Land dispute: ಭೂವಿವಾದಕ್ಕೆ ಪರಿಹಾರ ಕಲ್ಪಿಸಲಿದೆಯಾ ರೀ ಸರ್ವೆ


Team Udayavani, Nov 18, 2023, 5:04 PM IST

TDY-17

ರಾಮನಗರ: ನಿಮ್ಮ ಜಮೀನಿನ ದಾಖಲೆಗಳಿದ್ದರೂ ಭೂಮಿ ಎಲ್ಲಿದೆ ಎಂದು ಗುರುತಿಸಲು ಗೊಂದಲವಾಗುತ್ತಿದೆಯೇ..? ನಿಮ್ಮ ಜಮೀನು ಒತ್ತುವರಿ ಯಾಗಿದ್ದು ಅಳತೆ ಮಾಡಿಸಿದರೂ ಸರಿಯಾದ ಭೂಮಾಪನ ಆಗಿಲ್ಲ ಎಂಬ ಅನುಮಾನ ವಿದೆಯೇ..? ಭೂಮಾಪನ ಪ್ರಕ್ರಿಯೆಗಾಗಿ ವರ್ಷಾನು ಗಟ್ಟಲೆ ಅಲೆದಾಡುವಂತಾ ಗಿದೆಯೇ..? ಕೆರೆ ಕಟ್ಟೆ, ಅರಣ್ಯ ಭೂಮಿ ಗಳು ಒತ್ತುವರಿಯಾಗಿದೆಯಾ..? ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮುಂದಾಗಿರುವ ರಾಜ್ಯ ಭೂಮಾಪನ ಇಲಾಖೆ ಇದೀಗ ನಾಡಿನ ಭೂಮಿಗಳನ್ನು ಮರು ಸರ್ವೆ ಮಾಡಲು ಮುಂದಾಗಿದೆ.

ಹೌದು.., ಕನಕಪುರ ತಾಲೂಕಿನಲ್ಲಿ ಜಿಪಿಎಸ್‌ ಆಧಾ ರಿತ ರೋವರ್‌ ಸಹಾಯದಿಂದ ಭೂಮಾ ಪನ ಇಲಾಖೆ ಮರು ಭೂಮಾಪನ ಕಾರ್ಯಕ್ಕೆ ಮುಂದಾ ಗಿದೆ. ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬ ಳಿಯ 35 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಮರು ಸರ್ವೆ ಕಾರ್ಯವನ್ನು ಕೈಗೊಂಡಿದ್ದು, ಇದು ಯಶಸ್ವಿ ಯಾದಲ್ಲಿ ಇಡೀ ರಾಜ್ಯದಲ್ಲಿ ಮರುಸರ್ವೆ ಕಾರ್ಯ ನಡೆಸಿ ಭೂಮಾ ಪನಕ್ಕೆ ಸಂಬಂಧಿಸಿದಂತೆ ಇವರ ವಿವಾದಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಚಿಂತನೆ ನಡೆಸಿದೆ.

ಡ್ರೋಣ್‌ ಸರ್ವೆ ಮುಂದುವರೆದ ಭಾಗ: 2018ರಲ್ಲಿ ಜಿಯೋರೆಫರೆನ್ಸ್‌ ಸರ್ವೆ ಕಾರ್ಯಕ್ಕೆ ರಾಮನಗರದಲ್ಲಿ ಚಾಲನೆ ನೀಡಲಾಗಿತ್ತು. ಮೊದಲ ಹಂತವಾಗಿ ರಾಮನಗರ, ತುಮಕೂರು, ಹಾಸನ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಡ್ರೋನ್‌ ಮೂಲಕ ಭೂಮಿಯ ಸರ್ವೇಕಾರ್ಯವನ್ನು ಆರಂಭಿಸಲಾಗಿತ್ತು. ಸದ್ಯಕ್ಕೆ 13 ಜಿಲ್ಲೆಗಳಲ್ಲಿ ಈ ಕಾರ್ಯ ಪ್ರಗತಿಯಲ್ಲಿದೆ. ಡ್ರೋನ್‌ ಸರ್ವೆ ವೇಳೆ ಜಿಯೋರೆಫರೆನ್ಸ್‌ ಆಧಾರದ ಮೇಲೆ ಪ್ರತಿ ಕಿಮೀ ಗೆ 4 ಸಾವಿರದಷ್ಟು ಪೋಟೋ ಗಳನ್ನು ಡ್ರೋನ್‌ ಕ್ಯಾಮೆರಾಗಳಿಂದ ತೆಗೆದಿದ್ದು ಸರ್ವೆ ಆಫ್‌ ಇಂಡಿಯಾ ಈ ಚಿತ್ರಗಳನ್ನು ಈಗಾಗಲೇ ಸಿದ್ಧಪಡಿಸಿ ಕರ್ನಾಟಕ ದೂರಸಂವೇದಿ ಇಲಾಖೆಗೆ ನೀಡಿದ್ದಾರೆ. ಈ ಚಿತ್ರಗಳನ್ನು ಆದರಿಸಿಕೊಂಡು ಭೂಮಾಪನ ಇಲಾಖೆ ರೋವರ್‌ ಆಧಾರಿತ ಸರ್ವೆಯನ್ನು ಕೈಗೊಂಡಿದೆ.

