ಮತಕ್ಕಾಗಿ ಜನರಿಗೆ ದೇಗುಲ ಸುತ್ತಿಸುವ ಆಮಿಷ


Team Udayavani, Jan 2, 2023, 10:43 AM IST

tdy-6

ರಾಮನಗರ: ವಿಧಾನಸಭೆ ಚುನಾವಣೆ ಸಮೀಪಿಸು ತ್ತಿದ್ದು, ಮತಬೇಟೆಗೆ ದೇವರ ಹೆಸರಲ್ಲೇ ರಾಜಕಾರಣ ಜೋರಾಗಿದೆ. ಜಿಲ್ಲೆಯಲ್ಲಿ ರಾಜಕಾರಣದ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ.

ಜೆಡಿಎಸ್‌ ಭದ್ರಕೋಟೆಯಾಗಿರುವ ರಾಮನಗರದಲ್ಲಿ ತನ್ನ ಪ್ರಾಬಲ್ಯ ಮೆರೆಯಲೇಬೇಕೆಂದು ಕಾಂಗ್ರೆಸ್‌ ಮತ್ತು ಬಿಜೆಪಿ ಇನ್ನಿಲ್ಲದ ತಂತ್ರ ರಣತಂತ್ರಗಳನ್ನು ರೂಪಿಸುತ್ತಿದೆ. ಅದಕ್ಕಾಗಿ ಮತದಾರರ ಓಲೈಕೆಗೆ ಮುಂದಾಗಿದ್ದು, ಜನರಿಗೆ ಯಾತ್ರಾಸ್ಥಳ ದರ್ಶನ ದೊರಕಿಸುವ ಪ್ರವಾಸ ಭಾಗ್ಯಗಳ ಆಮಿಷವೊಡ್ಡಲಾಗುತ್ತಿದೆ. ರಾಮನಗರ ಜಿಲ್ಲೆ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಎಂದರೂ ತಪ್ಪಲ್ಲ, ಇಲ್ಲಿ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸುಯೋಗ ಇದೆ. ಇಲ್ಲಿಂದ ಸ್ಪರ್ಧೆಗೆ ಡಿಮ್ಯಾಂಡ್‌ ಕೂಡ ಹೆಚ್ಚಿದೆ.

ಅಲ್ಲದೆ ರಾಜ್ಯದ ಪ್ರಭಾವಿಗಳ ತವರು ಕ್ಷೇತ್ರ ಇದಾಗಿದ್ದು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾದ ವಿಧಾನ ಸೌಧ ನಿರ್ಮಿಸಿದ ಕೆಂಗಲ್‌ ಹನುಮಂತಯ್ಯನವರು ಜಿಲ್ಲೆಯಿಂದ ಗೆದ್ದಿದ್ದ ಪ್ರಥಮ ಮುಖ್ಯಮಂತ್ರಿಗಳಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಪ್ರಧಾನಿ ಹುದ್ದೆಗೇರಿದ ದಕ್ಷಿಣ ಭಾರತದ ಏಕೈಕ ಪ್ರಧಾನಿ ಎಚ್‌.ಡಿ. ದೇವೇಗೌಡರು ಇಲ್ಲಿಯೇ ಗೆದ್ದಿದ್ದರು. ಇನ್ನು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ ಎಚ್‌ .ಡಿ.ಕುಮಾರಸ್ವಾಮಿ ಕೂಡ ಇಲ್ಲಿಂದಲೇ ಗೆದ್ದಿದ್ದರು. ಇನ್ನು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಗದ್ದುಗೆಗೇರಿ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಂಡಿರುವ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಸರ್ಕಾರವನ್ನೇ ಅಸ್ತಿರಗೊಳಿಸಿ ಬಿಜೆಪಿ ಸರ್ಕಾರದ ಉದಯಕ್ಕೆ ಕಾರಣವಾಗಿದ್ದ ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕೂಡ ಇದೇ ಜಿಲ್ಲೆಯವರು. ಈ ಮೂವರಿಗೆ ಜಿಲ್ಲೆಯಲ್ಲಿ ತಮ್ಮ ತಮ್ಮ ಪ್ರಾಬಲ್ಯ ಬೆಳೆಸಿಕೊಳ್ಳುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಕೂಡ ಇಲ್ಲದೆ.

