ಕೋವಿಡ್ 19 ನಿರ್ಮೂಲನೆಗೆ ವೃಕ್ಷಮಾತೆ ತಿಮ್ಮಕ್ಕ ಪ್ರಾರ್ಥನೆ
Team Udayavani, Jun 6, 2020, 6:32 AM IST
ಕುದೂರು: ಮಹಾಮಾರಿ ಕೋವಿಡ್ 19 ವಿಶ್ವದಿಂದ ನಿರ್ಮೂಲನೆಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಎಂದು ಹೇಳಿದರು. ಕುದೂರು ಹೋಬಳಿ ತಿಮ್ಮಸಂದ್ರ ಗ್ರಾಮದಲ್ಲಿ ನೇತ್ರಾ ಕ್ರಾಫ್ಟ್ ಸೈನ್ಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ವಿಶ್ವವೇ ಕೋವಿಡ್ 19 ವೈರಸ್ ನಿಂದ ಮುಕ್ತವಾಗಲು ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದೆ. ಮತ್ತೂಂದು ಕಡೆ ಜನರು ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವುದನ್ನು ನೋಡಲಾಗುತ್ತಿಲ್ಲ. ಹೀಗಾಗಿ ಪ್ರತಿ ದಿನ ಭಗವಂತನಲ್ಲಿ ಕೋವಿಡ್ 19ದಿಂದ ಸಮಸ್ತ ರನ್ನು ಪಾರು ಮಾಡಿ, ಉತ್ತಮ ಪರಿಸರ ದಿಂದ ಜನ ಜೀವನ ಮೊದಲಿನಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದರು.
ಹೋಬಳಿಯಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂಬ ಹಂಬಲವಿತ್ತು. ಅದರಂತೆ ನೇತ್ರಾ ಕ್ರಾಫ್ಟ್ಸೈನ್ಸ್ ರೈತ ಸಂಸ್ಥೆಯ ಆಹ್ವಾನ ಆಮಂತ್ರಣ ದಿಂದಾಗಿ ಬಂದಿದ್ದೇನೆ. ಈಗ ಹೋಬಳಿಯಲ್ಲಿ ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇನೆ. ಇದು ಅತ್ಯಂತ ಸಂತಸ ತಂದಿದೆ ಎಂದರು.
ಮಣ್ಣಿಗೆ ನಮಸ್ಕಾರ: ಹೋಬಳಿಯ ತಿಮ್ಮಸಂದ್ರ ಗ್ರಾಮದ ಕಾರ್ಯಕ್ರಮಕ್ಕೆ ಬಂದ ವೃಕ್ಷಮಾತೆ ತಿಮ್ಮಕ್ಕ ಮೊದಲು ಮಣ್ಣಿಗೆ ನಮಸ್ಕರಿಸಿದರು. ಅವರ ಸರಳತೆಗೆ ಸಂಸ್ಥೆ ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟಿದರು. ಬಳಿಕ ಹಲಸಿನ ಗಿಡ ನೆಟ್ಟು ನೀರುಣಿಸಿದರು. ದತ್ತುಪುತ್ರ ಉಮೇಶ್, ನೇತ್ರಾಕ್ರಾಫ್ಟ್ ಸೈನ್ಸ್ ಸಂಸ್ಥೆ ಸಂಸ್ಥಾಪಕ ಸೆಲ್ವರಾಜ್, ನಿರ್ದೇಶಕಿ ಎಸ್. ರಾಜೇಶ್ವರಿ, ಪ್ರಮೋದ್, ಕೃಷಿ ವಿಜ್ಞಾನಿ ಗಳಾದ ಡಾ.ಸದಾಶಿವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.