ಅವೈಜ್ಞಾನಿಕ ಎಂಟ್ರಿ-ಎಕ್ಸ್ಟಿಟ್ ಹೈವೇ!
Team Udayavani, Jun 21, 2023, 2:57 PM IST
ರಾಮನಗರ: ರಾಷ್ಟ್ರೀಯ ಹೆದ್ದಾರಿ 275ರ ಎಕ್ಸ್‌ಪ್ರೆಸ್ ಹೈವೇಯಲ್ಲಿನ ಅವೈಜ್ಞಾನಿಕ ಎಂಟ್ರಿ ಮತ್ತು ಎಕ್ಸ್ಟಿಟ್ ಗಳು ಪ್ರಯಾಣಿಕರ ಜೀವಕ್ಕೆ ಕಂಟಕವಾಗಿವೆ. ಬೆಂ-ಮೈ ದಶಪಥ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಕ್ಸೆಸ್ ಕಂಟ್ರೋಲ್ ಎಕ್ಸ್‌ಪ್ರೆಸ್ ಹೈವೇ ಎಂದು ಘೋಷಿಸಿದೆ. ಇದರ ಪ್ರಕಾರ ಇದು ಕ್ಲೋಸ್ಡ್ ಟೋಲ್ ವೇ ಆಗಬೇಕು. ಆದರೆ, ಅವೈಜ್ಞಾನಿಕವಾದ ಎಂಟ್ರಿ ಮತ್ತು ಎಕ್ಸ್ಟಿಟ್ ಗಳು ಇರುವುದು ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗಿ ಪರಿಣಮಿಸಿದೆ.
ಎಕ್ಸ್‌ಪ್ರೆಸ್ ಹೈವೇಗೆ ಪ್ರವೇಶ ಪಡೆಯಲು ಹಾಗೂ ನಿರ್ಗಮ ಮಾಡಲು ಸದ್ಯಕ್ಕೆ ತಾತ್ಕಾಲಿಕವಾಗಿ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ನೀಡಲಾಗಿದೆ. ಈ ಎಂಟ್ರಿ ಮತ್ತು ಎಕ್ಸ್ಟಿಟ್ ಗಳ ಜಾಗಗಳನ್ನು ವೈಜ್ಞಾನಿಕವಾಗಿ ಪ್ಲಾನಿಂಗ್ ಮಾಡದೆ, ಬೇಕಾಬಿಟ್ಟಿ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ನೀಡಿರುವುದು ಸಾಕಷ್ಟು ಅವ್ಯವಸ್ಥೆಗೆ ಎಡೆಮಾಡಿ ಕೊಟ್ಟಿದೆ. ಬೆಂಗಳೂರು-ಮೈಸೂರು ನಡುವೆ 6 ಪ್ರಮುಖ ನಗರಗಳು ಬರಲಿದ್ದು, ಈ ನಗರ ಗಳ ಎಂಟ್ರಿ ಮತ್ತು ಎಕ್ಸ್ಟಿಟ್ ಗೆ ಯೋಜನೆ ತಯಾರಿ ಸುವ ಆರಂಭದಲ್ಲೇ ನೀಲನಕ್ಷೆ ಸಿದ್ಧಪಡಿಸಬೇಕಿತ್ತು. ಆದರೆ, ಇದಕ್ಕೆ ಎನ್‌ಎಚ್‌ಎಐ ಗಮನ ನೀಡ ದೆ ಕೇವಲ ರಸ್ತೆಯನ್ನು ಮಾಡಿಕೊಂಡು ಹೋಗಿದ್ದು ಇದೀಗ ಎಂಟ್ರಿ ಎಕ್ಸ್ಟಿಟ್ ಸಮಸ್ಯೆ ಸೃಷ್ಟಿಸಿದೆ.