ಏನಿದು ರೋವರ್‌ ಸರ್ವೆ: ಭೂಮಾನ ಇಲಾಖೆ ಜಿಪಿಎಸ್‌ ಆಧಾರಿತ ರೋವರ್‌ ಯಂತ್ರವನ್ನು ಗ್ರಾಮ ಗಳಲ್ಲಿ ಹಾರಿಸುವ ಮೂಲಕ ಭೂಮಿಯ ಭೂಮಾಪನ ಕಾರ್ಯವನ್ನು ನಡೆಸುತ್ತದೆ. ಸರ್ವೆ ಇಲಾಖೆಯ ರೋವರ್‌ ಪ್ರತಿ ಭೂಮಿಯ ನಾಲ್ಕು ಗಡಿಗಳನ್ನು ಗುರುತಿಸಿ ಭೂಮಾಪನ ಕಾರ್ಯವನ್ನು ಮಾಡಲಿದೆ. ಹೀಗೆ ಭೂಮಾಪನ ಮಾಡುವುದರಿಂದ ಭೂಮಿಯ ನಿಖರವಾದ ಅಳತೆ ತಿಳಿಯಲಿದ್ದು, ಯಾವುದೇ ವ್ಯತ್ಯಾಸಗಳಿದ್ದರೂ ಪತ್ತೆಹಚ್ಚಲು ಸಹಕಾರಿಯಾಗಲಿದೆ. ಇದರಿಂದಾಗಿ ಅನಗತ್ಯ ಗೊಂದಲಗಳಿಗೆ ತೆರೆ ಬೀಳಲಿದೆ. ಇನ್ನು ರೋವರ್‌ನಿಂದ ನಡೆಸುವ ಸರ್ವೆ ಅತ್ಯಂತ ನಿಖರವಾಗಿದ್ದು, 2ಸೆಂ.ಮೀ ನಷ್ಟು ವ್ಯತ್ಯಾಸದಲ್ಲಿ ಭೂಮಾಪನ ಮಾಡಲಿದೆ. ಒಂದು ಸರ್ವೆ ಹಲವು ಸಮಸ್ಯೆಗಳಿಗೆ ಪರಿಹಾರ: ಮರು ಭೂಮಾಪನದಿಂದಾಗಿ ಭೂಮಿಯ ಪೋಡಿ ಬಾಕಿ ಉಳಿದಿದ್ದರೆ, ಭೂಮಿ ಒತ್ತುವರಿಯಾಗಿದ್ದರೆ, ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ, ಪಿ ನಂಬರ್‌ ದುರಸ್ತಿ, ಬಗರ್‌ಹುಕುಂ ಭೂಮಿ ಮಂಜೂರಾತಿ ಸಮಸ್ಯೆ, ಜಂಟಿ ಇರುವ ಭೂಮಿಯನ್ನು ವಿಭಾಗ ಮಾಡುವುದು ಹೀಗೆ ಭೂಮಾಪನಕ್ಕೆ ಸಂಬಂಧಿಸಿದಂತೆ ಹಲವರು ವರ್ಷಗಳಿಂದ ಬಾಕಿ ಉಳಿದಿರುವ ಸಾಕಷ್ಟು ಸಮಸ್ಯೆಗಳಿಗೆ ಈ ರೀ ಸರ್ವೆ ಪರಿಹಾರ ಕಲ್ಪಿಸಲಿದೆ.

