ಮತ್ತೆ ಟೊಯೋಟಾ ಕಂಪನಿ ಲಾಕೌಟ್
ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗುತ್ತಿಲ್ಲ.
Team Udayavani, Nov 25, 2020, 3:47 PM IST
ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟ ಕಿರ್ಲೋಸ್ಕರ್ ಮೋಟಾರ್‌ಕಂಪನಿ ಮತ್ತೆ ಲಾಕೌಟ್‌ಘೋಷಿಸಿದೆ. ಸರ್ಕಾರದ ಆದೇಶದಂತೆ ಟಿ.ಕೆ.ಎಂ ಆಡಳಿತ ಮಂಡಳಿ ನ.19ರಿಂದ ಲಾಕೌಟ್ ತೆರವುಗೊಳಿಸಿತ್ತು. ಆದರೆ, ಕೆಲವೇ ಕಾರ್ಮಿ ಗಳು ಕೆಲಸಕ್ಕೆ ಬರುತ್ತಿದ್ದಾರೆ. ಬಹುಪಾಲು ಕಾರ್ಮಿಕರು ತಮ್ಮ ಮುಷ್ಕರವನ್ನು ಮುಂದುವರಿಸುತ್ತಿದ್ದಾರೆ.
ಕಾರ್ಖಾನೆಯ ಕಾರ್ಯಾಚರಣೆ ಸುಗಮ ಮತ್ತು ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಪಾಳಿಯಲ್ಲಿ ಕನಿಷ್ಠ ಶೇ.90 ಉದ್ಯೋಗಿಗಳ ಅಗತ್ಯವಿರುತ್ತದೆ, ಅಲ್ಪ ಸ್ವಲ್ಪ ಕಾರ್ಮಿಕರು ಹಾಜರಾಗಿರುವುದರಿಂದ ಲಾಕೌಟ್ ಘೋಷಿಸದೆ ಅನ್ಯ ಮಾರ್ಗವಿರಲಿಲ್ಲ ಎಂದುಟೊಯೋಟದ ವಕ್ತಾರರು ತಿಳಿಸಿದ್ದಾರೆ.
ಉದ್ಯೋಗಕ್ಕೆ ಬರಲಿಚ್ಛಿಸುವ ಕಾರ್ಮಿಕರನ್ನೂ ಅಕ್ರಮವಾಗಿ ಮುಷ್ಕರ ನಡೆಸುತ್ತಿರುವವರು ಪ್ರಚೋದಿಸುತ್ತಿದ್ದಾರೆ. ಸಂಸ್ಥೆಯ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಭಾಷಣವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:6 ತಿಂಗಳ ಬಳಿಕ ಅಮೇರಿಕಾದಲ್ಲಿ ಒಂದೇ ದಿನ 2,146 ಮಂದಿ ಕೋವಿಡ್ ಸೋಂಕಿಗೆ ಬಲಿ
ಕಂಪನಿಯ ಅಧಿಕಾರಿಗಳನ್ನು ದೂಷಿಸುವುದಲ್ಲದೆ ಅವರಿಗೆ ಬೆದರಿಕೆ ಹಾಕುವುದನ್ನು ಸಹ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ದೂರಲಾ ಗಿದೆ. ನ.19ರಂದು ಟಿಕೆಎಂ ಲಾಕೌಟ… ಹಿಂತೆದುಕೊಂಡ ನಂತರ ಪ್ರತಿದಿನ 400 ರಿಂದ 500 ಮಂದಿ ಯೂನಿಯನ್ ಸದಸ್ಯರು ತಮಗೆ ಗೊತ್ತುಪಡಿಸಿದ ನಿಗದಿತ ಸಮಯವನ್ನು ಮೀರಿ ಕಂಪನಿಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸುತ್ತಿದ್ದಾರೆ. ಈ ಸದಸ್ಯರ ಚಟುವಟಿಕೆಗಳು ಕಾರ್ಖಾನೆಯ ಸುತ್ತ ಆತಂಕದ ಪರಿಸ್ಥಿತಿಯನ್ನು ನಿರ್ಮಿ ಸಿದೆ.
