![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 9, 2022, 12:49 PM IST
ರಾಮನಗರ: ವಿಶ್ವ ಮಹಿಳಾ ದಿನದ ಅಂಗವಾಗಿ ವಂಡರ್‌ಲಾ ಮಹಿಳೆಯರಿಗಾಗಿ ಒಂದು ಟಿಕೆಟ್‌ಗೆ ಮತ್ತೂಂದು ಟಿಕೆಟ್ ಉಚಿತ ಎಂದು ಕೊಡುಗೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ವಂಡರ್ ಲಾದಲ್ಲಿ ನೂಕುನುಗ್ಗಲುವುಂಟಗಿತ್ತು.
ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಮಹಿಳೆಯರು ವಂಡರ್‌ಲಾಕ್ಕೆ ಭೇಟಿ ನೀಡಿದ್ದರು. ನೂರಾರು ಮಂದಿಗೆ ಪ್ರವೇಶ ಅವಕಾಶ ಸಿಗದಿದ್ದರಿಂದ ಅವರೆಲ್ಲ ವಂಡರ್‌ಲಾದ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಮಾರ್ಚ್ 8 ಮಂಗಳವಾರ ವಂಡರ್‌ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿತ್ತು. ಒಂದು ಟಿಕೆಟ್‌ಗೆ ಮತ್ತೂಂದು ಟಿಕೆಟ್ ಉಚಿತ ಎಂದು ವಂಡರ್‌ಲಾ ಘೋಷಿಸಿತ್ತು. ವಂಡರ್ ಲಾದಲ್ಲಿ ಒಂದು ದಿನಕ್ಕೆ 5 ಸಾವಿರ ಮಂದಿಗೆ ಪ್ರವೇಶ ಕಲ್ಪಿಸುವ ವ್ಯವಸ್ಥೆ ಇದೆ. ಆದರೆ, ಮಂಗಳವಾರ ಈಸಂಖ್ಯೆಗೂ ಮೀರಿ ಮಹಿಳೆಯರು ವಂಡರ್‌ಲಾದ ಮುಂದೆ ಜಮಾಯಿಸಿದ್ದರು. 1500 ಮಂದಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಉಳಿದವರು ನೇರ ಟಿಕೆಟ್ ಖರೀದಿಸಿ ಪ್ರವೇಶಕ್ಕಾಗಿ ಬಂದಿದ್ದರು. 5 ಸಾವಿರ ಮಂದಿಗೆ ಪ್ರವೇಶ ಕಲ್ಪಿಸುತ್ತಿದ್ದಂತೆ ವಂಡರ್‌ಲಾದ ಸಿಬ್ಬಂದಿ ಪ್ರವೇಶವನ್ನು ನಿಲ್ಲಿಸಿದರು. ಹೀಗಾಗಿ ಉಳಿದ ಮಹಿಳೆಯರು ವಂಡರ್‌ಲಾದ ಸಿಬ್ಬಂದಿಯ ವಿರುದ್ದ ತಿರುಗಿ ಬಿದ್ದರು.
ಕುಪಿತಗೊಂಡಿದ್ದ ಮಹಿಳೆಯರನ್ನು ಸಮಾಧಾನಪಡಿಸಲು ಪೊಲೀಸರು ಮತ್ತು ವಂಡರ್‌ಲಾದಸಿಬ್ಬಂದಿ ಹೈರಾಣಾದರು. ಪ್ರವೇಶ ಸಿಗದ ಮಹಿಳೆಯರು ಶಾಪ ಹಾಕಿದರು, ಪ್ರವೇಶ ಪಡೆದ ಮಹಿಳೆಯರು ವಂಡರ್‌ಲಾದಲ್ಲಿದ್ದ ರೈಡ್‌ಗಳಲ್ಲಿ ಭಾಗವಹಿಸಿ ಮಹಿಳಾ ದಿನವನ್ನು ಆಚರಿಸಿಕೊಂಡರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
You seem to have an Ad Blocker on.
To continue reading, please turn it off or whitelist Udayavani.