ಖಾಲಿ ನಿವೇಶನ: ನಿವಾಸಿಗಳಿಗೆ ತಪ್ಪದ ಗೋಳು


Team Udayavani, Nov 25, 2019, 4:30 PM IST

rn-tdy-1

ಚನ್ನಪಟ್ಟಣ: ಮುರಿದು ಬಿದ್ದಿರುವ ಕಾಂಪೌಂಡ್‌, ಕಿತ್ತುಹೋಗಿರುವ ತಂತಿಬೇಲಿ, ಪಕ್ಕದಲ್ಲೇ ತಿಪ್ಪೆಗುಂಡಿ, ಕಸದರಾಶಿ, ಸುತ್ತಲೂ ಗಿಡಗಂಟೆಗಳು, ಅಲ್ಲೇ ಹಳೆಯ ಕಟ್ಟಡದ ಅವಶೇಷ, ಮುಂದೆ ಹೋಗಲಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿರುವ ಚರಂಡಿ ನೀರು.. ಇದು ಪಾಳುಬಿದ್ದಿರುವ ಬಂಗಲೆಯ ಚಿತ್ರಣವಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಮನೆಕಟ್ಟದೆ ಹಾಗೆಯೇ ಬಿಟ್ಟಿರುವ ಖಾಲಿ ನಿವೇಶನಗಳ ಸಂಕ್ಷಿಪ್ತ ರೂಪ.

ಪಟ್ಟಣದ ಖಾಲಿ ನಿವೇಶನಗಳು ಸ್ವಚ್ಚತೆಯ ನಿರ್ವಹಣೆ ಇಲ್ಲದೇ ಕೊಳಚೆ ಪ್ರದೇಶಗಳಾಗಿ ಪರಿವರ್ತನೆ ಯಾಗಿದ್ದು, ನಿವೇಶನಗಳ ಮಾಲೀಕರ ಅಸಡ್ಡೆಯಿಂದಾಗಿ ಅದರ ಅಕ್ಕಪಕ್ಕದ ಮನೆಗಳ ನಿವಾಸಿಗಳು ನೆಮ್ಮದಿಯ ಜೀವನದಿಂದ ವಂಚಿತರಾಗಿದ್ದಾರೆ. ಪ್ರತಿಷ್ಠಿತ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದೇವೆಂದು ಖಾಲಿ ನಿವೇಶನಗಳ ಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳು ಹೆಸರಿಗೆ ಮಾತ್ರ ಹೇಳಿ ಕೊಳ್ಳಬೇಕಷ್ಟೇ. ಕೊಳಚೆ ಪ್ರದೇಶದ ವಾತಾವರಣ ಅಲ್ಲಿ ಸೃಷ್ಟಿಯಾಗಿರುವುದು ಮಾತ್ರ ಅಲ್ಲಿನ ವಾಸ್ತವ ಸಂಗತಿ.

ಖಾಲಿ ನಿವೇಶನಗಳಲ್ಲಿ ಬೆಳೆದಿರುವ ದೊಡ್ಡ ದೊಡ್ಡ ಪೊದೆಗಳು ಕಳ್ಳಕಾಕರಿಗೆ ಪ್ರಶಸ್ತ ತಾಣಗಳಾಗಿದ್ದು, ಕಳ್ಳತನಕ್ಕೆ ಯೋಜನೆ ರೂಪಿಸಲು ಸಹಾಯ ಮಾಡುವುದರ ಜತೆಗೆ ತಪ್ಪಿಸಿಕೊಳ್ಳಲು ಸಹಕಾರಿಯಾಗಿವೆ. ಪಟ್ಟಣದ ಸಾತನೂರು ರಸ್ತೆಯ ಹೌಸಿಂಗ್‌ ಬೋರ್ಡ್‌ ಕಾಲೋನಿ ಬಳಿ ಈ ಹಿಂದೆ ಈ ಪೊದೆಗಳಿಂದಾಗಿ ಹಲವು ಕಳ್ಳತನ ಪ್ರಕರಣಗಳುನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸರೀಸೃಪಗಳ ಆವಾಸ ಸ್ಥಾನ: ನಿರ್ವಹಣೆಯಿಲ್ಲದೆ ಮಿನಿ ಕಾಡಿನ ರೀತಿ ಪರಿವರ್ತನೆಯಾಗಿರುವ ಖಾಲಿ ನಿವೇಶನಗಳಲ್ಲಿ ಬೀದಿ ದನಗಳು, ಕುದುರೆಗಳು ಸ್ವಚ್ಛಂದವಾಗಿ ಆಹಾರ ಅರಸುತ್ತಾ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ

