಣ ಉಳ್ಳವರಿಗೆ ತಕ್ಷಣ ರ್ಯಾಪಿಡ್ ಆಂಟಿಜನ್ ಟೆಸ್ಟ್ ಅನ್ನುಶೇ.30ಕ್ಕೇರಿಸಲು ಸೂಚಿಸಲಾಗಿದೆ. ಕೋವಿಡ್ ಸೋಂಕಿಗೆ ಬೇಕಾದ ಚಿಕಿತ್ಸೆ,ಔಷಧ ಮುಂತಾದ ಎಲ್ಲಾ ಸವಲತ್ತು ಒದಗಿಸಲಾಗುವುದೆಂದರು. ಸಚಿವರೊಂದಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಪಂ ಸಿಇಒಇಕ್ರಂ, ಡಿಎಚ್‌ಒ ಡಾ.ನಿರಂಜನ್,ಆರ್‌ಸಿಎಚ್ ಅಧಿಕಾರಿ ಡಾ.ಪದ್ಮಾ, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರುಳೀ ಧರ್‌ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.