ಶಾಸಕ ಬಾಲಕೃಷ್ಣ ಧಮ್ಕಿಗೆ ಸರ್ಕಲ್ ಇನ್ಸ್ ಪೆಕ್ಟರ್ ಹೇಳಿದ್ದೇನು ಗೊತ್ತಾ
Team Udayavani, Jan 19, 2017, 3:16 PM IST
ರಾಮನಗರ:ಇತ್ತೀಚೆಗಷ್ಟೇ ತುರುವೇಕರೆ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಮಹಿಳೆಗೆ, ಜನಪ್ರತಿನಿಧಿಗಳಿಗೆ ಅವಾಚ್ಯವಾಗಿ ಬೈದಿರುವ ವಿಡಿಯೋ ವೈರಲ್ ಆಗಿತ್ತು, ಬಳಿಕ ಕುಡುಚಿ ಶಾಸಕ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿದ್ದ ಘಟನೆ ನಡೆದಿತ್ತು, ಇದೀಗ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಸೇರ್ಪಡೆಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಹೊಡೆಯುವುದಾಗಿ ಬಹಿರಂಗವಾಗಿ ಹೇಳಿ ಧಮ್ಕಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
ಮಾಗಡಿಯ ಅಯ್ಯಂಡಳ್ಳಿ ಗ್ರಾಮದಲ್ಲಿ ದೇವರ ಉತ್ಸವದ ವೇಳೆ ಹೂವಿನ ಹಾರ ಹಾಕುವ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಆದ್ರೆ ಎಫ್‍ಐಆರ್ ದಾಖಲಾದ್ರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂಬುದು ಬಾಲಕೃಷ್ಣ ಆರೋಪ.
ಈ ಆಕ್ರೋಶದಲ್ಲೇ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದ ಶಾಸಕ ಬಾಲಕೃಷ್ಣ ಅವರು ಸಿಪಿಐ ನಂದೀಶ್ ಅವರಿಗೆ ನೇರಾ ನೇರಾ ಧಮ್ಕಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ. ಈ ರೀತಿ ಧಮ್ಕಿ ಹಾಕುತ್ತಿದ್ದಾಗಲೇ ನಂದೀಶ್ ಅವರು ಕೂಡಾ ನಾವೇನು ಬಳೆ ತೊಡ್ಕೊಂಡಿಲ್ಲ, ನಾವು ಗಂಡಸರೇ ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಶಾಸಕ ಬಾಲಕೃಷ್ಣ ಹೇಳೋದೇನು?
ಒಂದು ವೇಳೆ ಪೊಲೀಸ್ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೆ ಹೋದರೆ ಸೋಮವಾರ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಅವತ್ತು ನಾವು ಜೀವನದ ಹಂಗು ತೊರೆದು ಸ್ಟೇಶನ್ ಗೆ ಮುತ್ತಿಗೆ ಹಾಕ್ತಿವೋ, ಸಬ್ ಇನ್ಸ್ ಪೆಕ್ಟರ್ ಗೆ ಹೊಡಿತೀವೊ, ಸರ್ಕಲ್ ಇನ್ಸ್ ಪೆಕ್ಟರ್ ಗೆ ಹೊಡಿತೀವೊ ಗೊತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.