ಕಾಡಾನೆ ದಾಳಿಗೆ ನಲುಗಿದ ರೈತರು
ಕೈಲಾಂಚ ಹೋಬಳಿಯ ತೆಂಗಿನ ಕಲ್ಲು ಗ್ರಾಮದಲ್ಲಿ ಸುಮಾರು 8 ಆನೆಗಳ ಹಿಂಡಿನಿಂದ ದಾಳಿ !
Team Udayavani, May 14, 2021, 1:50 PM IST
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಆನೆ ದಾಳಿಗೆ ರೈತರು ಹೈರಾಣಾಗಿದ್ದಾರೆ. ಕೈಲಾಂಚ ಹೋಬಳಿಯ ತೆಂಗಿನ ಕಲ್ಲು ಗ್ರಾಮದಲ್ಲಿ ಸುಮಾರು 8 ಆನೆಗಳ ಹಿಂಡು ಬುಧವಾರ ರಾತ್ರಿ ದಾಳಿ ನಡೆಸಿ ಮಾವು, ತೆಂಗಿನಮರಗಳನ್ನು ನಾಶ ಮಾಡಿವೆ.
ಕಟಾವಿಗೆ ಬಂದಿದ್ದ ಮಾವಿನ ಫಸಲು ನಾಶವಾಗಿದೆ. ಕಾವೇರಿ ವನ್ಯ ಜೀವಿಧಾಮದಿಂದ ಕನಕಪುರದ ಕಬ್ಟಾಳು ಅರಣ್ಯದ ಮೂಲಕ ಆಗಮಿಸಿ ರುವ ಆನೆಗಳ ಹಿಂಡು ಕಳೆದೊಂದು ತಿಂಗಳಿನಿಂದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಪದೇ ಪದೆ ಆನೆಗಳ ಹಿಂಡು ಸುತ್ತ ಮುತ್ತಲ ಗ್ರಾಮಗಳಲ್ಲಿ ದಾಳಿ ನಡೆಸಿ ರೈತರ ಫಸಲನ್ನು ನಾಶ ಮಾಡುತ್ತಿವೆ ಎಂಬ ದೂರುಗಳು ವ್ಯಕ್ತವಾಗುತ್ತಿವೆ. ಆಹಾರ ಅರಸಿ ಬಂದ ಆನೆಗಳು ಬುಧವಾರ ರಾತ್ರಿ ಮತ್ತೆ ತೋಟಗಳ ಮೇಲೆ ದಾಳಿ ಮಾಡಿವೆ.
ಪುಟ್ಟ ಸ್ವಾಮಿ ಅವರ 8 ಮಾವಿನ ಮರ, ವೆಂಕಟೇಶ್ ಎಂಬುವರಿಗೆ ಸೇರಿದ 7 ಮಾವಿನ ಮರ, ಕರಿ ತಿಮ್ಮಣ್ಣ ಎಂಬುವರಿಗೆ ಸೇರಿದ 6 ಮಾವಿನ ಮರಗಳಿಗೆ ಹಾನಿಯಾಗಿದ್ದು ಮಾವಿನ ಫಸಲು ಕೈತಪ್ಪಿದೆ. ಬಾದಾಮಿ, ರಸಪೂರಿ ಮಾವಿನ ಹಣ್ಣುಗಳು ಕಟಾವಿಗೆ ಬಂದಿತ್ತು. ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎಂಬಂತಾಗಿದೆ ಎಂದು ಈ ರೈತರು ಅಳಲು ತೋಡಿಕೊಂಡಿದ್ದಾರೆ. ಕರಿ ತಿಮ್ಮಣ್ಣ ಎಂಬು ವರ ತೋಟ ದಲ್ಲಿ ಆನೆಗಳು 5 ತೆಂಗಿನ ಮರಗಳನ್ನು ನೆಲಸಮ ಮಾಡಿವೆ.
