ಪಾಲನೆಯಾಗದ ಸ್ವಘೋಷಿತ ಲಾಕ್‌ಡೌನ್
Team Udayavani, Jun 25, 2020, 6:37 AM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ವರ್ತಕರು ಸಭೆ ನಡೆಸಿ ಸ್ವಯಂ ಪ್ರೇರಿತ ಲಾಕ್‌ಡೌನ್ ವಿಧಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಬುಧವಾರ ಆಭರಣ ಮಳಿಗೆ ಹೊರತು ಪಡಿಸಿ ಬಹುತೇಕ ಅಂಗಡಿಗಳು ತೆರೆದಿದ್ದವು. ವಿವಿಧ ವರ್ತಕರ ಸಂಘಗಳು ನೀಡಿದ್ದ ಲಾಕ್‌ಡೌನ್ ಕರೆಗೆ ನೀರಸ ಪ್ರತಿಕ್ರಿಯೆ ದೊರಕಿದೆ. ಕೋವಿಡ್-19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಯಲ್ಲಿ ಕನಕಪುರ ಮತ್ತು ಪಟ್ಟಣಗಳಲ್ಲಿ ಅಲ್ಲಿನ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಲಾಕ್‌ಡೌನ್ ವಿಧಿಸಿಕೊಂಡಿದ್ದು ಪಾಲಿಸುತ್ತಿದ್ದಾರೆ. ಸ್ವಯಂ ಘೋಷಿತ ಲಾಕ್‌ಡೌನ್‌ಗೆ ಕರೆ ನೀಡಿದ್ದ ವರ್ತಕರೇ ಅಂಗಡಿ ಮುಂಗಟ್ಟುಗಳನ್ನು ತೆರೆದು ವಹಿವಾಟಿನಲ್ಲಿ ತೊಡಗಿದ್ದರು.
ಕನಕಪುರ ಮತ್ತು ಮಾಗಡಿ ಯಲ್ಲಿ ವರ್ತಕರು ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲನೆ ಮಾಡುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿಯೂ ಲಾಕ್‌ಡೌನ್ ಪಾಲನೆಯಾಗುತ್ತಿದೆ. ಜಿಲ್ಲಾ ಕೇಂದ್ರದ ಪ್ರಮುಖ ವ್ಯಾಪಾರಿ ಸ್ಥಳಗಳಾದ ಮೈಸೂರು-ಬೆಂಗಳೂರು ಹೆದ್ದಾರಿ ಬದಿ, ಹಳೇ ಬಸ್ ನಿಲ್ದಾಣ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಎಂ.ಜಿ.ರಸ್ತೆ, ಕಾಯಿಸೊಪ್ಪಿನ ಬೀದಿ, ಟ್ರೂಪ್‌ಲೈನ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಬದಿಯ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಹೋಟೆಲ್‌ಗಳ ಮಾಲಿಕರು ತಾವು ಲಾಕ್ ಡೌನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.
ಕಾನೂನು ಪಾಲಿಸದ ವರ್ತಕರು: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥ ತನ್ನ ಬಳಿಗೆ ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಸ್ ಕೊಡಬೇಕು, ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡ ಬೇಕು. ಸಾಮಾಜಿಕ ಅಂತರ ಕಾಪಾಡದ ವ್ಯಾಪಾರಸ್ಥನಿಗೆ 200 ರೂ. ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ. ಸ್ಥಳೀಯ ನಗರಸಭೆ ಈ ಬಗ್ಗೆ ಚುರುಕು ಮುಟ್ಟಿಸಿದ್ದರೂ ಬಹುತೇಕ ವ್ಯಾಪಾರಿಗಳು ಈ ನಿಯಮ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸದೆ ಬರುವ ಗ್ರಾಹಕರಿಗೆ ವಸ್ತು ಮಾರುವು ದಿಲ್ಲ ಎಂಬ ಸಾಮಾಜಿಕ ಹೊಣೆಗಾರಿಕೆಯನ್ನು ಬಹುತೇಕ ವ್ಯಾಪಾರಸ್ಥರು ಪಾಲಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.