ಕಾರ್ಮಿಕರು ನಾಡಿನ ಅಭಿವೃದ್ಧಿಯ ಶ್ರಮಿಕರು
Team Udayavani, Nov 7, 2022, 2:48 PM IST
ಮಾಗಡಿ: ಲಾರಿ ಚಾಲಕರು, ಕಾರ್ಮಿಕರು ಈ ನಾಡಿನ ಅಭಿವೃದ್ಧಿಯ ಶ್ರಮಿಕರು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ತಾಲೂಕಿನ ಸೋಲೂರು ಬಿಪಿಸಿಎಲ್ ಗ್ಯಾಸ್ ಪ್ಲಾಂಟ್ ಬಳಿ ಜೈಮಾರುತಿ ಕನ್ನಡ ಲಾರಿ ಚಾಲಕರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯಿಂದ ಸಾಧನೆ ಮಾಡಬಹುದು. ಸಂಘಟಿತರಾಗಿ ರಾಜ್ಯೋತ್ಸವ ಆಚರಣೆ ಅರ್ಥ ಪೂರ್ಣ ಆಗಿದೆ. ಬೆವರಿನ ದುಡಿಮೆ, ಸಂಪಾದಿಸಿದ ಹಣದಿಂದ ತಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು. ಸ್ವಾಭಿಮಾನದ ದುಡಿಮೆ ಇರಲಿ. ಇದರಲ್ಲಿ ಕೀಳರಿಮೆ ಬೇಡ. ವಿದ್ಯೆಗೆ ಬೆಲೆ ಕೊಡಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತ ರನ್ನಾಗಿಸಿ ಜೀವನದಲ್ಲಿ ಸಂತೋಷ ಪಡಬೇಕು ಎಂದು ಹೇಳಿದರು.
ಜನತೆಗೆ ಚಿರಋಣಿ: ನಾನು ಕೂಡ ಜೀಪ್ ಚಾಲಕ ಮಗ. ನಮ್ಮ ತಂದೆ ನನಗೆ ವಿದ್ಯೆ ಕೊಡಿಸಿದಕ್ಕೆ ನಾನು ಮಾಗಡಿ ಜನರ ಹಾಗೂ ಶ್ರೀರಂಗನಾಥಸ್ವಾಮಿ ಆಶೀರ್ವಾದದಿಂದ ಪುರಸಭಾಧ್ಯಕ್ಷನಾದೆ. ಅನಂತರ ಶಾಸಕನಾಗಿ, 3 ಬಾರಿ ಸಚಿವನಾಗಿ, ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯರಾಗಿ ರಾಷ್ಟ್ರಮಟ್ಟದ ನಾಯಕನಾಗಿ ಬೆಳೆಯಲು ಅವಕಾಶ ದೊರಕಿಸಿಕೊಟ್ಟ ಮಹಾಜನತೆಗೆ ಚಿರಋಣಿಯಾಗಿದ್ದೇನೆ ಎಂದರು.
ಅಭಿನಂದನೆ ಸಮಾರಂಭ: ದೇಶದ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಿರಿಯ ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಕ್ಕಿರುವುದು ಕರ್ನಾಟಕದ ಹಿರಿಮೆ ಎನಿಸಿದೆ. ಅವರಿಗೆ ರಾಜ್ಯದಿಂದ ಅಭಿನಂದನೆ ಸಮಾರಂಭ ಏರ್ಪಡಿಸಿದ್ದು, ಹೆಮ್ಮೆಯ ಸಂಗತಿ ಎಂದರು.
ಸಾಹಿತಿಗಳಿಂದ ಕನ್ನಡ ಭಾಷೆ ಶ್ರೀಮಂತ: ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಕರ್ನಾಟದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ರಾಷ್ಟ್ರಿಯ ಸ್ಥಾನಮಾನವೂ ಸಿಕ್ಕಿದರೂ, ಸಹ ಕನ್ನಡದಲ್ಲಿ ಆಡಳಿತ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲಗೊಂಡಿವೆ. ಕನ್ನಡ ಸಂಘ, ಸಂಸ್ಥೆಗಳು, ಕಾರ್ಮಿಕರು, ಆಟೋ, ಲಾರಿ ಚಾಲಕರಿಂದ ಹಾಗೂ ಸಾಹಿತಿಗಳಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದರು.
ಭಾಷೆಗೆ ಗೌರವ ಕೊಡಿ: ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಗೌರವ ಕೊಡುವ ಕೆಲಸ ಆಗಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಗೌರವಸಿಗುವಂತ ಕೆಲಸವನ್ನು ಸರ್ಕಾರ ಕ್ರಮ ವಹಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಕನ್ನಡಿಗರ ಏಳಿಗೆಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ರಮೇಶ್, ಇಪ್ರಾನ್, ಕುದೂರು ಮುನಿಯಪ್ಪ, ಶಂಕರಪ್ಪ, ಸುನೀಲ್, ಆದೀರು, ಅರವಿಂದ್ ಸಿಂಗ್, ಸ್ವಾಮಿ, ಉಮೇಶ್, ಕೆ.ಪಿ. ರಮೇಶ್, ಸೋಲೂರು ಗ್ರಾಪಂ ಮಾಜಿ ಅಧ್ಯಕ್ಷ ಶರ್ಮ, ರಾಘವೇಂದ್ರ, ಯುವ ಮುಖಂಡ ದೇವೇಂದ್ರಕುಮಾರ್, ಬಿಜೆಪಿ ಮುಖಂಡ ನಾಗಶರ್ಮ, ಗೋಪಾಲ್ ಹಾಗೂ ಇತರರು ಇದ್ದರು.
ಆಲೂರು ವೆಂಕಟರಾಯರ ಹೋರಾಟ ಅವಿಸ್ಮರಣೆ: ಲಾರಿ ಚಾಲಕರು, ಕಾರ್ಮಿಕರು ಕರ್ನಾಟಕ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಕಟ್ಟುವಲ್ಲಿ ಆಲೂರು ವೆಂಕಟರಾಯರ ಹೋರಾಟ ಅವಿಸ್ಮರಣೆಯವಾದುದ್ದು. ಮೈಸೂರು ರಾಜ್ಯವಾಗಿದ್ದ ಕರುನಾಡನ್ನು ಮುಖ್ಯಮಂತ್ರಿ ಯಾಗಿದ್ದ ಡಿ.ದೇವರಾಜ ಅರಸು ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡದಲ್ಲಿಯೇ ಆಡಳಿತ ನಡೆಸಿದ ಧೀಮಂತ ನಾಯಕ. ನನ್ನ ರಾಜಕೀಯ ಗುರುಗಳಾದ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯಿಲಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡದಲ್ಲೇ ಸಹಿ ಮಾಡಿ ಆಡಳಿತ ನಡೆಸಿದರು ಎಂದು ಮಾಜಿ ಸಚಿವ ಎಚ್. ಎಂ.ರೇವಣ್ಣ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.