ಇತರೆ ಉದ್ಯೋಗಿಗಳಿಗೆ ಅಸುರಕ್ಷತೆಯ ವಾತಾವರಣ ಏರ್ಪ ಟ್ಟಿದೆ. ಇವೆಲ್ಲದರ ಪರಿಣಾಮ ಬೇರೆ ದಾರಿಯಿಲ್ಲದೆ ಲಾಕೌಟ್ ಘೋಷಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪರಸ್ಪರ ನಂಬಿಕೆ ಮತ್ತು ಗೌರವದಿಂದ ಸದಸ್ಯರೊಂದಿಗೆ ಸಂಪೂರ್ಣ ಮುಕ್ತಸಂವಹನದ ಮೂಲಕ ಪರಿಸ್ಥಿತಿಗೆ ತ್ವರಿತ ಪರಿಹಾರ ಕಂಡು ಹಿಡಿಯಲು ಟಿಕೆಎಂ ಬಯುಸುತ್ತದೆ. ದುರಾದೃಷ್ಟವಶಾತ್, ಈ ಅಕ್ರಮ ಮುಷ್ಕರವನ್ನು ಕೊನೆಗೊಳಿಸುವ ವಿಚಾರ ಕಾರ್ಮಿಕರ ಸಂಘದಿಂದ ವ್ಯಕ್ತವಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.
ನಾವುಕೆಲಸ ಮಾಡಲು ಸಿದ್ಧ, ಕಂಪನಿಯೇ ಅವಕಾಶಕೊಡ್ತಿಲ್ಲ
ರಾಮನಗರ: ಸರ್ಕಾರ ಲಾಕೌಟ್ ನಿಷೇಧಿಸಿ ಆದೇಶ ಹೊರಡಿಸಿದ್ದ ರೂ ಟೊಯೋಟಾ ಪುನಃ ಲಾಕೌಟ್ ಘೋಷಿಸಿದೆ ಎಂದು ಟಿಕೆಎಂ ನೌಕರರ ಸಂಘ ಆರೋಪಿಸಿದೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಟಿಕೆಎಂ ನೌಕರರ ಸಂಘದ ಪದಾಧಿಕಾರಿಗಳು, ಸರ್ಕಾರ ಕಾರ್ಮಿಕರ ಮುಷ್ಕರವನ್ನು, ಕಾರ್ಖಾನೆಯ ಲಾಕೌಟ್ ಎರಡನ್ನು ನಿಷೇಧಿಸಿ ಆದೇಶ ಹೊರೆಡಿಸಿತ್ತು.
ಆದೇಶದನ್ವಯ ಕಾರ್ಖಾನೆ ಕೂಡ ಲಾಕೌಟ್ ತೆರವುಗೊ ಳಿಸಿತ್ತು. ನಾವು ಸಹ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದೆವು. ಆದರೆ, ಕೆಲಸಕ್ಕೆ ಆಡಳಿತ ಮಂಡಳಿ ಮುಚ್ಚಳಿಕೆ ಬರೆದುಕೊಡುವಂತೆ ಒತ್ತಾಯ ಮಾಡಿತು. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮುಚ್ಚಳಿಕೆ ಬರೆದುಕೊಡುವುದಿಲ್ಲ ಎಂದು ಸ್ಪಷ್ಟವಾಗಿತ್ತು. ಆದರೂ, ಆಡಳಿತ ಮುಚ್ಚಳಿಕೆ ಬರೆದುಕೊಡುವಂತೆ ಒತ್ತಾಯಿಸಿತು.
ಅಲ್ಲದೆ ಶಿಫ್ಟ್ ನಿಯಮಾವಳಿಗಳ ಪ್ರಕಾರ ಹೋದರು,ಕೆಲಸಕ್ಕೆ ಕರೆದುಕೊಳ್ಳಲಿಲ್ಲ. 2010ನೇ ಇಸವಿಯಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಅರ್ಧ ದಿನ ಕೆಲಸಕ್ಕೆ ಅವಕಾಶವಿದೆ. ಉದಾಹರಣೆಗೆ ಬೆಳಗ್ಗೆ 5.30ರ ಶಿಫ್ಟ್ ಆರಂಭವಾಗುತ್ತದೆ. 5.30ಕ್ಕೆ ಹಾಜರಾಗಲು ಸಾಧ್ಯ ಬರಬೇಕು ಎಂಬಿತ್ಯಾದಿ ಅನಾವಶ್ಯಕ ಕಾರಣಗಳನ್ನು ಕೊಡುತ್ತಿದ್ದಾರೆ ಎಂದು ದೂರಿದರು.
