ಲಕ್ಷ್ಮೀದೇವಿ ಅಮ್ಮನಿಗೆ ವಿಶೇಷ ಅಲಂಕಾರ
Team Udayavani, Aug 1, 2020, 9:26 AM IST
ಕುದೂರು: ಕೋವಿಡ್ ಸೋಂಕು ಎಲ್ಲೆಡೆ ಹೆಚ್ಚಾಗುತ್ತಿರುವ ನಡುವೆಯೇ ವರಮಹಾ ಲಕ್ಷ್ಮೀ ಹಬ್ಬವನ್ನು ಭಕ್ತರು ಸಡಗರ ಸಂಭ್ರಮ ದಿಂದ ಆಚರಿಸಿದರು. ಹೋಬಳಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ಅಮ್ಮ ನವರ ದೇವಸ್ಥಾನಕ್ಕೆ ಶುಕ್ರವಾರ ಬೆಳಗ್ಗೆ ಯಿಂದಲೇ ನೂರಾರು ಮಂದಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕುದೂರು ಮತ್ತು ಅಕ್ಕಪಕ್ಕದ ಊರುಗಳಿಂದ ನೂರಾರು ಭಕ್ತರು ಆಗಮಿಸಿದ್ದರು.ಲಕ್ಷ್ಮೀ ದೇವಿ ಅಮ್ಮನ ದೇವಾಲಯ ಸದಾ ಭಕ್ತರಿಂದ ಕೂಡಿರುತ್ತಿತ್ತು. ಕೋವಿಡ್ ಭಯದ ಹಿನ್ನೆಲೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಲು ಹಿಂದೇಟು ಹಾಕಿದರು. ದೇವಾಲಯದ ಪ್ರಧಾನ ಅರ್ಚಕರಾದ ಮಲ್ಲಣ್ಣ ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಿ ಕೊಂಡು ಮಾಸ್ಕ್, ಹಾಕಿಕೊಂಡು ಪೂಜಾ ಕಾರ್ಯಕ್ರಮದಲ್ಲಿ ತೊಡಗಬೇಕು ಎಂದು ಮನವಿ ಮಾಡಿದರು. ದೇವಾಲಯಕ್ಕೆ ಬರುವ ಭಕ್ತರಿಗೆ ಬಮೂಲ್ ನಿರ್ದೇಶಕ ಡಾ. ರಾಜಣ್ಣ ಪ್ರಸಾದ ವಿನಿಯೋಗ ಮಾಡಿದರು. ದೇವಾಲಯದ ಸಂಘದ ಅಧ್ಯಕ್ಷರಾದ ಕೆ.ಆರ್. ಯತಿರಾಜು ಮಾತನಾಡಿ, ಕೊರೊನಾ ಬರುವುದಕ್ಕೂ ಮುಂಚೆ ಹಬ್ಬ ಎಂದರೆ ಸಾಕಿತ್ತು. ದೇವಸ್ಥಾನದ ಹೊರಗೆ ಮಾರುದ್ದ ಸರದಿ ಇರುತ್ತಿತ್ತು. ಆದರೆ, ಈ ವರ್ಷ ಕೊರೊನಾ ಕರಿನೆರಳು ಬಿದ್ದಿರುವುದರಿಂದ ಭಕ್ತರ ಸಂಖ್ಯೆ ಇಳುಮುಖವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.