ಭೂ ಚಕ್ರದ ಗೆಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು?
Team Udayavani, Nov 15, 2021, 6:09 PM IST
ಕುದೂರು: ಭೂಚಕ್ರ ಗೆಡ್ಡೆ ನಿಮಗೆ ಗೊತ್ತೆ ಎಂದು ಕೇಳಿದರೆ ಈ ಹೆಸರು ಕೇಳೆ ಇಲ್ಲ ಎನ್ನುವವರು ಜಾಸ್ತಿ. ಇದು ಅತ್ಯಂತ ವಿರಳವಾಗಿ ಸಿಗುವ ಗೆಡ್ಡೆ. ಬೆಟ್ಟಗುಡ್ಡಗಳ ನಡುವೆ ಸಿಗುವ ಈ ಗೆಡ್ಡೆಗೆ ಭಾರಿ ಡಿಮ್ಯಾಂಡ್ ಇದೆ. ಬೃಹತ್ ಗಾತ್ರ, ಈ ಗೆಡ್ಡೆ ಭೂಮಿಯೊಳಗೆ 10-15 ಮೀಟರ್ ಆಳದಲ್ಲಿ ಸಿಗುತ್ತದೆ.
ಔಷಧೀಯ ಗುಣ: ಬೇರಿನ ಸುತ್ತಳತೆ ಒಂದರಿಂದ ಎರಡು ಅಡಿಯ ವರೆಗೂ ಇರಲಿದೆ. ಈ ಗೆಡ್ಡೆ ಆಯುರ್ವೇದದಲ್ಲಿ ಪ್ರಾಮುಖ್ಯತೆ ಹೊಂದಿದ್ದು ಔಷಧೀಯ ಗುಣ ಒಳಗೊಂಡಿದೆ. ಇಂತಹ ಭೂಚಕ್ರ ಗೆಡ್ಡೆ ಕುದೂರಿನ ಬೀದಿ ಬದಿಯಲ್ಲಿ ವ್ಯಾಪಾರ ಜೋರು. ಜನರು ಸಹ ಆಶ್ಚರ್ಯಚಕಿತರಾಗಿ ಏನಪ್ಪ ಇದು ಅಂತ ಕೂತೂಹಲದಿಂದ ನೋಡುತ್ತಿದ್ದರು.
ಇದನ್ನೂ ಓದಿ:- ಮಳೆ, ಚಳಿಯಿಂದ ರೈತರಿಗೆ ಸಮಸ್ಯೆಗಳ ಸಾಗರ
ಮಾರಾಟಗಾರರು ಹೇಳುವ ಪ್ರಕಾರ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆ ಇದು ರಾಮ ಬಾಣ ಎನ್ನಲಾಗುತ್ತದೆ. ಹೀಗಾಗಿ ಜನರು ಭೂಚಕ್ರಗೆಡ್ಡೆ ಖರೀದಿಸಿ ತಿನ್ನುತ್ತಿದ್ದರು.
ವಿವಿಧ ಹೆಸರು: ಭೂಚಕ್ರ ಗೆಡ್ಡೆ ಗಿಡದ ವೈಜ್ಞಾನಿಕ ಹೆಸರು ಕ್ಯಾಪರೀಸ್ ಒಬ್ಲಾಂಗಿಪೋಲಿಯಾ ಅಂತ. ಭಾರತದ ಮೂಲದ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ, ಮಧುವಲ್ಲಿ, ಕನ್ನಡ ದಲ್ಲಿ ಭೂಚಕ್ರ ಗೆಡ್ಡೆ ನೀಲಸಕ್ಕರೆ ಗೆಡ್ಡೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಡೆಸರ್ಟ್ ಕ್ಯಾಪರ್ ಡೆಸರ್ಟ್ ಮೆರವಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ದೇಶ-ವಿದೇಶಗಳಲ್ಲಿ ಬಳಕೆ: ಮೂಲ ಭಾರತವಾದರೂ ಪಾಕಿಸ್ತಾನ, ಸೌದಿಅರೇಬಿಯಾ, ಆಫ್ರಿಕಾ ದೇಶಗಳಲ್ಲಿ ಈ ಗಿಡ ಕಂಡು ಬರುತ್ತದೆ. ಕುರುಚಲು ಕಾಡುಗಳ ಮಧ್ಯೆ ಕರ್ನಾಟಕದ ಪಶ್ಚಿಮ ಘಟ್ಟಗಳು ಸೇರಿದಂತೆ ಕೇರಳ ಹಾಗೂ ಮಹಾರಾಷ್ಟ್ರದ ಬೆಟ್ಟಗುಡ್ಡಗಳ ಕುರುಚಲು ಕಾಡುಗಳಲ್ಲಿ ಬೆಳೆಯುತ್ತದೆ.ಇಂತಹ ಬೂಚಕ್ರ ಗೆಡ್ಡೆ ಸಿಗುವುದು ಅಪರೂಪ.
ಬಹುಪಯೋಗ: ಬಾಯಾರಿಕೆ ನೀಗಿಸುವುದು, ಸಕ್ಕರೆ ಕಾಯಿಲೆ, ರಕ್ತದೊತ್ತಡಕ್ಕೆ ರಾಮಬಾಣ ಅಂತ ಹೇಳಲಾಗುತ್ತದೆ. ಗ್ರಾಮಗಳಲ್ಲಿ 10 ರೂ.ಗೆ 4 ಪೀಸ್ ನೀಡಿದರೇ, ನಗರದಲ್ಲಿ 10 ರೂ.ಗೆ ಒಂದು ಪೀಸ್ ಮಾರಾಟ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.