ನಾವು ಕೆಲಸ ಮಾಡಲು ಸಿದ್ಧವಿದ್ದರೂ. ಆಡಳಿತ ಮಂಡಳಿಯ ಅಧಿಕಾರಿಗಳು ತಾವೇ ಏನೇನೋ ಕಲ್ಪಿಸಿಕೊಂಡು ನೌಕರರನ್ನು ಕೆಲ ಸಕ್ಕೆ ಒಳಗೇ ಬಿಡುತ್ತಿಲ್ಲ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ನೌಕರರ ಹೋರಾಟ ಬೆಂಬಲಿಸಿ ಕಾಲ್ನಡಿಗೆ ಜಾಥಾ
ಟಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ (ಟಿ.ಕೆ.ಎಂ) ನೌಕರರ ಪ್ರತಿಭಟನೆಗೆ ಬೆಂಬಲ ವ್ಯಕಪ ¤ ಡಿಸಿ ಕಸ್ತೂರಿ ಕರ್ನಾ ಟಕ ಜನಪರ ವೇದಿಕೆ ಕಾರ್ಯಕರ್ತರು ಕಾಲ್ನಡಿಗೆ ಜಾಥಾ ನಡೆಸಿದರು. ತಾಲೂಕಿನ ಬಿಡದಿ ಬಳಿಯ ಬೈರಮಂಗಲ ವೃತ್ತದ ಬಳಿಯಿಂದ ಟೊಯೋಟಾ ನೌಕರರ ಪ್ರತಿಭಟನಾ ಸ್ಥಳಕ್ಕೆ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಜಾಥಾದಲ್ಲಿ ತೆರಳಿದ ಅವರು ನೌಕರರ ಜೊತೆ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು ಟಿ.ಕೆ.ಎಂ. ತನ್ನ ಕಾರ್ಮಿಕರನ್ನು ಪ್ರಾಣಿಗಳಂತೆ ಮತ್ತು ತೀರಾ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಕಾರ್ಮಿಕರು ಸಮಯದ ಮಿತಿ ಇಲ್ಲದಂತೆ ಕೆಲಸ ಮಾಡಬೇಕಾಗಿದೆ.
ತಾಂತ್ರಿಕ ಸಹಕಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಸಂಬಳದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಆದರೆ, ಕಡಿಮೆ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಉತ್ಪಾದನೆ ಮಾತ್ರ ಹೆಚ್ಚಾಗಬೇಕು ಎಂದು ಕಂಪನಿಯವರ ವಾದವಾಗಿದೆ ಎಂದು ಹೇಳಿದರು.
ಕೆಲಸದ ಒತ್ತಡದಿಂದ ಚಿಕ್ಕವಯಸ್ಸಿನ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಪ್ರಶ್ನೆ ಮಾಡಿದರೆ ಅಮಾನತ್ತಿನ ಶಿಕ್ಷೆ ನೀಡುತ್ತಿರುವ ಸಂಸ್ಥೆ ಮಾನವೀಯತೆಯನ್ನೇ ಮರೆತಂತಿದೆ ಎಂದರು.
ಕಾರ್ಮಿಕರಿಗೆ ಅನುಕೂಲವಾಗುವ ಮತ್ತು ಕಾರ್ಯನಿರ್ವಹಿಸಲು ಉತ್ತಮ ವಾತಾವರಣ ನಿರ್ಮಾಣಮಾಡಬೇಕು ಎಂದುಕಾರ್ಮಿ ಕರು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾಗದಿದ್ದಲ್ಲಿ ಕಾರ್ಮಿಕ ಸಚಿವರ ಮನೆ ಮುಂದೆ ಧರಣಿನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷರಾದ ರಂಜಿತ್‌ಗೌಡ, ಬೆಂಕಿ ಶ್ರೀಧರ್, ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲು, ಪದಾಧಿಕಾರಿಗಳಾದ ಬಾಬ್‌ರಾಮಣ್ಣ, ಅರುಣ್‌ಸಿಂಗ್, ಶಿವಣ್ಣ, ಜಾನಪದ ಕಲಾವಿದರಾದ ಹುರುಗಲವಾಡಿ ರಾಮಯ್ಯ, ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಚಕ್ಕೆರೆ ಪ್ರಸನ್ನ, ಗಂಗಾಧರ್, ಬಸವರಾಜು, ಪ್ರದೀಪ್, ಪ್ರಕಾಶ್, ಶ್ರೀನಿವಾಸ್, ದೀಪಕ್, ವೀರೇಶ್, ಉಮೇಶ್, ದೀಪಕ್ ಎಸ್.ಆರ್, ರವಿ, ಕಣ್ವ ದೀಪು, ಸುರೇಶ್ ಸಂಕಲಗೆರೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.