ಯಾತ್ರಾಸ್ಥಳ ದರ್ಶನ ಕಸರತ್ತು: ಮಾಜಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಜಿಲ್ಲೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಿದ್ದು, ಇದೀಗ ಹಳೆಯದಾಯ್ತು. ಅದಕ್ಕಾಗಿ ಕೌಂಟರ್‌ ರೂಪದಲ್ಲಿ ಸದ್ದಿಲ್ಲದೆ ಸುದ್ದಿಯಾಗಿದ್ದು, ದಕ್ಷಿಣ ಅಯೋಧ್ಯೆ ಮಾದರಿಯನ್ನಾಗಿ ರಾಮದೇವರ ಬೆಟ್ಟವನ್ನು ಅಭಿವೃದ್ಧಿಗೆ ಪಣತೊಟ್ಟ ಬಿಜೆಪಿ ಹಿಂದುತ್ವ ಪ್ರತಿಪಾದನೆಯೊಂದಿಗೆ ಹಳೇ ಮೈಸೂರು ಭಾಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಶತಪ್ರಯತ್ನ ಮುಂದುವರಿಸಿದೆ. ಇನ್ನು ರಾಮಗನರ ಕ್ಷೇತ್ರದ ಜೆಡಿಎಸ್‌ ಹುರಿಯಾಳು ನಿಖಿಲ್‌ ಕುಮಾರಸ್ವಾಮಿ ಹಾಗೂ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಪ್ರಸನ್ನ.ಪಿಗೌಡ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.

ಧರ್ಮಸ್ಥಳ, ತಮಿಳುನಾಡಿನ ಓಂಶಕ್ತಿ ಸೇರಿದಂತೆ ಇತರ ದೇವಾಲಯಗಳಿಗೆ ಕಳುಹಿಸಿಕೊಡುವ ಮೂಲಕ ಮಹಿಳಾ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯ ನಡೆಯುತ್ತಿದ್ದರೆ, ಪುರುಷರಿಗೆ ಇವುಗಳ ಜೊತೆಗೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಉಚಿತವಾಗಿ ಕಳುಹಿಸಿಕೊಡುವ ಮೂಲಕ ತಮ್ಮ ತಮ್ಮ ಪರ ಮತದಾರರನ್ನು ಹಿಡಿದಿಟ್ಟುಕೊಳ್ಳು ಕಾರ್ಯ ನಡೆಯುತ್ತಿದೆ. ರಾಮನಗರದಲ್ಲಿ ಜೆಡಿಎಸ್‌ ಯಾತ್ರೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಒತ್ತು ನೀಡಿದ್ದರೆ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ತವಾಭಾಗ್ಯ ರೂಪಿಸಿ ಕಾಲ್ನಡಿಗೆ ಹೆಸರಲ್ಲಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.

ಇನ್ನು ಚುನಾವಣಾ ವರ್ಷವಾಗಿದ್ದು ಹಲವು ಕಾಮಗಾರಿಗಳಿಗೆ ಪೂಜೆ ಶಂಕುಸ್ಥಾಪನೆ ಕಾರ್ಯಕ್ರಮಗಳ ಮಹಾಪೂರವೇ ಹಮ್ಮಿಕೊಂಡಿದ್ದು ಅದರ ಜೊತೆಗೆ ಯಾತ್ರಾಸ್ಥಳ ದರ್ಶನ ಭಾಗ್ಯ ಸದ್ಯಕ್ಕೆ ಚಾಲ್ತಿಯಲ್ಲಿದೆ. ಚುನಾವಣೆ ಘೋಷಣೆ ಬಳಿಕ ಮತದಾರರನ್ನ ಸೆಳೆಯಲು ಏನೆಲ್ಲಾ ಆಸೆ ಆಮಿಷಗಳು ಬರುತ್ತವೋ ಕಾದು ನೋಡಬೇಕಿದೆ.

