ಹಕ್ಕು ಪತ್ರ ಕೊಟ್ರೂ ಅಧಿಕಾರಿಗಳು ನಿವೇಶನ ಕೊಡಲಿಲ್ಲ

ಬಾನಂದೂರು ಫ‌ಲಾನುಭವಿ ಕುಟುಂಬಗಳ ಅಳಲು | 17 ವರ್ಷಗಳೇ ಕಳೆದರೂ ನಿವೇಶನವಿಲ್ಲ

Team Udayavani, May 22, 2019, 4:32 PM IST

rn-tdy-3..

ರಾಮನಗರ ತಾಲೂಕು ಬಿಡದಿ ಬಳಿಯ ಬಾನಂದೂರಿನ ಆಶ್ರಯ ಯೋಜನೆಯಡಿಯ ಫ‌ಲಾನುಭವಿಗಳು ತಮಗೆ ನೀಡಿರುವ ನಿವೇಶ ಹಕ್ಕು ಪತ್ರಗಳನ್ನು ಪ್ರದರ್ಶಿಸಿದರು.

ರಾಮನಗರ: ತಾಲೂಕು ಆಡಳಿತ ನೀಡಿರುವ ಆಶ್ರಯ ಯೋಜನೆಯಡಿಯ ನಿವೇಶನ ಹಕ್ಕು ಪತ್ರ 1992ನೇ ಇಸವಿಯಿಂದ ಕೈಲಿದೆ. ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು ಎಂಬ ಹಂಬಲವಿದೆ. ಆದರೆ ಸರ್ಕಾರ ನೀಡಿರುವ ನಿವೇಶನ ಎಲ್ಲಿದೆ ಅಂತಲೇ ಗೊತ್ತಿಲ್ಲ. ನಿವೇಶನ ತೋರಿಸಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತು ಬಿಟ್ಟಿದ್ದಾರೆ!

ಹೀಗೆ ಅಲವತ್ತುಕೊಂಡಿದ್ದು ತಾಲೂಕಿನ ಬಿಡದಿ ಪುರಸಭೆ ವ್ಯಾಪ್ತಿಯ ಬಾನಂದೂರು ಗ್ರಾಮದ 23 ಕುಟುಂಬಗಳು. ಸುದ್ದಿಗಾರರ ಬಳಿ ತಮ್ಮ ನೋವು ತೋಡಿಕೊಂಡ ಈ ‘ಫ‌ಲಾನುಭವಿಗಳು’ ಬಾನಂದೂರು ಗ್ರಾಮದ ಸರ್ವೇ ಸಂಖ್ಯೆ 111ರಲ್ಲಿ 1991-92ನೇ ಸಾಲಿನಲ್ಲಿ ಬಾನಂದೂರಿನಲ್ಲಿ ವಾಸ ಮಾಡುತ್ತಿದ್ದ ನಿವೇಶನ ರಹಿತ ಬಡವರನ್ನು ಗುರುತಿಸಿ ತಾಲೂಕು ಆಡಳಿತ ಹಕ್ಕುಪತ್ರ ನೀಡಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕಾಳಜಿಯನ್ನು ಅರಿತ ಅಂದಿನ ಶಾಸಕರಾಗಿದ್ದ ಸಿ.ಎಂ.ಲಿಂಗಪ್ಪ ಅವರು ಈ ಬಡ ಕುಟುಂಬಗಳನ್ನು ಆಯ್ಕೆ ಮಾಡಿ ಸದರಿ ಸರ್ವೇ ಸಂಖ್ಯೆ ಭೂಮಿಯಲ್ಲಿ ತಲಾ 30×40 ನಿವೇಶನಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದರು. ಹೀಗೆ ವಿತರಣೆಯಾದ ಹಕ್ಕುಪತ್ರಗಳಲ್ಲಿ ತಹಸೀಲ್ದಾರರ ಸಹಿ ಮತ್ತು ಅಧಿಕೃತ ಮುದ್ರೆ ಇದೆ. ಆದರೆ ಅಧಿಕಾರಿಗಳು ಈ ಕುಟುಂಬಗಳಿಗೆ ನಿವೇಶನಗಳನ್ನು ಗುರುತಿಸಿ ಕೊಡಲಿಲ್ಲ ಎಂದು ಈ ಕುಟುಂಬಗಳು ಆಕ್ಷೇಪಿಸಿವೆ.

ಈ ವೇಳೆ ಫ‌ಲಾನುಭವಿ ಒಬ್ಬರಾದ ಕ್ಯಾತಯ್ಯ ಮಾತನಾಡಿ, ತಮ್ಮ ಭೂಮಿ ತೋರಿಸಿ ಎಂದು ಅನೇಕ ಬಾರಿ ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡರು ಉಪಯೋಗವಾಗಲಿಲ್ಲ . ಹಿಂದೆ ಇದ್ದ ಗ್ರಾಮಪಂಚಾಯ್ತಿ ಅಧಿಕಾರಿ, ರೆವಿನ್ಯು ಇನ್ಸ್‌ಪೆಕ್ಟರ್‌, ತಹಸೀಲ್ದಾರರು, ಉಪವಿಭಾಗಧಿಕಾರಿಗಳು ಹೀಗೆ ಎಲ್ಲರನ್ನು ಭೇಟಿ ಮಾಡಿದರೂ ಉಪಯೋಗವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಮ್ಮಲಮ್ಮ ಎಂಬ ಮಹಿಳೆ ಮಾತನಾಡಿ, ಕುಟುಂಬ ದೊಡ್ಡದಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇದೆ. ಹಕ್ಕುಪತ್ರ ಕೊಟ್ಟರೆ ವಿನಹ ಸೈಟು ಎಲ್ಲಿದೆ ಅಂತ ತೋರಿಸಿಕೊ ಟ್ಟಿಲ್ಲ. ನಿವೇಶನ ಗುರುತು ಮಾಡಿ ಕೊಟ್ಟರೆ ಹೇಗೋ ಒಂದು ಸೂರು ಮಾಡಿಕೊಳ್ತೀವಿ. ಈಗ ಸೂರು ಇಲ್ಲ, ನಿವೇಶನವೂ ಇಲ್ಲ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾನಂದೂರು ಗ್ರಾಮ ಇದೀಗ ಬಿಡದಿ ಪುರಸಭೆಯ ವ್ಯಾಪ್ತಿಗೆ ಒಳಪಟ್ಟಿದೆ. ಪುರಸಭಾ ಸದಸ್ಯ ಶಿವಕುಮಾರ್‌ ಸಹ ಈ ಕುಟುಂಬಗಳಿಗೆ ದನಿಯಾಗಿದ್ದಾರೆ. ಸರ್ವೇ ಸಂಖ್ಯೆ 111 ಗೋಮಾಳ ಪ್ರದೇಶ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಕಬಳಿಕೆ ಆಗುತ್ತಿದೆ. ಇಡೀ ಭೂಮಿಯನ್ನು ಅನ್ಯ ಕಾರ್ಯಗಳಿಗೆ ಮಂಜೂರು ಮಾಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಕ್ಕುಪತ್ರ ಇರುವವರಿಗೆ ಭೂಮಿ ಗುರುತಿಸಿ ಕೊಡಬೇಕಾಗಿದೆ ಎಂದು ಒತ್ತಾಯಿಸಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.