ಕಿರಿಕಿರಿ ತಂದಿಟ್ಟ ತಾತ್ಕಾಲಿಕ ಎಂಟ್ರಿ-ಎಕ್ಸ್ಟಿಟ್: ಪ್ರಸ್ತು ತ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಬೆಂಗಳೂರಿನಿಂದ ಇಲ್ಲಿಯವರೆಗೆ 6 ಕಡೆ ತಾತ್ಕಾಲಿಕ ಎಂಟ್ರಿ ಮತ್ತು ಎಕ್ಸಿ$rಟ್‌ಗಳನ್ನು ನಿರ್ಮಿಸ ಲಾಗಿದೆ. ಈ ಸ್ಥಳಗಳಲ್ಲಿ ಸರ್ವೀಸ್ ರಸ್ತೆಯನ್ನು ಅಗಲೀ ಕರಣ ಮಾಡದೆ ಇರುವ ಸರ್ವೀಸ್ ರಸ್ತೆಗೆ ಎಂಟ್ರಿ ಮತ್ತು ಎಕ್ಸ್ಟಿಟ್ ನೀಡಿರುವುದು ವಾಹನಗಳು ಎಕ್ಸ್ ಪ್ರಸ್ ವೇಗೆ ಸರಾಗವಾಗಿ ಪ್ರವೇಶ ಪಡೆಯಲು ಹಾಗೂ ಹೆದ್ದಾರಿಯಿಂದ ಸುಗಮವಾಗಿ ಸರ್ವೀ ಸ್ ರಸ್ತೆಗೆ ಬರಲು ಪರದಾಡು ವಂತಾಗಿದೆ. ಇನ್ನು ವಾಹನಗಳು ಎಲ್ಲಿ ಎಕ್ಸ್‌ಪ್ರೆಸ್ ವೇ ನಿಂದ ನಿರ್ಗ ಮಿ ಸಬೇಕು, ಎಲ್ಲಿ ಪ್ರವೇಶಿಸಬೇಕು ಎಂಬ ಸೂಚನೆಯೂ ಇಲ್ಲದ ಕಾರಣ ವಾಹನ ಸವಾರರು ಈ ಜಾಗದಲ್ಲಿ ಗೊಂದಲಕ್ಕೀಡಾಗಿ ವಾಹನ ಗಳನ್ನು ನಿಲುಗಡೆ ಮಾಡುವುದರಿಂದ ಅಪಘಾತಗಳಿಗೆ ಕಾರಣ ವಾಗಿದೆ. ಇನ್ನು ಎಂಟ್ರಿಎಕ್ಸ್ಟಿಟ್ ಗಾಗಿ ಪ್ಲಾಸ್ಟಿಕ್‌ನಿಂದ ನಿರ್ಮಿಸಿರುವ ಕಂಬಗಳಿಗೆ ವಾಹನಗಳು ಡಿಕ್ಕಿ ಹೊಡೆದು ಕಿತ್ತು ಹೋಗಿವೆ. ಇದರಿಂದ ವಾಹನಗಳು ಎಲ್ಲಿ ಎಂಟ್ರಿ ಪಡೆಯುವುದು, ಎಲ್ಲಿಎಕ್ಸ್ಟಿಟ್ ಪಡೆಯುವುದು ಎಂಬ ಜಿಜ್ಞಾಸೆಗೆ ಸಿಲುಕಿದ್ದು, ಪ್ರಯಾಣಿಕರಿಗೆ ಗೊಂದಲ ಮೂಡಿಸಿವೆ.
