ಮೃತ್ಯುಕೂಪದಂತೆ ಬಾಯ್ತೆರೆದಿರುವ ಕೊಳವೆ ಬಾವಿ
ಶಾಲಾ ಮಕ್ಕಳು ಹೋಗುವ ಹಾದಿಯಲ್ಲೇ ಮೃತ್ಯುಬಾವಿ; ಅನಾಹುತ ತಡೆಗೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಿ
Team Udayavani, Sep 16, 2021, 4:30 PM IST
ಕುದೂರು: ಬಾಯ್ತೆರೆದಿರುವ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನವಿದ್ದರೂ ಅಂಥ ಬಾವಿಗಳು ಅಲ್ಲಲ್ಲಿ ಕಾಣುತ್ತಿವೆ. ಕುದೂರು ಹೋಬಳಿಯ ಅರಿಶಿನಕುಂಟೆ ಗ್ರಾಮದ ರಸ್ತೆಯ ಬದಿಯಲ್ಲಿ ವಿಫಲವಾಗಿರುವ ಕೊಳವೆಬಾವಿ ಮೃತ್ಯುಬಾವಿಯಂತೆ ಕಾದು ಕುಳಿತಿದೆ.
ಅರಿಶಿನಕುಂಟೆಯಿಂದ ವೀರಾಪುರ ಮಾರ್ಗಕ್ಕೆ ಹೋಗುವ ವೃತ್ತದ ಎಡಬದಿಯಲ್ಲಿರುವ ಇಂಥ ಬಾವಿ ಇದ್ದು, ಸಂಬಂಧಿಸಿದವರು ಇತ್ತ ಕಡೆ ಗಮನ
ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸುಮಾರು ವರ್ಷಗಳ ಹಿಂದೆ ಈ ಕೊಳವೆ ಬಾವಿ ಕೊರೆಸಿದ್ದು ಈವರೆಗೂ ಅದಕ್ಕೆ ಸೂಕ್ತ ಮುಚ್ಚಳಿಕೆ ಅಳವಡಿಸಿದೇ ಬೇಜವಾಬ್ದಾರಿತನ ತೋರಿದ್ದಾರೆ.
ತೆರೆದ ಕೊಳವೆ ಬಾವಿ ಪೈಪ್: ಅರಿಶಿನಕುಂಟೆ ಗ್ರಾಮದ ರಸ್ತೆಯ ಪಕ್ಕದಲ್ಲಿ ಕೊಳವೆ ಬಾವಿ ತೆರದಿದ್ದು, ವಿಫಲರಾಗಿರುವ ಹಿನ್ನೆಲೆ ಕೇಸಿಂಗ್
ಪೈಪ್ ಬಾಯೆ¤ರೆದು ನಿಂತಿದೆ. ಇದೇ ರಸ್ತೆಯಲ್ಲಿ ಶಾಲೆಯಿದ್ದು ಪ್ರತಿ ನಿತ್ಯ ವಿದ್ಯಾರ್ಥಿಗಳು ಕೊಳವೆ ಬಾವಿ ಪಕ್ಕದಲ್ಲೇ ಹಾದುಹೋಗುತ್ತಾರೆ. ಆಕಸ್ಮಾತ್ ಚಿಕ್ಕಮಕ್ಕಳು ಬಗ್ಗಿ ನೋಡಲು ಹೋಗಿ ಏನಾದರೂ ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಎಂಬ ಪ್ರಶ್ನೆ ತಲೆದೂರಿದೆ.
