ವಂಡರ್‌ಲಾ ಪರಿಸರ, ಇಂಧನ ಸಂರಕ್ಷಣಾ ಪ್ರಶಸ್ತಿ ಪ್ರದಾನ
Team Udayavani, Feb 17, 2019, 12:45 AM IST
ರಾಮನಗರ: ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ, ಪರಿಸರದ ಕೊಡುಗೆಗಳಾದ ನೀರು, ಗಾಳಿ, ಭೂಮಿ ಮಲೀನಗೊಳ್ಳುತ್ತಿದೆ.
ಇವುಗಳಿಲ್ಲದಿದ್ದರೆ ಜೀವಕುಲ ನಾಶವಾಗುತ್ತದೆ. ಮಾಲಿನ್ಯ ತಡೆಯಲು ಈಗಿನ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಂಡರ್‌ಲಾದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ಹೇಳಿದರು.
ತಾಲೂಕಿನ ಬಿಡದಿ ಹೋಬಳಿಯಲ್ಲಿರುವ ವಂಡರ್‌ಲಾ ಹಾಲಿಡೇಸ್‌ನಲ್ಲಿ ನಡೆದ 2018ನೇ ಸಾಲಿನ ವಂಡರ್‌ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿ(ವೀಕಾ-2018) ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಾಳಿ, ನೀರು ಉಚಿತವಾಗಿ ಸಿಗುತ್ತಿತ್ತು. ಹೀಗಾಗಿಯೇ ಮಾನವರು ಅದನ್ನು ನಿರ್ಲಕ್ಷಿಸಿದರು.ಇಂದು ಇವು ಮಲಿನಗೊಂಡಿವೆ. ನೀರಿಗೆ ಇಂದು ದುಡ್ಡು ಕೊಟ್ಟು ಕೊಳ್ಳುವ ಪರಿಸ್ಥಿತಿ ಒದಗಿದೆ ಎಂದು ವಿಷಾದಿಸಿದರು. ದಕ್ಷಿಣ ಆಫ್ರಿಕಾದ ಪ್ರಾಂತ್ಯವೊಂದರ ನಾಗರಿಕರಿಗೆ ಇಂತಿಷ್ಠೆ ನೀರು ಬಳಸಿಕೊಳ್ಳಬೇಕೆಂಬ ನಿಯಮ ಜಾರಿಯಾಗಿದ್ದನ್ನು ಅವರು ನೆನಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ “ಮಿಸ್ ಯೂನಿವರ್ಸ್ ಇಂಡಿಯಾ-2016′ ರೋಶ್ಮಿತಾ ಹರಿಮೂರ್ತಿ ಮಾತನಾಡಿ,
ಪರಿಸರ ಉಳಿಸುವುದರ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳೋಣ ಎಂದು ಕರೆ ನೀಡಿದರು. ವಂಡರ್‌ಲಾದ ಸಲಹೆಗಾರ ರಾಜಗೋಪಾಲನ್ ಮಾತನಾಡಿ, ತೀವ್ರಗತಿಯಲ್ಲಿ ಸಾಗುತ್ತಿರುವ ನಗರೀಕರಣ,ವಿವೇಚನೆ ಇಲ್ಲದೆ ಮರಗಳನ್ನು ಕಡಿಯುತ್ತಿರುವುದು ಪರಿಸರ ವಿನಾಶಕ್ಕೆ ಮುನ್ನುಡಿ ಬರೆದಿವೆ. ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ಜಳ ಆರಂಭವಾಗಿದೆ. ಅಂದರೆ ಮಾನವರು ಇದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ನಿಕೋಲಸ್ ಜಿರಾಲ್ಡ್ ಕಾರ್ಯಕ್ರಮ ನಿರೂಪಿಸಿದರು.ಮಾರ್ಕೆಟಿಂಗ್ ವಿಭಾಗದ ಬಾಲಕೃಷ್ಣ ವಂದಿಸಿದರು.
ಪ್ರಶಸ್ತಿ ವಿಜೇತರು
ವೀಕಾ-2018 ಪ್ರಶಸ್ತಿ ವಿಜೇತ ಶಾಲೆಗಳಿಗೆ “ಮಿಸ್ ಯೂನಿವರ್ಸ್ ಇಂಡಿಯಾ-2016′ ರೋಶ್ಮಿತಾ ಹರಿಮೂರ್ತಿ ಪ್ರಶಸ್ತಿ ವಿತರಿಸಿದರು.ಪ್ರಥಮ ಬಹುಮಾನ ತಮಿಳುನಾಡಿನ ಹೊಸೂರಿನ ಮಹರ್ಷಿ ವಿದ್ಯಾಮಂದಿರ ಸೆಕೆಂಡರಿ ಶಾಲೆಗೆ ದೊರಕಿದೆ. 50 ಸಾವಿರ ನಗದು ಬಹಮಾನವನ್ನು ಈ ಶಾಲೆ ಪಡೆದುಕೊಂಡಿದೆ. ದ್ವಿತೀಯ ಬಹುಮಾನ ದಕ್ಷಿಣ ಕನ್ನಡದ ಶ್ರೀ ಸತ್ಯಸಾಯಿ ಲೋಕ ಸೇವಾ ಶಾಲೆ ಹಾಗೂ ಬೆಂಗಳೂರಿನ ಸಾತನೂರು ಗ್ರಾಮದ ದೆಹಲಿ ಪಬ್ಲಿಕ್ ಶಾಲೆಯ ಪಾಲಾಗಿವೆ.
ಈ ಶಾಲೆಗಳು ತಲಾ 25 ಸಾವಿರ ರೂ.ಬಹುಮಾನವನ್ನು ತನ್ನದಾಗಿಸಿಕೊಂಡಿವೆ. ತೃತೀಯ ಬಹುಮಾನವನ್ನು ಗದಗ
ಜಿಲ್ಲೆಯ ಗೋಜನೂರಿನ ಸರ್ಕಾರಿ ಪ್ರೌಢಶಾಲೆಗೆ, ದಾವಣಗೆರೆಯ ಅನ್ಮೋಲ್ ಪಬ್ಲಿಕ್ ಶಾಲೆ, ಬೆಂಗಳೂರಿನ ಕ್ರೈಸ್ಟ್ ಧರ್ಮಾರಾಮ್ ಶಾಲೆ ಪಡೆದುಕೊಂಡಿದ್ದು, ಈ ಮೂರು ಶಾಲೆಗಳಿಗೆ ತಲಾ 15 ಸಾವಿರ ರೂ.ನಗದು ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.