ಜಿಲ್ಲಾದ್ಯಂತ ಮಹಾಶಿವರಾತ್ರಿಗೆ ಭಕ್ತಿಯ ಮಹಾಪೂರ
Team Udayavani, Mar 5, 2019, 7:45 AM IST
ರಾಮನಗರ: ಜಿಲ್ಲಾದ್ಯಂತ ಸೋಮವಾರ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ದೆಯಿಂದ ಆಚರಿಸಲಾಯಿತು. ಜಿಲ್ಲೆಯ ಪ್ರಮುಖ ಶಿವನ ದೇವಾಲಯಗಳಿಗೆ ಬೆಳ್ಳಂಬೆಳಿಗ್ಗೆಯಿಂದಲೇ ಭೇಟಿ ಕೊಟ್ಟ ಭಕ್ತರು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡರು.
ಶಿವರಾತ್ರಿ ಉಪವಾಸ ಮತ್ತು ಜಾಗರಣೆಯ ದಿನ. ಹೀಗಾಗಿ ಶಿವ ದೇವಾಲಯಗಳು ಸೇರಿದಂತೆ ಶಿವನನ್ನು ಪ್ರತಿಷ್ಠಾಪಿಸಿರುವ ದೇವಾಲಯಗಳಲಿ ಸೋಮವಾರ ರಾತ್ರಿ ಅಭಿಷೇಕ, ಪೂಜೆ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಂಡಿವೆ.
ರಾಮನಗರ ಪಟ್ಟಣದಲ್ಲಿ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ, ಚನ್ನಪಟ್ಟಣದಲ್ಲಿ ಕೋಟೆ ಕಾಶಿವಿಶ್ವೇಶ್ವರ ದೇವಾಲಯ, ಮಾಗಡಿಯ ಗವಿ ಗಂಗಾಧೇಶ್ವರ ಸ್ವಾಮಿ, ಕನಕಪುರ ತಾಲೂಕು ಹಿರೇಮಡಿವಾಳ ಕ್ಷೇತ್ರದ ಶಿವನಾಂಕರೇಶ್ವರ ದೇವಾಲಯ, ಶಿವಗಿರಿ ಕ್ಷೇತ್ರದ ಈಶ್ವರ ದೇವಾಲಯಗಳಿಗೆ ಭಕ್ತ ಸಮೂಹ ನೂರಾರು ಸಂಖ್ಯೆಯಲ್ಲಿ ಭೇಟಿ ಕೊಟ್ಟು ತಮ್ಮ ಭಕ್ತಿ ಸಮರ್ಪಿಸಿಕೊಂಡರು.
ರಾಮನಗರದಲ್ಲಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಪಶ್ಚಿಮಾಭಿಮುಖೀಯಾಗಿ ಅರ್ಕಾವತಿ ನದಿ ದಂಡೆಯ ಮೇಲೆ ನೆಲೆಸಿರುವ ಶ್ರೀ ಅರ್ಕೇಶ್ವರ ಸ್ವಾಮಿಯ ಸನ್ನಿದಿಯನ್ನು ಕಾಶಿಯಲ್ಲಿ ವಿಶ್ವೇಶ್ವರನಾಥನನ್ನು ದರ್ಶಿಸಿದಷ್ಟೇ ಭಾಗ್ಯ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಈಶ್ವರನ ದರ್ಶನ ಪಡೆದು ಕೃತಾರ್ಥರಾದರು.
ನಗರದ ಅರಳೇಪೇಟೆಯಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯ, ಎಂ.ಜಿ.ರಸ್ತೆಯ ಶ್ರೀ ಬಸವೇಶ್ವರ ದೇವಾಲಯ, ಐಜೂರಿನ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ತಾಲೂಕಿನ ವಿವಿದೆಡೆ ಇರುವ ಶಿವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ತಾಲೂಕಿನ ಅವ್ವೆàರಹಳ್ಳಿಯ ಎಸ್ ಆರ್ ಎಸ್ ಬೆಟ್ಟದಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಭಕ್ತರಿಂದಲೇ ಶಿವನಿಗೆ ಬಿಲ್ವಾರ್ಚನೆ: ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ರುವ ಶ್ರೀ ಜಲಕಂಠೇಶ್ವರ ಸ್ವಾಮಿಗೆ ಭಕ್ತರೇ ಸ್ವಯಂ ಬಿಲ್ವಾರ್ಚನೆ ನೆರೆವೇರಿಸುವ ಅವಕಾಶವನ್ನು ಶ್ರೀ ವಾಸವಿ ಮಹಿಳಾ ಸಂಘ ಕಲ್ಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Ramanagara: ಕಾಡಾನೆ ದಾಳಿಗೆ ರೈತ ಬಲಿ
Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.