ತೆರವುಗೊಳಿಸಿ: ರಸ್ತೆಯ ಬದಿಯಲ್ಲೇ ಬಾಯ್ತೆರೆದಿರುವ ಕೊಳವೆ ಬಾವಿ ಕೇಸಿಂಗ್ ಪೈಪ್‌ಗೆ ಸಂಬಂಧ ಪಟ್ಟವರು ಮುಚ್ಚಳ ಹಾಕುವುದನ್ನು
ಮರೆತಿದ್ದಾರೆ. ಗ್ರಾಪಂ ಈ ಕೇಸಿಂಗ್ ಪೈಪ್ ಮುಚ್ಚುವ ಕೆಲಸಕ್ಕೂ ಮುಂದಾಗಿಲ್ಲ. ರಾತ್ರಿ ವೇಳೆ ಪಾದಾಚಾರಿಗಳು ಎಡವಿಬಿದ್ದಿರುವ ನಿದರ್ಶನ ಗಳು ಇವೆ. ಇಂತಹ ಪರಿಸ್ಥಿತಿ ಇರುವ ಈ ಕೇಸಿಂಗ್ ಪೈಪ ಮುಚ್ಚುವ ಗೋಜಿಗೆ ಮುಂದಾಗದಿರುವುದು ಜನರ ಅತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಗುಜರಾತ್: 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಹಲವರಿಗೆ ಕೊಕ್
ಅವಘಡ: ಈಗಾಗಲೇ ರಾಜ್ಯದಲ್ಲಿ ಹಲವಾರು ಕಡೆ ಇಂತಹ ಅನೇಕ ಕೊರೆಸಿದ ಕೊಳವೆ ಬಾವಿಗಳಲ್ಲಿ ಬಿದ್ದು ಅದೆಷ್ಟೋ ಮಕ್ಕಳು ಪ್ರಾಣ ತೆತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಕೂಡ ಕೋಟಿ ಗಟ್ಟಲೆ ಹಣ ವ್ಯಯಿಸಿದರೂ ಮಕ್ಕಳನ್ನು ಬದುಕಿಸಿಕೊಳ್ಳಲಾಗಿಲ್ಲ. ಮಾದಿಗೊಂಡನಹಳ್ಳಿ ಗ್ರಾಪಂ ಅಧಿಕಾರಿಗಳು ಬಾಯ್ತೆರೆದಿರುವ ಕೊಳವೆ ಬಾವಿ ಕೇಸಿಂಗ್ ಪೈಪ್ ಮುಚ್ಚುವ ಮೂಲಕ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕಿದೆ.
ಬಲಿಗೆ ಕಾದಿವೆ ತೆರೆದ ಕೊಳವೆ ಬಾವಿ:
ಜಿಲ್ಲೆಯಾದ್ಯಂತ ಬಲಿ ಪಡೆಯಲೆಂದೇ ಅಲ್ಲಲ್ಲಿ ಕೊಳವೆ ಬಾವಿಗಳು ಬಾಯಿ ತೆರದು ಕುಳಿತಿವೆ. ಸರ್ಕಾರವೇ ಕೊರೆಸಿದ ಬೋರ ವೆಲ್‌ಗಳೇ
ಬಾಯ್ತೆರೆದು ಕುಳಿತಿವೆ ಎಂದರೆ ಇಲ್ಲಿನ ಆಡಳಿತ ಪರಿಸ್ಥಿತಿ ಹೇಗಿರಬೇಡ ? ಕೊಳವೆಬಾವಿಗೆ ಮಕ್ಕಳು ಬಿದ್ದು ಸುದ್ದಿಯಾದಾಗ ಜಿಲ್ಲಾಡಳಿತ ಸುತ್ತೂಲೆ ಹೊರಡಿಸಿ ಮೈಮರೆಯುತ್ತದೆ. ಅನೇಕ ಕೊಳವೆ ಬಾವಿ ಇಂದಿಗೂ ಮುಚ್ಚಿಲ್ಲ. ಜಿಲ್ಲಾಡಳಿತ, ಜಿ.ಪಂ ಸುತ್ತೂಲೆ ಹೊರಡಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸುತ್ತದೆ. ಇದರ ಪ್ರತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ತಮ್ಮ ಕೆಲಸವಾಯಿತೆಂದು ಭಾವಿಸುತ್ತದೆ. ತೆರೆದ ಕೊಳವೆ ಬಾವಿ ಮುಚ್ಚಿಸುವಂತೆ ಸೂಚಿಸುವ ಕನಿಷ್ಠ ಪ್ರಯತ್ನ ಮಾಡುತ್ತಿಲ್ಲ
ಅರಿಶಿನಕುಂಟೆ ಗ್ರಾಮದಲ್ಲಿ ವಿಫಲರಾಗಿರುವ ಕೊಳವೆ ಬಾಯಿಕೇ ಸಿಂಗ್ ಪೈಪ್ ಬಾಯ್ತರೆದಿದ್ದು ಅದನ್ನು ಮುಚ್ಚುವ ಗೋಜಿಗೆ ಗ್ರಾಪಂ ಮುಂದಾಗಿಲ್ಲ. ರಾತ್ರಿ ವೇಳೆಕತ್ತಲು ಅವರಿಸುತ್ತದೆ. ಅದೆಷ್ಟೋ ಮಂದಿ ಪಾದಚಾರಿಗಳು ಎಡವಿ ಬಿದ್ದಿರುವ ಘಟನೆ ನೆಡೆದಿದೆ. ಗ್ರಾಪಂ ಆಡಳಿತಕೂಡಲೇ ಬಾಯ್ತರೆದಕೊಳವೆ ಬಾವಿ ಮುಚ್ಚಬೇಕಿದೆ.
-ವೀರಭದ್ರಪ್ಪ, ಅರಿಶಿನಕುಂಟೆ ಗ್ರಾಮಸ್ಥ
-ಕೆ.ಎಸ್.ಮಂಜುನಾಥ್, ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.