ಹೊಸ ದೊಡ್ಡಿ ಗ್ರಾಮದಲ್ಲೂ ಇದೇ ಕಥೆ: ಕೈಲಾಂಚ ಹೋಬ ಳಿಯ ಹೊಸ ದೊಡ್ಡಿ ಗ್ರಾಮ ¨ಲ್ಲಿ ಯೂ ಇದೇ ಕಥೆ. ಕಳೆದ ಸೋಮ ವಾರ ರಾತ್ರಿ ಬಹುಶಃ ಇದೇ ಆನೆ ಗಳ ಹಿಂಡು ಯೋಗೇಶ್ ಎಂಬ ರೈತ ರಿಗೆ ಸೇರಿದ 25 ಮಾವಿನ ಮರಗಳು, ಕಾಡೇಗೌಡ ಎಂಬು ವ ರಿಗೆ ಸೇರಿದ 8 ಮಾವಿನ ಮರ ಗಳು, ನೀರಾವರಿ ಪರಿಕರಗಳು, ಚಂದ್ರೇ ಗೌಡರ 12 ಮಾವಿನ ಮರ ಗಳು, ಲೋಕೇಶ್ ಅವರಿಗೆ ಸೇರಿದ 5 ತೆಂಗಿನ ಮರ, ರಾಜು ಎಂಬು ವ ರಿಗೆ ಸೇರಿದ 6 ಮಾವಿನ ಮರ ಗಳು, ವಿಷಕಂಟ ಅವರ 12 ಮಾವಿನ ಮರಗಳು ಆನೆ ದಾಳಿಗೆ ನಾಶವಾ ಗಿವೆ. ಇದರೊಟ್ಟಿಗೆ ಮಾವಿನ ಫಸಲು ಸಹ ಕೈತಪ್ಪಿದಂತಾಗಿದೆ.
ತೆಂಗಿನ ಕಲ್ಲು ಅರಣ್ಯಕ್ಕೆ ಆನೆ ಬರುವುದನ್ನು ತಡೆಯಿರಿ:
ಆನೆ ದಾಳಿಯಿಂದ ಹೈರಾಣಾಗಿರುವ ತೆಂಗಿನ ಕಲ್ಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಸ್ಥರು ಮತ್ತು ರೈತರು ತೆಂಗಿನ ಕಲ್ಲು ಅರಣ್ಯ ಪ್ರದೇ ಶಕ್ಕೆ ಆನೆ ಬರುವುದನ್ನು ತಡೆಯಿರಿ ಎಂದು ಅರಣ್ಯ ಇಲಾಖೆಗೆ ಪದೇ ಪದೆ ಮನವಿ ಮಾಡಿದರು ಉಪಯೋಗವಾಗಿಲ್ಲ ಎಂದು ದೂರಿದ್ದಾರೆ. ತಮಗಾಗಿರುವ ನಷ್ಟ ವನ್ನು ವೈಜ್ಞಾನಿಕವಾಗಿ ಅಂದಾಜಿಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಭೇಟಿ ಪರಿಶೀಲನೆ: ತೆಂಗಿನ ಕಲ್ಲು ಗ್ರಾಮ ಮತ್ತು ಹೊಸ ದೊಡ್ಡಿ ಗ್ರಾಮಗಳಲ್ಲಿ ಆನೆ ದಾಳಿ ಪ್ರಕರಣಗಳನ್ನು ಚನ್ನಪಟ್ಟಣ ಉಪವಲಯ ಅರಣ್ಯಾಧಿಕಾರಿಗಳಾದ ಶಿವಶಂಕರ್, ಮಧು ಕುಮಾರ್, ಅರಣ್ಯ ರಕ್ಷಕರಾದ ಪುಟ್ಟ ಸ್ವಾಮಿ, ವೆಂಕಟ ಸ್ವಾಮಿ ಮತ್ತಿತರರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಮಾವಿನ ಹಣ್ಣುಗಳ ರುಚಿ ಸವಿದಿರುವ ಆನೆಗಳು ಮತ್ತೆ ಮತ್ತೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ರೈತರು ಅರಣ್ಯ ಅಧಿಕಾರಿಗಳ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಹೀಗಾಗಿ ಇಲಾಖೆ ತಕ್ಷಣ ಕ್ರಮ ವಹಿಸಿ ಆನೆ ದಾಳಿಯನ್ನು ತಡೆಯ ಬೇಕು ಎಂದು ಮನವಿ ಮಾಡಿ ಕೊಂಡಿ ದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.