ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಸಿ: ಡಾ.ದಿನೇಶ
Team Udayavani, Dec 20, 2021, 1:20 PM IST
ಮಾಗಡಿ: ಸಿರಿಧಾನ್ಯ ಮತ್ತು ನವಣೆಯನ್ನು ದಿನನಿತ್ಯ ಆಹಾರದಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯ ಗಳಿಸಬಹುದು ಎಂದು ಕೇಂದ್ರದ ವಿಜ್ಞಾನಿ ಡಾ. ದಿನೇಶ ತಿಳಿಸಿದರು.
ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸಿರಿಧಾನ್ಯ ನವಣೆ ಬೇಸಾಯ ಕ್ರಮ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತುಆಯ್ದ ರೈತರ ತಾಕುಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಕನ್ನಮಂಗಲದಲ್ಲಿ ಸಿರಿಧಾನ್ಯ ನವಣೆ ತಳಿ ಡಿಎಚ್‌ಎಫ್ಟಿ-109-3ನ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಈ ತಳಿಯ ಸುಧಾರಿತ ಬೇಸಾಯ ಕ್ರಮಗಳನ್ನು ವಿವರಿಸಿದರು.
ಮತ್ತು ನವಣೆಯನ್ನು ದಿನನಿತ್ಯ ಆಹಾರದಲ್ಲಿ ಬಳಸುವು ದರಿಂದ ಆರೋಗ್ಯವನ್ನು ಉತ್ತಮಗೊಳಿ ಸಿಕೊಳ್ಳಬಹುದು ಎಂದು ತಿಳಿಸಿದರು.
ಎಕರೆಗೆ 3 ಕೆ.ಜಿ. ಬಿತ್ತನೆ ಬೀಜ ಸಾಕು: ಈ ತಳಿಯು ಹೆಚ್ಚು ತಂಡೆಗಳನ್ನು ಹೊಂದುವ ಜೊತೆಗೆಅಧಿಕ ಇಳುವರಿಯನ್ನು ನೀಡುತ್ತದೆ. ಇತರೆ ತಳಿಗೆ ಹೋಲಿಸಿದರೆ ಈ ತಳಿಯಲ್ಲಿ ಬಿತ್ತನೆ ಬೀಜವುಕಡಿಮೆ ಪ್ರಮಾಣದಲ್ಲಿ ಎಕರೆಗೆ 3 ಕೆ.ಜಿ.ಯಷ್ಟುಬೇಕಾಗುತ್ತದೆ. ನವಣೆಯನ್ನು ಬಿತ್ತನೆ ಮಾಡುವಾಗಪ್ರತಿ 1 ಕೆ.ಜಿ. ಬಿತ್ತನೆ ಬೀಜಕ್ಕೆ 3 ಪಟ್ಟು ಮರಳನ್ನು ಮಿಶ್ರಣ ಮಾಡಿ ರಾಗಿ ಬಿತ್ತುವ ರೀತಿಯಲ್ಲಿಕೂರಿಗೆಯಲ್ಲಿ ಬಿತ್ತನೆ ಮಾಡಬೇಕು. ಪ್ರಸ್ತುತ ಹವಾಮಾನ ವೈಪರೀತ್ಯದಲ್ಲೂ ಅಂದರೆ ಅತೀವೃಷ್ಟಿ ಅಥವಾ ಅನಾ ವೃಷ್ಟಿಯಲ್ಲೂ ಸಹ ಬೆಳೆಯು ನಾಶವಾಗದೆ ಇಳುವರಿ ಪಡೆಯಬಹುದು. ಈ ತಳಿಯು 90 ದಿನಗಳ ಅವಧಿಯಲ್ಲಿಇಳುವರಿಯನ್ನು ನೀಡುವುದರಿಂದ ಅಧಿಕ ಲಾಭ ಪಡೆಯಬಹುದು. ಈ ತಳಿಗೆ ಯಾವುದೇ ರೀತಿಯ ಕೀಟ ಮತ್ತು ರೋಗ ಕಂಡುಬರುವ ಸಾಧ್ಯತೆ ಕಡಿಮೆ ಎಂದು ತಿಳಿಸಿದರು.
ನಾನಾ ಕಾಯಿಲೆಗೆ ರಾಮಬಾಣ: ಕೇಂದ್ರದ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ, ನವಣೆಯು ಪ್ರಸ್ತುತ ದಿನಗಳಲ್ಲಿ ದಿನಗಳಲ್ಲಿ ಕಂಡು ಬರುವ ಅನೇಕ ಜೀವನಶೈಲಿ ಕಾಯಿಲೆಗಳಾದ ಸಕ್ಕರೆ ಕಾಯಿಲೆ,ಹೃದಯ ಸಂಬಂಧಿ ಕಾಯಿಲೆ ಮತ್ತು ಬೊಜ್ಜು ನಿವಾರಣೆಗೆ ಸೂಕ್ತ ಆಹಾರವಾಗಿದೆ. ಮತ್ತು ಇತ್ತೀಚಿನದಿನಗಳಲ್ಲಿ ಈ ಆಹಾರಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರುಬೆಳೆದ ಕಾಳುಗಳಿಗೆ ಸಂಸ್ಕರಣೆ ಮಾಡಿ, ಗುಣಮಟ್ಟದಪ್ಯಾಕೇಜಿಂಗ್ ಮಾಡುವದು ಅವಶ್ಯಕತೆ ಇದೆ. ಹಾಗೂ ಎಫ್ಎಎಸ್‌ಎಸ್‌ಐ ಪರವಾನಿಗೆ ಅವಶ್ಯಕ ಎಂದು ತಿಳಿಸಿದರು. ನವಣೆಯಿಂದ ಅನೇಕ ಮೌಲ್ಯವರ್ಧಿತ
ಉತ್ಪನ್ನಗಳಾದ ನವಣೆ ಅಕ್ಕಿ, ಪಾಯಸ ಮಿಕ್ಸ್,ಡಯಾಬಿಟಿಸ್ ಮಿಕ್ಸ್, ಹೆಲ್ತ್ ಮಿಕ್ಸ್ ತಯಾರಿಸುವಕುರಿತು ಮಾಹಿತಿ ನೀಡಿ, ರೈತರು ಇದನ್ನುಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯ ಕ್ರಮದಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.