ಅಪಘಾತಗಳಿಗೆ ಕಾರಣ: ಇದೀಗ ಎಕ್ಸ್‌ಪ್ರೆಸ್ ಹೈವೇಗೆ ಬೇಕಾಬಿಟ್ಟಿ ಎಂಟ್ರಿ ಮತ್ತು ಎಕ್ಸ್ಟಿಟ್ ನೀಡಲಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸರಾಸರಿ 120ರಿಂದ 140 ಕಿ.ಮೀ. ನಷ್ಟು ವೇಗವಾಗಿ ಸಂಚರಿಸುತ್ತಿರುತ್ತವೆ. ಎಂಟ್ರಿ ಮತ್ತು ಎಕ್ಸ್ಟಿಟ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಇದೇ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ತಾತ್ಕಾಲಿಕ ಎಂಟ್ರಿ ಸ್ಪಾಟ್‌ನಿಂದ ಹೈವೇಗೆ ಎಂಟ್ರಿ ಪಡೆಯುವ ವಾಹನಗಳು ನಿಧಾನವಾಗಿರುತ್ತವೆ. ಹಿಂದಿನಿಂದ ಬರುವ ವಾಹನ ವೇಗವಾಗಿರುವ ಕಾರಣ ನಿಯಂತ್ರಣ ಮಾಡಲಾಗದೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಇನ್ನು ಎಂಟ್ರಿ ಮತ್ತು ಎಕ್ಸ್ಟಿಟ್ ಬಳಿ ಸಣ್ಣಪುಟ್ಟ ಹೋಟೆಲ್ ಗಳನ್ನ ಇರಿಸಿ ವ್ಯಾಪಾರ ಮಾಡಲಾಗುತ್ತಿದ್ದು, ಇದರಿಂದ ಇಲ್ಲಿ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ನಿಲುಗಡೆ ಮಾಡುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಅವೈಜ್ಞಾನಿಕ ಎಂಟ್ರಿ-ಎಕ್ಸ್ಟಿಟ್: ಹೆದ್ದಾರಿ ಸುರಕ್ಷತಾ ನಿಯಮದ ಪ್ರಕಾರ ಆಕ್ಸೆಸ್ ಕಂಟ್ರೋಲ್ ಎಕ್ಸ್‌ಪ್ರೆಸ್ ವೇಗಳಿಗೆ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ಬೇಕಾಬಿಟ್ಟಿ ನೀಡುವಂತಿಲ್ಲ. ನೇರರಾಗಿ ವಾಹನಗಳು ಎಂಟ್ರಿ ಪಡೆಯುವಂತಿಲ್ಲ. ಎಕ್ಸ್‌ಪ್ರೆಸ್ ಹೈವೇಗೆ ಪ್ರವೇಶ ಪಡೆಯುವ ಮತ್ತು ಅದರಿಂದ ನಿರ್ಗಮನ ಆಗುವ ವಾಹನಗಳಿಗಾಗಿ ವೃತ್ತಾಕಾರದ ರಸ್ತೆಯನ್ನು ನಿರ್ಮಾಣ ಮಾಡಬೇಕು. ಎಕ್ಸ್‌ಪ್ರೆಸ್ ಹೈವೇನಲ್ಲಿ ಸಂಚರಿಸುವ ವಾಹನಗಳಿಗೆ ಯಾವುದೇ ತೊಂದರೆ ಆಗದಂತೆ ಎಂಟ್ರಿ-ಎಕ್ಸ್ಟಿಟ್ ಮೂಲಕ ಹೊಸ ವಾಹನಗಳು ಹೈವೇಗೆ ಪ್ರವೇಶ ಪಡೆ ಯುವಂತೆ ಡಿಸೈನ್ ಮಾಡಬೇಕು. ಆದರೆ, ತಾತ್ಕಾಲಿನ ಎಂಟ್ರಿ-ಎಕ್ಸ್ಟಿಟ್ ನಲ್ಲಿ ಇದ್ಯಾವುದೂ ಇಲ್ಲದಿರುವುದು ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ.
ಟೋಲ್: ಪ್ರಯಾಣಿಸಿದಷ್ಟು ಮಾತ್ರ ಶುಲ್ಕ ಪಾವತಿ: ಎಂಟ್ರಿ ಮತ್ತು ಎಕ್ಸಿ$rಟ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದ ಬಳಿಕ ಕ್ಲೋಸ್ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಪ್ರತಿ ಎಂಟ್ರಿ-ಎಕ್ಸಿ$rಟ್‌ನಲ್ಲಿ ಟೋಲ್‌ಬೂತ್‌ಗಳನ್ನು ನಿರ್ಮಿಸಲಾಗುತ್ತದೆ. ವಾಹನಗಳು ಎಲ್ಲಿಂದ ಎಂಟ್ರಿ ಪಡೆಯುತ್ತವೆಯೋ, ಅಲ್ಲಿಂದ ಟೋಲ್ ಶುಲ್ಕ ಗಣನೆಗೆ ಬರುತ್ತದೆ. ಹಾಗೂ ಎಕ್ಸ್ಟಿಟ್ ನಲ್ಲಿ ಟೋಲ್ ಮೊತ್ತ ಫಾಸ್ಟ್‌ಟ್ಯಾಗ್ ಮೂಲಕ ಜಮೆಯಾಗುತ್ತದೆ. ಕ್ಲೋಸ್ ಟೋಲ್‌ಗಳನ್ನು ನಿರ್ಮಿಸುವುದರಿಂದ ಪ್ರಯಾಣಿಸಿದಷ್ಟು ದೂರಕ್ಕೆ ಮಾತ್ರ ಟೋಲ್ ಶುಲ್ಕ ಪಾವತಿಸ ಬೇಕಾಗುತ್ತದೆ. ಇದೀಗ ಚಾಲ್ತಿಯಲ್ಲಿರುವಂತೆ ಎಷ್ಟೇ ದೂರು ಪ್ರಯಾಣಿಸಿದರೂ ಒಂದೇ ಟೋಲ್ ಶುಲ್ಕ ಕಟ್ಟುವಂತಿಲ್ಲ.