ನೀಡುತ್ತಿವೆ. ಖಾಲಿ ನಿವೇಶನಗಲ್ಲಿ ಹುಲಹಾವು, ಪೊದೆಗಳಲ್ಲಿ ಸೇರಿಕೊಂಡು ತಾವು ನೆಮ್ಮದಿಯ ಜೀವನ ನಡೆಸುತ್ತಾ ಪಕ್ಕದ ನಿವಾಸಿಗಳಿಗೆ ಆತಂಕ ತಂದೊಡ್ಡಿವೆ. ಇವುಗಳ ಜತೆಗೆ ಹೆಗ್ಗಣಗಳು ಪಕ್ಕದ ನಿವೇಶನಕ್ಕೆ ಹೊಂದಿಕೊಂಡ ಮನೆಯ ಅಡಿಪಾಯಕ್ಕೆ ಕನ್ನ ಹಾಕಿ ಶಿಸ್ತಾಗಿ ತನ್ನ ಮನೆ ನಿರ್ಮಾಣ ಮಾಡಿಕೊಂಡು ಚರಂಡಿಗೂ ಮನೆಗೂ ಆಗಾಗ ಓಡಾಡಿಕೊಂಡಿವೆ.

ಸಾಂಕ್ರಾಮಿಕ ರೋಗಗಳ ಭೀತಿ: ಖಾಲಿ ನಿವೇಶನದಲ್ಲಿ ಚರಂಡಿ ನೀರು ಹರಿಯದೆ ನಿಂತು ದುರ್ವಾಸನೆ ಬೀರುತ್ತಾ ಸುತ್ತಲಿನ ಪರಿಸರ ಹಾಳಾಗಿದ್ದು, ಇದರ ಜತೆಗೆ ಕೆಲವರು ಸುತ್ತಮುತ್ತಲ ಕಸವನ್ನು ಇಲ್ಲಿಯೇ ತಂದು ಬಿಸಾಡುತ್ತಿರುವುದರಿಂದ ಈ ಅನಧಿಕೃತ ಕಸದ ತೊಟ್ಟಿಗಳಿಂದ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ನಿವೇಶನದಲ್ಲೇ ನಿಂತು ಸೊಳ್ಳೆಗಳಿಗೆ ಪ್ರಶಸ್ತ ತಾಣಗಳಾಗಿರುವುದರಿಂದ ಪಕ್ಕದ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯ ಆತಂಕದಲ್ಲಿದ್ದಾರೆ.

ಗಮನಹರಿಸದ ನಗರಸಭೆ: ಪ್ರತಿಷ್ಟಿತ ಬಡಾವಣೆ ಗಳಲ್ಲಿರುವ ಖಾಲಿ ನಿವೇಶನ ಗಳನ್ನು ನಿರ್ವಹಣೆ ಮಾಡಿ, ಸ್ವಚ್ಚತೆ ಕಾಪಾಡುವಂತೆ ಮಾಲೀಕರಿಗೆ ನಗರ ಸಭೆ ಸೂಚನೆ ನೀಡದಿರುವುದು ಮಾಲೀಕರ ಅಸಡ್ಡೆಗೆ ಕಾರಣ ವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ತೊಂದರೆಅನುಭವಿ ಸುತ್ತಿರುವ ನಿವಾಸಿಗಳು ಆಗ್ರಹಿಸಿದ್ದಾರೆ.ತಮ್ಮ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಸ್ವಚ್ಛತೆ ಮಾಡಿ ಕೈತೊಳೆ ದುಕೊಳ್ಳುವ ಕೆಲಸ ಮಾಡದೆ ಇಡೀ ಪಟ್ಟಣವನ್ನು ನೈರ್ಮಲ್ಯವಾಗಿಡಲು ಸಹಕರಿಸಬೇಕು. ಖಾಲಿ ನಿವೇಶ ನಗಳ ಮಾಲೀಕರಿಗೆ ನೋಟಿಸ್‌ ನೀಡಿ ನಿರ್ವಹಣೆ ಮಾಡುವಂತೆ ಎಚ್ಚರಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಖಾಲಿ ನಿವೇಶನ ಹೊಂದಿರುವವರು ತಮ್ಮ ನಿವೇಶನಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆಯಾದರೂ, ಕೆಲವಡೆ ಪಾಲಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಲಾಗುವುದು. -ಶಿವನಂಕಾರಿಗೌಡ, ಪೌರಾಯುಕ್ತ ನಗರಸಭೆ.

 

-ಎಂ.ಶಿವಮಾದು

ಟಾಪ್ ನ್ಯೂಸ್

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.