Kanakapura: ದುಷ್ಕರ್ಮಿಗಳಿಂದ ನಿಧಿ ಶೋಧ: ಪಾಂಡವರಗುಡ್ಡೆ ರೈತರಲ್ಲಿ ಹೆಚ್ಚಿದ ಆತಂಕ


Team Udayavani, Feb 19, 2024, 3:16 PM IST

12

ಕನಕಪುರ: ಕೃಷಿ ಭೂಮಿಯಲ್ಲಿ ಆಗಾಗ ನಿಧಿ ಶೋಧಕ್ಕಿಳಿದಿರುವ ದುಷ್ಕರ್ಮಿಗಳ ಕೃತ್ಯಕ್ಕೆ ತೇರು ಬೀದಿ ಗ್ರಾಮದ ಪಾಂಡವರ ಗುಡ್ಡೆಯ ಜನರು ಆತಂಕಕ್ಕೊಳಗಾಗಿದ್ದಾರೆ. ಹಾರೋಹಳ್ಳಿ ತಾಲೂಕಿನ ತೇರುಬೀದಿ ಗ್ರಾಮದ ಪಾಂಡ ವರಗುಡ್ಡೆಯ ರೈತರ ಜಮೀನಿನಲ್ಲಿ ನಿಧಿ ಶೋಧ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತೇರು ಬೀದಿ ಗ್ರಾಮದ ಪಾಂಡವರ ಗುಡ್ಡೆಯ ಹನು ಮಂತ ನಾಯಕ್‌ ಅವರ ಜಮೀನಿನಲ್ಲಿ ಕೆಲವು ದುಷ್ಕರ್ಮಿಗಳು ಗುಂಡಿ ಬಗೆದು ಅರಿಶಿಣ, ಕುಂಕುಮ ಚೆಲ್ಲಾಡಿ ನಿಧಿ ಶೋಧ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿಗೆ ನಿಧಿ ಶೋಧ ಮಾಡಿರುವುದು ಬೆಳಕಿಗೆ ಬಂದಿದ್ದು, ಪದೇ ಪದೆ ದುಷ್ಕರ್ಮಿಗಳು ರೈತರ ಜಮೀನಿನಲ್ಲಿ ನೀಧಿ ಶೋಧಕ್ಕಿಳಿದಿರುವುದು ಸಹಜವಾಗಿಯೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಆತಂಕ: ಈ ಹಿಂದೆ ಈ ಜಾಗದಲ್ಲಿ ಪಾಂಡವರು ಬಳಸುತ್ತಿದ್ದ ಬಾಣ ದಂತಹ ಕೆಲವು ಕುರುಹುಗಳು ಪತ್ತೆ ಯಾಗಿದ್ದವು ಎಂಬುದು ಗ್ರಾಮದ ಹಿರಿಯ ನಾಗರಿಕರ ಅಭಿ ಪ್ರಾಯ. ಮಹಾಭಾರತದ ನಡೆದ ಕಾಲ ಘಟ್ಟದಲ್ಲಿ ಇಲ್ಲಿ ಪಾಂಡವರು ಓಡಾಡಿ ರಬಹುದೇ ಎಂಬ ಕುತೂಹಲ ಕೂಡ ಗ್ರಾಮಸ್ಥರಲ್ಲಿ ಮೂಡಿಸಿದೆ. ಇಲ್ಲಿ ಪಾಂಡವರ ಕಾಲದ ನಿಧಿ ಸಿಗಬಹುದು ಎಂದು ದುಷ್ಕರ್ಮಿಗಳು ಆಗಾಗ ಬಂದು ನಿಧಿ ಶೋಧ ಮಾಡುತ್ತಿರಬಹುದು ಎಂಬುದು ಗ್ರಾಮಸ್ಥರ ಆತಂಕ.

4 ರಿಂದ 5 ಅಡಿಗಳಷ್ಟು ಗುಂಡಿ ತೆಗೆದು ನಿಧಿಗಾಗಿ ಶೋಧ: ಇತ್ತೀಚಿಗೆ ನಿಧಿ ಶೋಧ ಮಾಡಿರುವ ದುಷ್ಕರ್ಮಿಗಳು ರೈತರ ಜಮೀನಿನಲ್ಲಿ ಸುಮಾರು 4ರಿಂದ 5 ಅಡಿಗಳಷ್ಟು ಗುಂಡಿ ಹಗೆದು ನಿಧಿಗಾಗಿ ಶೋಧ ನಡೆಸಿದ್ದಾರೆ. ನಿಧಿ ಶೋಧ ನಡೆಸಿರುವ ಸ್ಥಳದಲ್ಲಿ ಒಡೆದು ಹಾಕಿರುವ ಕೆಲವು ಹಳೆಯ ಕಾಲದ ಮಡಿಕೆ ಚೂರುಗಳು ಸಹ ಪತ್ತೆಯಾಗಿದ್ದು, ದುಷ್ಕರ್ಮಿಗಳಿಗೆ ನಿಧಿ ಸಿಕ್ಕರಬಹುದು. ಮಡಿಕೆ ಯನ್ನು ಹೊಡೆದು ಹಾಕಿ ನಿಧಿ ತೆಗೆದು ಕೊಂಡು ಹೋಗಿರಬಹುದು ಎಂಬ ಶಂಕೆ ಕೂಡ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿ ಶೀಲನೆ ನಡೆಸಿದರೆ ಒಂದಷು ಇತಿಹಾಸ ಕುರುಹುಗಳು ಸಿಗಬಹುದು ಎಂಬುದು ಗ್ರಾಮಸ್ಥರ ಒತ್ತಾಯ.

ಹಿಂದೆ ನಿಧಿ ಶೋಧ ಮಾಡಿದ್ದ ತಂಡದಲ್ಲಿದ್ದ 3 ಮಂದಿ ಸಾವು  : ಕಳೆದ ಒಂದು ವರ್ಷದ ಹಿಂದೆ 8 ರಿಂದ 10 ಮಂದಿ ದುಷ್ಕರ್ಮಿಗಳು ಇದೇ ಜಾಗದಲ್ಲಿ ನಿಧಿ ಶೋಧ ಮಾಡುತ್ತಿದ್ದಾಗ ಗ್ರಾಮ ಸ್ಥರು ದುಷ್ಕರ್ಮಿಗಳನ್ನು ಹಿಡಿದು ಹಾರೋಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು. ಆ ನಂತರ ಇಲ್ಲಿ ನಿಧಿ ಶೋಧ ದಂತಹ ಚಟು ವಟಿಕೆ ಗಳು ಕಡಿಮೆಯಾಗಿತ್ತು. ಈಗ ಮತ್ತೆ ಪ್ರಾರಂಭ ಮಾಡಿದ್ದಾರೆ. ಈ ಹಿಂದೆ ನಿಧಿ ಶೋಧ ಮಾಡಿದ್ದ ತಂಡದಲ್ಲಿದ್ದ 3 ಮಂದಿ ಈಗಾ ಗಲೇ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಇನ್ನುಳಿದಿರುವ 5 ಜನರನ್ನು ವಿಚಾರಣೆ ಗೊಳಪಡಿಸಿದರೆ ಈ ಕೃತ್ಯ ಯಾರು ನಡೆಸಿದ್ದಾರೆ ಎಂಬ ಸತ್ಯ ಹೊರಬರಬಹುದು ಎಂಬುದು ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ.

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.