ಟೊಯೋಟಾ : ಕಾರ್ಮಿಕರೊಂದಿಗೆ ಸಚಿವರ ಚರ್ಚೆ
ಸರ್ಕಾರದ ಸಲಹೆ, ಸೂಚನೆಗೆ ಉತ್ತರಿಸಲು ಒಂದು ದಿನ ಕಾಲಾವಕಾಶ ಕೇಳಿದ ಟೊಯೋಟಾ
Team Udayavani, Feb 5, 2021, 12:59 PM IST
ರಾಮನಗರ: ಕಳೆದ 88 ದಿನಗಳಿಂದ ನಡೆಯುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಕಾರ್ಮಿಕರ ಮುಷ್ಕರ ತಾರ್ಕಿಕ ಅಂತ್ಯ ಮುಟ್ಟುವ ಬೆಳವಣಿಗೆ ಗೋಚರಿಸುತ್ತಿದೆ.
ಅಮಾನತುಗೊಂಡಿರುವ 74 ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ಪಡೆಯಬೇಕು. ಕೆಲಸಕ್ಕೆ ಮರಳಲಿಚ್ಚಿಸುವ ಕಾರ್ಮಿಕರಿಂದ ಮುಚ್ಚ ಳಕೆ ಬರೆಸಿಕೊಳ್ಳಬಾರದು ಎಂದು ಸರ್ಕಾರ ಸೂಚಿಸಿದೆ. ಈ ಬಗ್ಗೆ ಆಡಳಿತ ಮಂಡಳಿ ಫೆ.5ಕ್ಕೆ ತನ್ನ ಅಭಿಪ್ರಾಯ ತಿಳಿಸಲಿದೆ.
ಸಚಿವರ ಭೇಟಿ ನಂತರದ ನಿಲುವು ಬಹುತೇಕ ಕಾರ್ಮಿಕರ ಪರವಾಗಿದ್ದು, ಕಂಪನಿ ಸರ್ಕಾರದ ನಿಲುವು ಒಪ್ಪಿದರೆ ಸಮಸ್ಯೆಗೆ ಸುಖಾಂತ್ಯ ದೊರೆಯಲಿದೆ.
ಸುದೀರ್ಘ ಚರ್ಚೆ: ಸಚಿವ ಎ.ಶಿವರಾಂ ಹೆಬ್ಟಾರ್, ಶಾಸಕ ಎ.ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್ಪಿ ಗಿರೀಶ್, ಕಾರ್ಮಿಕ ಇಲಾಖೆ ಅಧಿಕಾರಿಗಳು ಟೊಯೋಟಾ ಕಂಪನಿಗೆ ಭೇಟಿ ನೀಡಿ ಕಾರ್ಮಿಕರ ಆರೋಪಗಳ ಸಂಬಂಧ ಪರಿಶೀಲಿಸಿದರು. ಬಳಿಕ ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆ 2 ಗಂಟೆ ಕಾಲ ಚರ್ಚಿಸಿದರು. ಕಂಪನಿ ತನ್ನ ಸಮಸ್ಯೆ ಬಿಚ್ಚಿಟ್ಟಿದ್ದು,ಸಚಿವರು ಕೆಲವೊಂದು ಸಲಹೆ ನೀಡಿದ್ದಾರೆ. ಅಲ್ಲದೇ,ಮುಷ್ಕರ ತಾರ್ಕಿಕ ಅಂತ್ಯ ಕಾಣಲಿ ಎಂದು ಆಶಿಸಿದ್ದಾರೆ.
ಇದನ್ನೂ ಓದಿ :ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲು ರದ್ದುಪಡಿಸಿ
ಆಡಳಿತ ಮಂಡಳಿಯೊಂದಗಿನ ಚರ್ಚೆ ನಂತರ ಬಿಡದಿ ಕೈಗಾರಿಕೆ ಸಂಘದ ಸಭಾಂಗಣದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಮತ್ತು ಪದಾಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು. ಬಳಿಕ ಮುಷ್ಕರ ಸ್ಥಳಕ್ಕೆ ತೆರಳಿದರು. ಈ ವೇಳೆ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಸಚಿವ ಎ.ಶಿವರಾಂ ಹೆಬ್ಟಾರ್ ಹಾಗೂ ಶಾಸಕ ಎ.ಮಂಜುನಾಥ್, ಕಾರ್ಮಿಕರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್, ಬಿಡದಿ ಪುರಸಭೆ, ಗ್ರಾಪಂ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.