ನಾಡಿನ ಸಂಸ್ಕೃತಿ ನಶಿಸದಂತೆ ಎಚ್ಚರ ವಹಿಸಿ
Team Udayavani, Jan 13, 2020, 5:42 PM IST
ಮಾಗಡಿ: ರಾಜಕಾರಿಣಿಗಳು, ಶಿಕ್ಷಕರು ವಿದ್ಯಾವಂತರು ಎಂದೂ ವಿವೇಕ ಕಳೆದುಕೊಳ್ಳಬಾರದು. ಯಾರೇ ತಪ್ಪು ಮಾಡಿದರೂ, ಖಂಡಿಸುವ ಗುಣ ಬೆಳಸಿ ಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆ.ದೇವೇಗೌಡ ತಿಳಿಸಿದರು.
ತಾವರೆಕೆರೆಯಲ್ಲಿನ ಜಿನ್ನಾಂಬ ಹಾಲ್‌ನಲ್ಲಿ ಎಂ.ನೀಲಯ್ಯ ಅವರ ಹಿತೈಷಿಗಳ ಸಭೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾವಂತ ವಿದ್ಯಾವಂತರು ನಾಡಿನ ಭಾಷಾ ಸಂಸ್ಕೃತಿ ನಶಿಸದಂತೆ ಎಚ್ಚರ ವಹಿಸಬೇಕು. ನಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಯ ಕಡೆ ಎಂದೂ ಮನಸ್ಸು ಮಾಡಬಾರದು. ಮನಸ್ಸು ಜಾಗೃತಿಗೊಳಿಸಿಕೊಳ್ಳುವಂತಹ ಗುರಿ ನಮ್ಮದಾಗಬೇಕು. ನಮ್ಮನ್ನು ರಕ್ಷಣೆ ಮಾಡುವ ಸೈನಿಕ ಮತ್ತು ಅನ್ನ ನೀಡುವ ರೈತರನ್ನು ಸ್ಮರಣೆ ಮಾಡಬೇಕೆಂದರು.
ಬೆಂಗಳೂರು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ, ಸಂಸ್ಕೃತಿ ಉಳಿಯಬೇಕಾದರೆ, ಕೃತಿ ಮನಸ್ಸುಗಳು ಬದಲಾಗಬೇಕು. ಜಾತಿ ಸಂಕೋಲೆಯಿಂದ ಹೊರಬರಬೇಕು. ಎಲ್ಲಾ ಧರ್ಮದ ಸಂದೇಶವೂ ಒಂದೇ ಆಗಿರುತ್ತದೆ. ಆದರೂ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಎತ್ತಿಡಿ ಯಬೇಕು ಹಾಗೂ ಸಮಾಜದ ಏಳಿಗೆಗೆ ಪ್ರಮಾಣಿಕವಾಗಿ ದುಡಿಯಬೇಕು ಎಂದು ಯುವ ಜನತೆಗೆ ಕರೆ ಕೊಟ್ಟರು. ಡಿಜಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್ ಸ್ವಾಮಿ ವಿವೇಕನಂದರ ಕುರಿತು ಉಪನ್ಯಾಸ ನೀಡಿದರು.
ಎಂಎಲ್ಸಿ ಸ್ಪರ್ಧಾಕಾಂಕ್ಷಿ ತಾ.ಸ. ನೌಕರರ ಸಂಘದ ಅಧ್ಯಕ್ಷ ಶಿವರಾ ಮಯ್ಯ, ಮುಖಂಡರಾದ ನಂದೀಶ್, ನಂದ ಶಿವಯ್ಯಂ, ಎನ್‌ಜಿಓ ಜಯ ರಾಮ, ಪ್ರೌಢಶಾಲಾ ಶಿಕ್ಷಕರ ಸಂಘದ ಮಹಾಲಿಂಗಯ್ಯ, ನರಸೇಗೌಡ, ನಿಂಗಯ್ಯ, ಚಿಕ್ಕರಯ್ಯ, ಕೆಂಪೇಗೌಡ, ಮಲ್ಲಿಕಾರ್ಜುನಯ್ಯ, ಬಿ.ಎನ್.ಚಂದ್ರ ಶೇಖರ್, ಬೋಗಣ್ಣ, ಸುರೇಶ್, ಚಂದ್ರ ಶೇಖರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.