ಕಡಿಮೆ ಸಿಬ್ಬಂದಿ ಹೆಚ್ಚು ಕೆಲಸ: ಮರು ಭೂಮಾಪನ ಸಂಪೂರ್ಣ ಜಿಪಿಎಸ್‌ ಆಧಾರಿತ ಯಂತ್ರಗಳಿಂದ ನಡೆ ಯುತ್ತಿರುವ ಕಾರಣ, ಕೆಲವೇಕೆಲವು ಸಿಬ್ಬಂದಿ ಕಡಿಮೆ ಅವಧಿಯಲ್ಲಿ ಇಡೀ ಭೂಮಿಯನ್ನು ಅಳತೆ ಮಾಡಲು ಸಾಧ್ಯ ವಾಗುತ್ತದೆ. ಹಳೆಯ ಪದ್ಧತಿಯಂತೆ ಚೈನ್‌ ಹಿಡಿದು ಸರ್ವೆ ಮಾಡಿದ್ದೇ ಆದಲ್ಲಿ ಹತ್ತಾರು ವರ್ಷ ಗಳು ಬೇಕಿದ್ದು, ರೋವರ್‌ ಮತ್ತು ಡ್ರೋನ್‌ ಬಳಸಿ ಸರ್ವೆ ಮಾಡಿಸಿದಲ್ಲಿ ಕಡಿಮೆ ಅವಧಿಯಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಬಹುದಾಗಿದೆ. ಇನ್ನು ಇದಕ್ಕೆ ಹೆಚ್ಚು ಸಿಬ್ಬಂದಿಯ ಅಗತ್ಯತೆಯೂ ಇರುವುದಿಲ್ಲ.

ಸಮಗ್ರ ದಾಖಲೆಯೊಳಗೊಂಡ ಪಹಣಿ: ಭೂಮಿಯ ಮರು ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ರೈತರಿಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಪಹಣಿಯನ್ನು ಕಂದಾಯ ಇಲಾಖೆ ವಿತರಣೆ ಮಾಡಲಿದ್ದು, ನೂತನ ಪಹಣಿಯಲ್ಲಿ ಕೇವಲ ಭೂಮಿಯ ವಿಸ್ತೀರ್ಣ, ಬೆಳೆ, ಭೂಮಾಲೀಕತ್ವದ ವಿವರ, ಹಕ್ಕುಬಾಧ್ಯತೆಗಳಿಗಷ್ಟೇ ಸೀಮಿತ ವಾಗಿರದೆ, 11ಇ ನಕ್ಷೆ, ಟಿಪ್ಪಣಿಕಾಪಿ, ಅಟ್ಲಾಸ್‌ ಕಾಪಿ, ಆಕಾರ್‌ ಬಂದ್‌ಗಳು ಪಹಣಿಯೊಂದಿಗೆ ಲಭ್ಯ ವಾಗಲಿದ್ದು ಸಮಗ್ರ ಭೂದಾಖಲೆ ಆನ್‌ಲೈನ್‌ನಲ್ಲಿ ತಕ್ಷಣ ದೊರೆಯುವಂತಾಗುತ್ತದೆ. ಇನ್ನು 1858ರಲ್ಲಿ ರಾಜ್ಯದ ಭೂದಾಖಲೆಗಳನ್ನು ಸಿದ್ಧಪಡಿಸಿದ್ದು, ಕೆಲ ಭಾಗದಲ್ಲಿ ಆಕಾರ್‌ಬಂದ್‌ ಮತ್ತು ಟಿಪ್ಪಣಿ ಕಾಪಿ ಗಳಲ್ಲಿ ಹಳೆಯ ಮರಾರಿ ಭಾಷೆ ಮತ್ತು ಅಂಕಿಗಳು ಇದ್ದು ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದೆ. ರೀ ಸರ್ವೆಯಿಂದಾಗಿ ಈ ಗೊಂದಲವನ್ನು ಪರಿಹರಿಸಬಹುದಾಗಿದೆ.