ಖಾಸಗಿ ಬಸ್‌ಗಳಿಗೆ ಹೆಚ್ಚಿದ ಬೇಡಿಕೆ: ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಮಿನಿ ಮತ್ತು ದೊಡ್ಡ ಬಸ್‌ಗಳಿವೆ. ಅವುಗಳ ಜತೆಗೆ 12 ಆಸನ, 24 ಆಸನದ ಲಘು ಮೊಟಾರು ವಾಹನಗಳು ಇವೆ. ರಾಜಕಾರಣಿಗಳ ಪ್ರವಾಸ ಆಯೋಜನೆ ಪರಿಪಾಠದಿಂದಾಗಿ ಈ ಬಸ್‌ ಗಳು, ಲಘು ಮೋಟಾರು ವಾಹನಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಜನವರಿ ಆರಂಭದಿಂದ ಬಹುತೇಕ ವಾಹನಗಳು ತಮಿಳುನಾಡಿನ ಓಂ ಶಕ್ತಿ ದೇವಸ್ಥಾನ, ಕೇರಳದ ಶಬರಿಮಲೆ, ಆಂಧ್ರಪ್ರದೇಶದ ತಿರುಪತಿ, ರಾಜ್ಯದ ಧರ್ಮಸ್ಥಳ ಸೇರಿ ಇನ್ನಿತರ ದೇವಸ್ಥಾನಗಳಿಗೆ ಜನರನ್ನು ಕರೆದೊಯ್ಯಲು ಬಸ್‌, ವಾಹನಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಮತದಾರರನ್ನು ದೇವರ ದರ್ಶನ ಭಾಗ್ಯದ ಹೆಸರಲ್ಲಿ ಯಾತ್ರೆಗೆ ಕಳುಹಿಸಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಸ್ವ ಸಾಮರ್ಥ್ಯ ಹಾಗೂ ತಮ್ಮ ದೂರದೃಷ್ಟಿ ಯೋಜನೆಗಳನ್ನು ಮುಂದಿಟ್ಟು ಮತಕೇಳಬೇಕು. ಆಸೆ ಆಮಿಷಗಳನ್ನು ಒಡ್ಡುವುದು ಸರಿಯಲ್ಲ. – ಶಿವಲಿಂಗಯ್ಯ ಸಮಾಜಿಕ ಕಾರ್ಯಕರ್ತ

ಈ ಹಿಂದೆ ಸ್ತ್ರೀ ಶಕ್ತಿ ಸಂಘಗಳಿಗೆ ಹಣ ನೀಡಿ ಭ್ರಷ್ಟರನ್ನಾಗಿಸಿದ್ದರು. ಇದೀಗ ದೇಗುಲಗಳ ಪ್ರವಾಸ ಹೆಸರಲ್ಲಿ ಜನರನ್ನು ಸೆಳೆಯಲಾಗುತ್ತಿದೆ. ಇದಕ್ಕೆ ಜನರು ಮರುಳಾಗಬಾರದು. ಯೋಗ್ಯ ಅಭ್ಯರ್ಥಿ ಆರಿಸಲು ಮುಂದಾಗಬೇಕು. -ಶಿವನಾಗಸ್ವಾಮಿ , ಸ್ಥಳೀಯ ನಾಗರಿಕ 

-ಎಂ.ಎಚ್‌.ಪ್ರಕಾಶ್‌ ರಾಮನಗರ

ಟಾಪ್ ನ್ಯೂಸ್

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

CM–Chennapatana

Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ

HDD–BSY

By Election: ಸಿ.ಪಿ.ಯೋಗೇಶ್ವರ್‌ ಬಾಯಿ ಮಾತಿನ ಭಗೀರಥ: ಎಚ್‌.ಡಿ.ದೇವೇಗೌಡ ವಾಗ್ದಾಳಿ

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.