ಸದೃಢ ಸಮಾಜಕ್ಕೆ ಮಹಿಳೆ ಕೊಡುಗೆ ಅಪಾರ
Team Udayavani, Mar 13, 2021, 12:13 PM IST
ಚನ್ನಪಟ್ಟಣ: ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಬೆಳವಣಿಗೆ ಹೊಂದಿ ಸಮಾ ಜದ ಕೈಗನ್ನಡಿಯಾಗಬೇಕು ಎಂದು ಕೋಡಂಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಜಿ.ಎಂ.ಮಮತಾ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾದಿನಾಚರಣೆ, ಕೌಟುಂಬಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಮ್ಮ ನಾಡು ನಾರಿಯರನ್ನುಪೂಜಿಸುವಂತಹ ನಾಡು. ಆದರೆ, ಇತ್ತೀಚಿನದಿನಗಳಲ್ಲಿ ಪರಸ್ಥಿತಿ ಬದಲಾಗಿರುವುದು ವಿಷಾದನೀಯ. ಪುರುಷ ಪ್ರಧಾನ ಸಮಾಜಕ್ಕೆ ಮಹಿಳೆಯರ ಬಗ್ಗೆ ಇರುವ ಮನೋಬಾವ ಬದಲಾಗಬೇಕು. ಪುರುಷರು ಮಹಿಳೆಯರನ್ನುಪ್ರೋತ್ಸಾಹಿಸಿ ಸಹಕಾರ ನೀಡಿದಲ್ಲಿ ಮಹಿಳೆಯರುಸಾಧನೆಯ ಶಿಖರವೇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾ.ವಿ.ಪ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಭಾರತೀಯ ಮಹಿಳೆ ಇಡೀವಿಶ್ವದಲ್ಲಿಯೇ ಪೂಜನೀಯಳು. ದೇಶ ರಕ್ಷಿಸುವಲ್ಲಿ ವೀರಾಘ್ರಣಿಯಾಗಿ, ಜನಹಿತ ತೋರುವಲ್ಲಿ ಸಮಾಜಸುಧಾರಕಳಾಗಿ, ಮನೆಯ ಹಿತಕೋರುವ ನಾರಿಯಾಗಿ, ಜಗದ ಬೆಳಕಾದ ಹೆಣ್ಣು ಅರ್ಥಪೂರ್ಣ ಬದುಕು ಸಾಗಿಸಿದ್ದಾಳೆ. ಅನ್ಯದೇಶೀಯರದಾಳಿಯಿಂದ ಅಜಾnತ ಬದುಕು ನಡೆಸಿದ ಹೆಣ್ಣು ಸ್ವಾತಂತ್ರ್ಯ ನಂತರ ರಾಷ್ಟ್ರದ ಪ್ರಧಾನಿಯಾಗಿ, ವೈದ್ಯಳಾಗಿ, ಗುರುಮಾತೆಯಾಗಿ, ದೇಶಕಾಯುವ ಸೈನಿಕಳಾಗಿ ರಾಜಕೀಯರಂಗದಲ್ಲಿ ನಾಯಕಿಯಾಗಿ ವಿಜೃಂಭಿಸುತ್ತಿದ್ದಾಳೆ ಎಂದರು.
ಸಾಧಕಿ, ವಿಶೇಷ ಅಗತ್ಯವುಳ್ಳ ಮಹಿಳೆ ಬಿ. ಚಂದ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಶೈಲಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಭಾಗ್ಯ ಚಂದ್ರೇಗೌಡ, ಸಮಾಜ ಸೇವಕಿ ಸೌಭಾಗ್ಯ,ಸಾರ್ವಜನಿಕ ಒಕ್ಕಲಿಗರ ವಿದ್ಯಾರ್ಥಿ ನಿಲಯದನಿರ್ದೇಶಕಿ ಮಾಲಿನಿ, ರಾಜ್ಯ ಲೆಕ್ಕಪತ್ರ ಇಲಾಖೆನಿವೃತ್ತ ಉಪ ನಿರೀಕ್ಷಕ ಬೈರನಾಯಕನಹಳ್ಳಿ ರಾಮಚಂದ್ರು, ಭಾವಿಪ ಕೋಶಾಧ್ಯಕ್ಷ ಕೆ.ತಿಪ್ರೇಗೌಡ, ಕಾರ್ಯದರ್ಶಿ ಬಿ.ಎನ್.ಕಾಡಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.