ಎಂಟ್ರಿ-ಎಕ್ಸ್ಟಿಟ್ ಕಾಮಗಾರಿಗೆ ಸಿಗದ ಅನುಮೋದನೆ: ಬೆಂಗಳೂರು-ಮೈಸೂರು ನಡುವಿನ ಆಕ್ಸೆಸ್ ಕಂಟ್ರೋಲ್ ಎಕ್ಸ್‌ಪ್ರೆಸ್ ಹೈವೇಗೆ 6 ಕಡೆ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ನಿರ್ಮಿಸುವ ಮೂಲಕ, ಕ್ಲೋಸ್ಡ್ ಟೋಲ್ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 118 ಕಿ.ಮೀ. ಉದ್ದದ ರಸ್ತೆಯ ಮಾರ್ಗ ಮಧ್ಯೆ ಸಿಗುವ 6 ಪಟ್ಟಣಗಳಿಗೆ ಎಂಟ್ರಿ ಮತ್ತು ಎಕ್ಸ್ಟಿಟ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ರೌಂಡ್ ಎಲಿವೇಟರ್ ಮಾದರಿಯಲ್ಲಿ ಎಂಟ್ರಿ-ಎಕ್ಸ್ಟಿಟ್ ನಿರ್ಮಾಣಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ಈ ಸಂಬಂಧ ಭೂಸ್ವಾಧೀನಕ್ಕೆ ಅಧೀಸೂಚನೆಯನ್ನು ಹೊರಡಿಸಿದ್ದರಾದರೂ, ಇದುವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಎಂಟ್ರಿ-ಎಕ್ಸ್ಟಿಟ್ ನಿರ್ಮಾಣ ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ಹೇಳುತ್ತಿದ್ದು, ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲದ ಕಾರಣ ಎಂಟ್ರಿ-ಎಕ್ಸ್ಟಿಟ್ ಕಾಮಗಾರಿ ಆರಂಭಗೊಳ್ಳುವುದಕ್ಕೆ ಇನ್ನೆಷ್ಟು ದಿನ ಕಾಯಬೇಕು ಎಂಬ ಪ್ರಶ್ನೆ ಜನತೆಯದ್ದಾಗಿದೆ.
ಹೆದ್ದಾರಿ ಪ್ರಾಧಿಕಾರ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ಸರಿಯಾಗಿ ನೀಡಿಲ್ಲದ ಕಾರಣ ಇಲ್ಲಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇನ್ನು ಸರ್ವೀಸ್ ರಸ್ತೆ ಎಂಟ್ರಿ ಮತ್ತು ಎಕ್ಸ್ಟಿಟ್ ಬಳಿ ಕಿರಿದಾಗಿದ್ದು, ಇದು ಸಹ ಅಪಘಾತಕ್ಕೆ ಎಡೆಮಾಡಿ ಕೊಡುತ್ತದೆ. ಎಂಟ್ರಿ-ಎಕ್ಸ್ಟಿಟ್ ಎಲ್ಲಿದೆ ಎಂಬ ಮಾಹಿತಿ ಫಲಕ ಸಹ ಎಕ್ಸ್‌ಪ್ರೆಸ್ ವೇನಲ್ಲಿ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. – ಸಂತೋಷ್ , ಬೈರಾಪಟ್ಟಣ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.