ಸರ್ಕಾರ Vs ಕಾಂಗ್ರೆಸ್: ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ ಎಂದ ಡಿ ಕೆ ಸುರೇಶ್
Team Udayavani, Jan 13, 2022, 9:54 AM IST
ರಾಮನಗರ: ಮೇಕೆದಾಟು ಪಾದಯಾತ್ರೆಯನ್ನು ತಡೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಕಾಂಗ್ರೆಸ್ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ರಾಜ್ಯ ಸರ್ಕಾರ ಯಾತ್ರೆಗೆ ನಿರ್ಬಂಧ ಹೇರಿದೆ. ಈ ಸಂಬಂಧ ಬುಧವಾರ ರಾತ್ರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಪಾದಯಾತ್ರೆಯಲ್ಲಿ ವಾಹನ ಸಂಚಾರ ಹಾಗೂ ಜನರು ಪಾಲ್ಗೊಳ್ಳುವುದನ್ನು ತತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಇಂದು ರಾಮನಗರ ಜಿಲ್ಲಾ ಕೇಂದ್ರದಿಂದ ಪಾದಯಾತ್ರೆ ಆರಂಭವಾಗಬೇಕಿದೆ. ರಾಮನಗರ ಜಿಲ್ಲಾಧಿಕಾರಿಯವರು ಪಾದಯಾತ್ರೆ ಮಾಡದಂತೆ ನೋಟಿಸ್ ಕಳುಹಿಸಿದ್ದು, ಕನಕಪುರದ ಡಿ ಕೆ ಶಿವಕುಮಾರ ನಿವಾಸಕ್ಕೆ ಬುಧವಾರ ತಡರಾತ್ರಿ ಅಂಟಿಸಲಾಗಿದೆ. ಆದರೆ ಈ ನೋಟಿಸನ್ನು ಹರಿದುಹಾಕಲಾಗಿದೆ ಎಂದು ವರದಿಯಾಗಿದೆ.
ಪಾದಯಾತ್ರೆ ಮುಂದುವರಿಯಲಿದೆ: ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ ಕೆ ಸುರೇಶ್, “ಯೋಜನೆಯಂತೆ ಪಾದಯಾತ್ರೆ ಮುಂದುವರಿಯಲಿದೆ. ಯಾವ ಕಾರಣಕ್ಕೂ ಪಾದಯಾತ್ರೆ ಸ್ಥಗಿತ ಮಾಡುವುದಿಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ:ಇನ್ನೂ ಪಾದಯಾತ್ರೆ ತಡೆಯದಿದ್ದರೆ ನಮ್ಮ ಸರ್ಕಾರ ದುರ್ಬಲವೆಂದು ಭಾವಿಸಬೇಕಾಗುತ್ತದೆ: ಯೋಗೇಶ್ವರ
ರಾಮನಗರದಲ್ಲಿ ಭಾರೀ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿದೆ. ಬುಧವಾರ ಸಂಜೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅನ್ಯ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆಯಲಾಗಿದೆ ಎಂದು ವರದಿ ತಿಳಿಸಿದೆ.
ಐತಿಹಾಸಿಕ #MekedatuPadayatre ಯ 5ನೇ ದಿನವಾದ ಇಂದು ರಾಮನಗರದಿಂದ 15 ಕಿ.ಮೀ ಬಿಡದಿಗೆ ಬಂದು ತಲುಪಲಿದೆ.
ಇಲ್ಲಿಯವರೆಗೆ ಪಾದಯಾತ್ರೆ ಕ್ರಮಿಸಿದ ಅಷ್ಟೂ ಊರುಗಳಲ್ಲಿ ಪ್ರತಿಯೊಬ್ಬರೂ ಯೋಜನೆ ಮತ್ತು ಪಾದಯಾತ್ರೆ ಪರವಾಗಿ ನಮಗೆ ಆಶೀರ್ವದಿಸಿದ್ದಾರೆ. ಪ್ರತಿ ದಿನಕ್ಕೂ ಜನಬೆಂಬಲ ಹೆಚ್ಚುತ್ತಿದೆ. ಯೋಜನೆ ಅನುಷ್ಠಾನಕ್ಕೆ ದನಿಗೂಡಿಸುತ್ತಿದ್ದಾರೆ. pic.twitter.com/DfP0EX9OEn
— DK Suresh (@DKSureshINC) January 13, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ
Kadaba: ಬಿಳಿನೆಲೆ ಸಂದೀಪ್ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ
Mangaluru: ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ನಿಧನ
Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ
Kundapura: ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.