100 ವರ್ಷಗಳಿಂದ ಮರುಸರ್ವೆಯೇ ನಡೆದಿಲ್ಲ : ಪ್ರತಿ 30 ವರ್ಷಗಳಿಗೊಮ್ಮೆ ಮರು ಸರ್ವೆ ನಡೆಯಬೇಕು ಎಂದು ಕಂದಾಯ ಇಲಾಖೆಯ ನಿಯಮವಿದೆ ಯಾದರೂ ಹಲವು ಕಾರಣಗಳಿಂದ ಇದು ಸಾಧ್ಯವಾಗಿಲ್ಲ. 1920ರಲ್ಲಿ ಎಲ್ಲಾ ಭೂಮಿಗಳ ಸರ್ವೆ ಕಾರ್ಯ ನಡೆದಿದ್ದು, 1928 ರಿಂದ 40ರವರೆಗೆ ಹಿಸ್ಸಾ ಸರ್ವೆ, 1959ರಿಂದ 65ರವರೆಗೆ ಮರು ವರ್ಗೀಕರಣ ಸರ್ವೆ ನಡೆದಿದ್ದು, ಇಂದಿಗೂ ಎಲ್ಲಾ ನಕಾಶೆಗಳಲ್ಲಿ ಈ ಸರ್ವೆಯ ಆಧಾರದ ಮೇಲೆ ಭೂಮಿಯನ್ನು ಗುರುತಿಸ ಲಾಗುತ್ತಿದೆ. 103 ವರ್ಷಗಳ ಬಳಿಕ ಮೊದಲ ಬಾರಿಗೆ ಜಿಪಿಎಸ್‌ ಆಧಾರಿತ ಯಂತ್ರಗಳ ಸಹಾಯದೊಂದಿಗೆ ಸಮಗ್ರ ಸರ್ವೆ ಕಾರ್ಯ ಆರಂಭಿಸಲಾಗಿದೆ. ಮಾನವ ಸಂಪನ್ಮೂಲವನ್ನು ಬಳಸಿ ಹಳೆಯ ವಿಧಾನದಲ್ಲಿ ಅಳತೆ ಮಾಡಿದರೆ ಸುಮಾರು 10 ವರ್ಷಗಳ ಕಾಲ ಬೇಕಾಗುವ ಸರ್ವೆ ಕಾರ್ಯ ವನ್ನು ಡ್ರೋನ್‌ ಮತ್ತು ರೋವರ್‌ ಮೂಲಕ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ ಎಂಬುದು ಭೂಮಾಪನ ಇಲಾಖೆ ನಂಬಿಕೆ.

ನಮ್ಮ ಸರ್ವೆ ದಾಖಲೆಗಳು ನೂರು ವರ್ಷದಷ್ಟು ಅಳೆಯದಾಗಿದ್ದು, ಅಂದಿಗೂ ಇಂದಿಗೂ ಭೂಮಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಕೆಲ ಕೃಷಿ ಭೂಮಿಗಳು ಜನವಸತಿ ಪ್ರದೇಶ ಗಳಾಗಿ ಪರಿ ವರ್ತನೆಗೊಂಡಿರುವುದು ಸೇರಿದಂತೆ ಸಾಕಷ್ಟು ಬದಲಾವಣೆಗಳಾಗಿವೆ. ಸರ್ಕಾರಿ ದಾಖಲೆಗಳಲ್ಲಿ ಭೂಮಿಯ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವ್ಯತ್ಯಾಸಗಳಿವೆ. ಇದರಿಂದಾಗಿ ರೈತರು ತಮ್ಮದಲ್ಲದ ತಪ್ಪಿಗೆ ಅಲೆದಾಡುವಂತಾಗಿದೆ. ಇನ್ನು ಸಾಕಷ್ಟು ಭೂವಿವಾದಗಳು ಇದ ರಿಂದಾಗಿ ಬಾಕಿ ಉಳಿದಿವೆ. ಈ ಕಾರಣದಿಂದ ಹೊಸ ತಂತ್ರಜ್ಞಾನದಲ್ಲಿ ಡ್ರೋನ್‌ ಮತ್ತು ರೋವರ್‌ ಆಧರಿಸಿ ಭೂಮಿಯ ಸಮಗ್ರ ಮರು ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಇದರಿಂದಾಗಿ ರೈತರ ಭೂ ವಿವಾದಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. -ಕೃಷ್ಣಬೈರೇಗೌಡ, ಕಂದಾಯ ಸಚಿವ

– ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.