ಅಧಿಕಾರಿಗಳ ಕೈಯಲ್ಲಿ ಶೌಚಾಲಯದ ಬೀಗ
Team Udayavani, Jun 15, 2020, 7:21 AM IST
ಮಾಗಡಿ: ಪಟ್ಟಣದ ಹೃದಯ ಭಾಗದಲ್ಲಿ ಬಹು ದೊಡ್ಡ ಸರ್ಕಾರಿ ಕಚೇರಿ ಸಂಕೀರ್ಣವಿದ್ದರೂ ಮೂತ್ರ ವಿಸರ್ಜನೆಗೆ ಸಾರ್ವಜನಿಕರು ಪರದಾಡಬೇಕಾಗಿದೆ. ಈ ಕಚೇರಿ ಸಂಕೀರ್ಣದಲ್ಲಿ ಹತ್ತಾರು ಸರ್ಕಾರಿ ಇಲಾಖೆಗಳು ಕಾರ್ಯನಿರ್ವ ಹಿಸುತ್ತಿವೆ. ತಾಲೂಕಿನ ಬಹುತೇಕ ಸಾರ್ವ ಜನಿಕರು ತಮ್ಮ ದಿನ ನಿತ್ಯದ ಕೆಲಸಕ್ಕೆ ಒಂದಲ್ಲ ಒಂದು ಕಚೇರಿಗೆ ಆಗಮಿಸುತ್ತಲೇ ಇರುತ್ತಾರೆ.
ಅದರಲ್ಲೂ ಪ್ರಮುಖವಾಗಿ ಉಪನೊಂದಣಾ ಧಿಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶಿಶು ಭಿವೃದಿಟಛಿ ಇಲಾಖೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿರುತ್ತಾರೆ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶೌಚಾಲಯಗಳಿವೆ. ಆದರೆ ಕಚೇರಿಗೆ ಬರುವ ಸಾರ್ವಜನಿಕರು ನಿತ್ಯ ದೇಹಬಾಧೆಯ ಕಷ್ಟ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳು ಇರುವುದು. ಆದರೆ ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡಲು ಶೌಚಾಲಯವಿಲ್ಲದೆ ಪರದಾಡುತ್ತಾ ಕಚೇರಿ ಕಟ್ಟಡದ ಕೆಳಗೋ ಅಥವಾ ಗೋಡೆಯನ್ನೋ ಆಶ್ರಯಿಸಬೇಕಿದೆ. ಇನ್ನು ಮಕ್ಕಳು- ಮಹಿಳೆಯರ ಪಾಡಂತೂ ಹೇಳತೀರದು ಕಚೇರಿ ಆವರಣದಲ್ಲಿ ಶೌಚಾಲಯವಿಲ್ಲದ ಕಾರಣ ಸಾರ್ವಜನಿಕರು ದೇಹಭಾದೆ ಅನುಭವಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಸಹಾಯಧನ ಪಡೆದು ಉಚಿತವಾಗಿ ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಂಡು ಬಳಸಿ ಬಯಲು ಮುಕ್ತ ಶೌಚಾಲಯ ಮಾಡುವಂತೆ ಕರೆ ನೀಡುತ್ತಿದ್ದಾರೆ. ಜಾಗತೀಕರಣ ಮತ್ತು ಆಧುನಿಕತೆ ಯಲ್ಲಿಯೂ ಸಾರ್ವಜನಿಕರು ಮಲಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಿಯಿಸುವ ಪರಿಸ್ಥಿತಿ ಎದುರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಂದು ದೂರಿದರು.
ಹಾರಿಕೆ ಉತ್ತರ: ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಶೌಚಾಲಯಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಬೀಗ ಹಾಕಿಕೊಂಡು ಅವರು ಮತ್ತು ಸಿಬ್ಬಂದಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಕೇಳಿದರೆ ನೀರಿಲ್ಲ, ಅದಕ್ಕೆ ಬೀಗ ಹಾಕಿದ್ದೇವೆ ಎಂದು ಹಾರಿಕೆ ಉತ್ತರ ಕೊಟ್ಟು ಬಾಯಿ ಮುಚ್ಚಿಸುತ್ತಾರೆ. ನೀರಿದ್ದರೂ ಸಾರ್ವಜನಿಕರ ಬಳಕೆಗೆ ಬೀಗ ಕೊಡುತ್ತಿಲ್ಲ, ಸಂಬಂಧಪಟ್ಟ ಶಾಸಕರು ಇತ್ತ ಗಮನಹರಿಸಿ ಶೌಚಾಲಯಕ್ಕೆ ಹಾಕಿರುವ ಬೀಗ ಕಿತ್ತೆಸೆದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರತ್ಯೇಕ ಶೌಚಾಲಯವನ್ನು ಕಚೇರಿ ಆವರಣದಲ್ಲಿ ಶಾಸಕರೇ ಕಟ್ಟಿಸಿಕೊಡಲಿ ಎಂದು ರೈತಸಂಘದ ಮಧುಗೌಡ ಮನವಿ ಮಾಡಿದ್ದಾರೆ.
ಸರ್ಕಾರಿ ಕಚೇರಿ ಕಟ್ಟಡದಲ್ಲಿ ಶೌಚಾಲಯವಿದೆ. ಸಾರ್ವಜನಿ ಕರು ಮಲಮೂತ್ರ ವಿಸರ್ಜನೆ ಮಾಡಿ ಸರಿಯಾಗಿ ನೀರು ಹಾಕದೆ ಗಲೀಜು ಮಾಡಿ ಹೋಗುತ್ತಾರೆ. ಸ್ವಚ್ಛತೆ ಮಾಡುವ ಸಿಬ್ಬಂದಿಗಳಿಲ್ಲ, ತಾವು ಉಪಯೋಗಿಸಿದ ಮೇಲೆ ನೀರು ಹಾಕಿ ಸ್ವಚ್ಛತೆಗೆ ಸಹರಿಸುವಂತೆ ತಿಳಿ ಹೇಳುತ್ತಿದ್ದೇವೆ. ಆದರೂ ಸ್ವಚ್ಛತೆ ಕಾಪಾಡುತ್ತಿಲ್ಲ.
-(ಹೆಸರೇಳಲು ಇಚ್ಚಿಸದ ಅಧಿಕಾರಿ)
* ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.