ಪ್ರಚಾರಕ್ಕಾಗಿಯೇ ತರಕಾರಿ ಹಂಚಿಕೆ: ಆರೋಪ
ಟಾಸ್ಕಫೋರ್ಸ್ ಸಮಿತಿ ಮುಖಂಡರಿಂದ ತರಕಾರಿ ಖರೀದಿಗಿಲ್ಲ ಕೊಡುಗೆ
Team Udayavani, May 6, 2020, 3:12 PM IST
ಸಾಂದರ್ಭಿಕ ಚಿತ್ರ
ಚನ್ನಪಟ್ಟಣ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್, ರೈತರ ತರಕಾರಿ ಖರೀದಿಸಿ ಕಷ್ಟಕ್ಕೀಡಾಗಿದ್ದ ರೈತರು, ಬಡವರು, ಕೂಲಿ ಕಾರ್ಮಿಕರಿಗೆ ನೆರವಾಗಲು ತಮ್ಮದೇ ಟಾಸ್ಕಫೋರ್ಸ್ ಸಮಿತಿ ನಿರ್ಮಿಸಿಕೊಂಡಿದ್ದರು. ಆದರೆ ಈ ಟಾಸ್ಕ ಫೋರ್ಸ್‌ಗಳಲ್ಲಿದ್ದ ಮುಖಂಡರು, ಕಾರ್ಯಕರ್ತರು ಮಾತ್ರ, ತರಕಾರಿ ಖರೀದಿ ಹಾಗೂ ಹಂಚುವ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಂಡು, ಸಮಿತಿಯ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂಬ ದೂರುಗಳು ಕೇಳಿವೆ.
ಕೆಲ ಮುಖಂಡರು, ಎಲೆಕೋಸು, ನಾಲ್ಕೈದು ಟೊಮೆಟೋ, ಮೂರ್‍ನಾಲ್ಕು ಕ್ಯಾರೆಟ್ ಹಂಚಿ, ಅದನ್ನೇ ಮಹಾದಾನ ಎಂಬಂತೆ ಮೊಬೈಲ್ ಕ್ಯಾಮೆರಾಗಳಿಗೆ ಪೋಸು ನೀಡುತ್ತಿದ್ದಾರೆ. ಜತೆಗೆ ಯಾರೋ ಖರೀದಿಸಿದ ತರಕಾರಿಗೆ ಮುಖಂಡರು ಜಾತ್ರೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ತಾಲೂಕಿನ ಮಟ್ಟಿಗೆ ಟಾಸ್ಕಫೋರ್ಸ್ ಹಾಗೂ ಜಿಪಂ ಸದಸ್ಯರು ಸೇರಿದಂತೆ ಬೆರಳೆಣಿಕೆಯಷ್ಟು, ಮುಖಂಡರು ಮಾತ್ರ ತರಕಾರಿ ಖರೀದಿಗೆ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಹಂಚಲು ಚಾಲನೆ ನೀಡುವ ಸಂದರ್ಭದಲ್ಲಿ ಮುಖಂಡು ನಾಮುಂದು ತಾಮುಂದು ಎಂಬಂತೆ ಪೋಟೋಗೆ ಮುಗಿಬೀಳುತ್ತಿದ್ದು, ಸಾಮಾಜಿಕ ಅಂತರ ಮರೆಯುತ್ತಿದ್ದಾರೆ. ಇನ್ನಾದರೂ ಮುಖಂಡು ಜವಾಬ್ದಾರಿ ಅರಿತುಕೊಳ್ಳಲಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳುತ್ತಿವೆ.
ರೈತರಿಂದ ತರಕಾರಿ ಖರೀದಿಸಿ, ಗ್ರಾಮೀಣ ಪ್ರದೇಶ ದಲ್ಲಿ ಸಂಕಷ್ಟದಲ್ಲಿರುವವರಿಗೆ ಹಂಚಲಾಗುತ್ತಿದೆ. ಮುಖಂಡರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸ ಬೇಕು. ನಿಮ್ಮ ವೈಯಕ್ತಿಕ ಕೊಡುಗೆಯೂ ಅಗತ್ಯ. ಫೋಸ್ ನೀಡುವುದರಿಂದ ಪ್ರಯೋಜನವಿಲ್ಲ.
●ಶರತ್‌ಚಂದ್ರ, ಟಾಸ್ಕಫೋರ್ಸ್ ಅಧ್ಯಕ್ಷ, ಚನ್ನಪಟ್ಟಣ ತಾ
ಜಿಲ್ಲೆ ಹಾಗೂ ಹೊರ ಜಿಲ್ಲೆ ಸೇರಿ 300 ಟನ್ ತರಕಾರಿ ಖರೀದಿಸಲಾಗಿದೆ. ಜಿಪಂ ಸದಸ್ಯರು, ಕೆಲ ಮುಖಂಡರು ಮಾತ್ರ ಅಲ್ಪ ದೇಣಿಗೆ ಕೊಟ್ಟಿದ್ದಾರೆ. ಕೆಲವರು ವಿತರಿಸುವುದನ್ನೇ ಪ್ರಚಾರಕ್ಕೆ ಬಳಸಿಕೊಂಡಿರುವುದು ಸರಿಯಲ್ಲ. ಜವಾಬ್ದಾರಿಯುತವಾಗಿ ವರ್ತಿಸಿ.
●ಎಸ್.ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.